May 21, 2024

Bhavana Tv

Its Your Channel

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿಯವರನ್ನ ಭೇಟಿಯಾಗಿ ಆಶೀರ್ವಾದ ಪಡೆದರು.

ಇದೇವೇಳೆ ನಿಶ್ಚಲಾನಂದನಾಥರು, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು, ಉತ್ತರ ಕನ್ನಡ ಮತ್ತು ಶಿವಮೊಗ್ಗ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿಯವರೊಂದಿಗೆ ದೂರವಾಣಿ ಕರೆ ಮಾಡಿ ಡಾ.ಅಂಜಲಿ ಅವರಿಗೆ ನೀಡಿದರು. ಅವರೊಂದಿಗೂ ಮಾತನಾಡಿದ ಡಾ.ನಿಂಬಾಳ್ಕರ್, ಅವರ ಆಶೀರ್ವಾದವನ್ನೂ ಕೇಳಿದರು.

ಬಳಿಕ ಕೆಲ ಹೊತ್ತು ನಿಶ್ಚಲಾನಂದನಾಥರು ಡಾ.ಅಂಜಲಿ ಹಾಗೂ ಇತರ ಕಾಂಗ್ರೆಸ್ ಮುಖಂಡರೊAದಿಗೆ ಚರ್ಚೆ ನಡೆಸಿದರು. ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ಕುರಿತು ಹಾಗೂ ಕಾಂಗ್ರೆಸ್ ಪ್ರಚಾರದ ವೈಖರಿಗಳ ಬಗ್ಗೆ ಮಾಹಿತಿ ಪಡೆದರು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಡಾ.ಅಂಜಲಿ ಅವರಿಗೆ ಸೂಚಿಸಿದ ಸ್ವಾಮೀಜಿಯವರು, ಎಲ್ಲರೂ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಗ್ಯಾರಂಟಿ ಯೋಜನೆ ಬಗ್ಗೆ ಜನರಲ್ಲಿರುವ ಉತ್ತಮ ಅಭಿಪ್ರಾಯಗಳ ಬಗ್ಗೆಯೂ ಸ್ವಾಮೀಜಿಯವರು ಮಾತನಾಡಿದರು. ಶಾಲು ಹೊದಿಸಿ ಸನ್ಮಾನಿಸಿ, ಉಡಿ- ಪ್ರಸಾದ ನೀಡಿ ಅನುಗ್ರಹಿಸಿದರು. ತಮ್ಮ ಸೇವೆ ಎಲ್ಲಾ ಜನಕ್ಕೂ ಸಿಗುವಂತಾಗಲಿ ಎಂದು ಆಶೀರ್ವದಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಪ್ರಮುಖರಾದ ಭಾಸ್ಕರ್ ಪಟಗಾರ, ಪ್ರದೀಪ್ ನಾಯಕ ದೇವರಬಾವಿ, ಭುವನ್ ಭಾಗ್ವತ್, ಸತೀಶ್ ನಾಯ್ಕ, ಗೋಪಾಲಕೃಷ್ಣ ನಾಯಕ ಮುಂತಾದವರಿದ್ದರು.

error: