December 22, 2024

Bhavana Tv

Its Your Channel

ಡಾ|| ಅನುರಾಧ ರವರಿಗೆ “ಅತ್ಯುತ್ತಮ ಸಾಧಕರು” ಪ್ರಶಸ್ತಿ

ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ ದಂತ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ|| ಅನುರಾಧ ರವರಿಗೆ ಅತ್ಯುತ್ಯಮ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಅತ್ಯುತ್ತಮ ಸಾಧಕರು (“Outstanding Achievement Award”) ಲಭಿಸಿದೆ. ರಾಜ್ಯ ಮಟ್ಟದಲ್ಲಿ ಸರ್ಕಾರಿ ಸೇವೆಯಲ್ಲಿರುವ ದಂತ ವೈದ್ಯರುಗಳಲ್ಲಿ ಒಟ್ಟು ಏಂಟು ಮಂದಿ ದಂತ ವೈದ್ಯರನ್ನು “ಅತ್ಯುತ್ತಮ ಸಾಧಕರು” ಎಂದು ಗುರುತಿಸಲಾಗಿದ್ದು ಅವರಲ್ಲಿ ಡಾ|| ಅನುರಾಧರವರು ಒಬ್ಬರಾಗಿರುವುದು ತಾಲೂಕಾ ಆಸ್ಪತ್ರೆ ಹೊನ್ನಾವರಕ್ಕೆ, ಜಿಲ್ಲೆಯ ಆರೋಗ್ಯ ಇಲಾಖೆಗೆ ಹೆಮ್ಮೆ ತರುವ ವಿಷಯವಾಗಿದೆ.

ಇತ್ತೀಚ್ಚಿಗೆ ರಾಜ್ಯ ಆರೋಗ್ಯ ಇಲಾಖೆ ವತಿಯಿಂದ ಧಾರವಾಡದಲ್ಲಿ ನಡೆದ “ರಾಜ್ಯ ಮಟ್ಟದ ದಂತ ವೈದ್ಯಾಧಿಕಾರಿಗಳ ಸಮ್ಮೇಳನ – ದಂತ ಮಂಥನ “ ಕಾರ್ಯಕ್ರಮದಲ್ಲಿ ಡಾ ಅನುರಾಧ ರವರಿಗೆ “ಅತ್ಯುತ್ತಮ ಸಾಧಕರು” ಪ್ರಶಸ್ತಿ ನೀಡಿ ಗೌರವಿಸಲಾಯಿತು ಪ್ರಶಸ್ತಿ ಪಡೆದ ಡಾ|| ಅನುರಾಧರವರನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾ ಡಾ|| ರಾಜೇಶ ಕಿಣಿ ಸೇರಿದಂತೆ ಎಲ್ಲ ವೈದ್ಯಾಧಿಕಾರಿಗಳು, ಮತ್ತು ಆಸ್ಪತ್ರೆಯ ಸಿಬ್ಬಂಧಿಗಳು, ಮತ್ತು ಆರೋಗ್ಯ ಇಲಾಖೆಯ ನೌಕರರ ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಶೇಖರ ಕಳಸ ರವರು ಅಭಿನಂದನೆ ತಿಳಿಸಿದ್ದಾರೆ.

error: