
ಸ್ಥಳೀಯರಿಂದ ಸೆರೆ ಹಿಡಿದು ಅರಣ್ಯ ಇಲಾಗೆಗೆ ಒಪ್ಪಿಸಲಾಗಿದೆ
ಭಟ್ಕಳ: ಮನೆಯ ಕಟ್ಟಿಗೆ ಸಂಗ್ರಹಿಸಿಡುವ ಶೆಡ್ ವೊಂದರಲ್ಲಿ ಬೃಹತ್ ಆಕಾರದ ಹೆಬ್ಬಾವೊಂದು ಪ್ರತ್ಯೇಕ್ಷವಾಗಿ ಕೆಲ ಕಾಲ ಮನೆಯವರಿಗೆ ಹಾಗೂ ಅಲ್ಲಿನ ಸ್ಥಳೀಯರಿಗೆ ಆತಂಕ ಸೃಷ್ಟಿಸಿದ ಘಟನೆ ತಾಲೂಕಿನ ಆಸರಕೇರಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.ಆಸರಕೇರಿ ನಿವಾಸಿ ಶನಿಯಾರ ನಾಯ್ಕ ಪೈಕಿಮನೆಯ ಹಿಂಭಾಗದಲ್ಲಿ ಕೂಡಿಟ್ಟ ಕಟ್ಟಿಗೆ ಸಂಗ್ರಹಿಸಿಡುವ ಶೆಡ್ ನಲ್ಲಿ ಬ್ರಹತ್ ಆಕಾರದ ಹೆಬ್ಬಾವೊಂದು ಇರುವುದನ್ನು ನೋಡಿದ ಮನೆಯ ಮಹಿಳೆ ಒಮ್ಮೆ ಭಯಭೀತರಾಗಿದ್ದಾರೆ .ನಂತರ ಅಲ್ಲಿನ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು ರಾಜೇಶ ನಾಯ್ಕ ಹಾಗೂ ಆಸರಕೇರಿಯ ಯುವಕರ ಸಹಾಯದಿಂದ ಸೇರಿ ಹಿಡಿದು ಹೆಬ್ಬಾವನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ