July 14, 2024

Bhavana Tv

Its Your Channel

ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ನೇಮಕಗೊಂಡ ಬೆನ್ನಲ್ಲೆ ಹೊನ್ನಾವರದಲ್ಲಿ ಪಕ್ಷದ ನಿಷ್ಟರಿಂದ ವ್ಯಕ್ತವಾಯ್ತು ಅಸಮಧಾನ ಹೊಗೆ

ಗುರುವಾರ ಜಿಲ್ಲಾಧ್ಯಕ್ಚ ವೆಂಕಟೇಶ ನಾಯಕ ಶಿರಸಿಯಲ್ಲಿ ಪತ್ರಿಕಾಗೊಷ್ಟಿಯಲ್ಲಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಡಿದ ಹಿನ್ನಲೆಯಲ್ಲಿ ಪಕ್ಷದ ಪ್ರಮುಖ ಹುದ್ದೆಗಳು ಹೊನ್ನವರದವರಿಗೆ ಕೈ ತಪ್ಪಿದ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ದಿನ ಬಿಜೆಪಿ ಪಕ್ಷ ಹೊನ್ನಾವರ ಕಡೆಗಣೆಸಿದೆ ಎನ್ನುವ ಸಾರ್ವಜನಿಕರ ಅರೋಪಕ್ಕೆ ಸಾಕ್ಷಿಯೆನ್ನುವಂತೆ ೩ ಹುದ್ದೆ ಹೊರತುಪಡಿಸಿ ಬೇರೆ ಯಾವ ಪ್ರಮುಖ ಹುದ್ದೆಗೂ ತಾಲೂಕಿನ ಕಾರ್ಯಕರ್ತರ ನೇಮಕ ಮಾಡದೇ ಇರುದಕ್ಕೆ ಪಕ್ಷದ ಆತಂರಿಕವಲಯದಿAದ ಆಕ್ರೋಶ ವ್ಯಕ್ತವಾಗುತ್ತಿದೆ. ಕಳೆದ ವಿಧಾನಸಭಾ ಚುನವಣೆಯಲ್ಲಿ ಹೊನ್ನಾವರದ ಘಟನೆಯ ಲಾಭ ಪಡೆದ ಪಕ್ಷ ಈಗ ತಾಲೂಕನ್ನೆ ನಿಲಕ್ಷ ಮಾಡಿದೆ. ತಾಲೂಕಿನಲ್ಲಿ ಹಲವು ಹುದ್ದೆಗೆ ಸಾಕಷ್ಟು ಕಾರ್ಯಕರ್ತರು ಆಕಾಂಕ್ಷಿಗಳಾಗಿದ್ದರು ಹೊನ್ನಾವರ ತಾಲೂಕು ಎರಡು ಕ್ಷೇತ್ರವನ್ನು ಒಳಗೊಂಡಿದ್ದರೂ ಈ ಹಿಂದಿನಿAದಲೂ ಒಂದೇ ಪಕ್ಷದ ಶಾಸಕರಿದ್ದರು ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ಆದರೆ ಈಗ ಹೊಂದಾಣಿಕೆಯಿAದ ಇದ್ದೇವೆ ಎಂದರೂ ಕಾರ್ಯಕರ್ತರಿಗೆ ಮಾತ್ರ ಸಮಪಾಲು ಸಿಗುತ್ತಿಲ್ಲ ಮಂಕಿ, ಮಾವಿನಕುರ್ವಾ ಹಾಗೂ ಹೊನ್ನಾವರ ಹೋಬಳಿಯಲ್ಲಿ ಮಂಕಿ ಮತ್ತು ಮಾವಿನಕುರ್ವಾ ಹೋಬಳಿಯ ೧೯ ಗ್ರಾಮಪಂಚಾಯತ್ ಹಾಗೂ ಮುಗ್ವಾ ಪಂಚಾಯತ ಭಾಗಶ: ಭಟ್ಕಳ ವಿಧಾನಸಭಾ ವ್ಯಾಪ್ತಿಗೆ ಒಳಪಟಡುತ್ತದೆ. ಹೊನ್ನಾವರ ಹೋಬಳಿಯ ಕೇವಲ ೮ ಗ್ರಾಮಪಂಚಾಯತಗಳು ಹಾಗೂ ಒಂದು ಪಟ್ಟಣ ಪಂಚಾಯತ್ ಮತ್ತು ಮುಗ್ವಾ ಗ್ರಾಮಪಂಚಾಯತದ ಇನ್ನು ಅರ್ದ ಭಾಗ ಮಾತ್ರ ಕುಮಟಾ ವಿಧಾನಸಭಾ ಕ್ಷೇತ್ರಕ್ಕೆ ಸೇರಿಕೊಂಡಿದೆ. ಎರಡೂ ಕ್ಷೇತ್ರದಲ್ಲಿಯೂ ಬಿಜೆಪಿಯ ಶಾಸಕರುಗಳೇ ಇದ್ದಾರೆ. ಆದರೆ ಕುಮಟಾ ವಿಧಾನಸಭಾ ವ್ಯಾಪ್ತಿಯವರಿಗೆ ಬಿಜೆಪಿಯ ತಾಲೂಕಾಧ್ಯಕ್ಷ ಹುದ್ದೆ ಒಲಿದ ಬೆನ್ನಲ್ಲಿಯೇ ಜಿಲ್ಲಾ ಪದಾಧಿಕಾರಿಗಳ ನೇಮಕದಲ್ಲಿಯೂ ತಾಲೂಕಿನಿಂದ ನೇಮಕವಾದ ವೆಂಕಟ್ರಮಣ ಹೆಗಡೆ, ಭಾಗ್ಯಾ ಲೋಕೇಶ ಮೇಸ್ತ, ಹಾಗೂ ಎನ್.ಎಸ್.ಹೆಗಡೆ ಮೂವರೂ ಕುಮಟಾ ಕ್ಷೇತ್ರ ವ್ಯಾಪ್ತಿಯವರೇ ಆಗಿರುವುದು ಅಚ್ಚರಿ ಮೂಡಿಸಿದೆ.
ಶಾಸಕ ಸುನೀಲ ನಾಯ್ಕ ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾವರ ವರವಾಗಿದ್ದು ಅದರಲ್ಲೂ ಹೊಳೆಸಾಲು ತೀರ ಇವರಿಗೆ ಮತಗಳು ಹೊಳೆ ನೀರಿನಂತೆ ಅಬ್ಬರಿಸಿದ್ದವು ಇದೇ ಗೆಲುವಿಗೆ ಮೂಲ ಕಾರಣ ಅದಕ್ಕೆ ಪರಿಶ್ರಮ ತೋರಿದವರು ಪಕ್ಷದ ಕಾರ್ಯಕರ್ತರು ಎನ್ನುವ ಸತ್ಯ ಒಪ್ಪಲೇ ಬೇಕು. ಇತ್ತಿಚೀಗೆ ಅಷ್ಟೆ ಶಾಸಕ ಸುನೀಲ ಪತ್ರಿಕಾಗೊಷ್ಟಿ ನಡೆಸಿ ಹೊನ್ನಾವರ ಭಟ್ಕಳ ಸಮಾನವಾಗಿ ಅನುದಾನ ತಂದಿದ್ದೇನೆ ಎಂದು ಗಂಟಾಘೋಷವಾಗಿ ಹೇಳಿದ್ದರು ಆದರೆ ಅನುದಾನ ತಂದವರು ಕ್ಷೇತ್ರದ ಕಾರ್ಯಕರ್ತರಿಗೆ ಜವಾಬ್ದಾರಿ ಹಂಚಲು ವಿಫಲರಾದರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಜಿಲ್ಲಾ ಪದಾಧಿಕಾರಿಗಳಲ್ಲಿ ಭಟ್ಕಳಕ್ಕೆ ನಾಲ್ಕು ಪ್ರಮುಖ ಸ್ಥಾನ ದಕ್ಕಿದರೂ ಶಾಸಕರ ಹೊನ್ನಾವರ ವ್ಯಾಪ್ತಿಗೆ ಒಂದೇ ಒಂದು ಸ್ಥಾನ ಕೊಡಲು ವಿಫಲರಾಗಿರುವುದು ಶಾಸಕರು ಜಿಲ್ಲಾ ಮಟ್ಟದಲ್ಲಿಯೇ ಪ್ರಭಾವಬೀರಲು ಸಾಧ್ಯವಾಗುತ್ತಿಲ್ಲವಾ ಎನ್ನುವ ಪ್ರಶ್ನೆ ತಲೆದೂರಿದೆ. ಈ ಹಿಂದೆಯೇ ಕಾರ್ಯಕರ್ತರಲ್ಲಿ ಒಡಕು ಮೂಡಿದ್ದು ಚುನಾವಣೆ ಸಮಯದಲ್ಲಿ ನಿಷ್ಟರಾಗಿ ಹಗಲು ರಾತ್ರಿ ದೂಡಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪವಿದೆ. ಹಲವು ಕಾರ್ಯಕರ್ತರು ಈಗಾಗಲೇ ಪಕ್ಷಕ್ಕೆ ನಿಷ್ಟ ಶಾಸಕರ ನಡವಳಿಕೆಯ ವಿರೋಧವನ್ನು ಬಹಿರಂಗವಾಗಿ ಹೊರಹಾಕುತ್ತಿದ್ದಾರೆ. ಈ ಬೆನ್ನಲ್ಲೆ ಶಾಸಕರ ನಿಷ್ಟರಾದವರಿಗೂ ಮನ್ನಣೆ ದೊರಕದೆ ಇರುವುದರಿಂದ ಇವರು ಕೂಡಾ ಅಸಮಧಾನ ತೋರಲು ಪ್ರಾರಂಭಿಸಿದ್ದಾರೆ. ಇನ್ನು ಹೊನ್ನಾವರಕ್ಕೂ ನೀಡಿದ ಹುದ್ದೆ ಈ ಹಿಂದೆ ಇದ್ದವರಿಗೆ ಮುಂದುವರೆಸಿದ್ದು ಹೊಸಬರಿಗೆ ಆದ್ಯತೆ ನೀಡಿಲ್ಲ. ಎಂದು ಪಕ್ಷದ ಕಾರ್ಯಕರ್ತರು ಶಾಸಕರ ಜನ್ಮದಿನದ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿಯೂ ಹೇಳಿಕೊಳ್ಳುತ್ತಿರುದರಿಂದ ಇದು ಹೊನ್ನಾವರದಲ್ಲಿ ಬಿಜೆಪಿ ಪಾಲಿಗೆ ಎಚ್ಚರಿಕೆ ಗಂಟೆಯಾಗಲಿದೆ. ಅಲ್ಲದೇ ಭಟ್ಕಳ ಕ್ಷೇತ್ರ ವ್ಯಾಪ್ತಿಯಲ್ಲಿ ಇದೇ ರೀತಿ ಮುಂದುವರೆದರೆ ಬಿಜೆಪಿಗೆ ಹಿನ್ನಡೆ ಸಂಭವಿಸುವ ಸಾದ್ಯತೆ ದಟ್ಟವಾಗಿದೆ ಎಂದು ಪಕ್ಷದಲ್ಲಿ ೨೦ಕ್ಕು ಅಧಿಕ ವರ್ಷ ಕಾರ್ಯಕರ್ತರಾಗಿ ದುಡಿದವರೇ ಹೇಳುವ ಮಾತಾಗಿದೆ.
ಆವನಾ ಟಿವಿಗಾಗಿ ವಿಶ್ವನಾಥ

ಪಕ್ಷದ ಕಾರ್ಯಕರ್ತರು ಗುಟ್ಟಾಗಿ ತಮ್ಮ ಅಸಮದಾನವನ್ನು ತೋಡಿಕೊಳ್ಳುತ್ತಿದ್ದಾರೆಯೇ ಹೊರತು, ಎಲ್ಲಿಯೂ ಬಹಿರಂಗವಾಗಿ ಹೇಳಿಕೆ ಕೊಡುತ್ತಿಲ್ಲವಾಗಿರುವುದೆ ಬಿಜೆಪಿ ವರಿಷ್ಟರ ಪಾಲಿಗೆ ವರವಾಗಿ ಪರಿಣಮಿಸಿದೆ. ಎಷ್ಟು ದಿನಗಳ ಕಾರೀ ಹಗ್ಗಜಗ್ಗಾಟ ಮುಂದುವರೆಯುತ್ತದೆ ಎಂದು ಮುಂದಿನ ದಿನದಲ್ಲಿ ಕಾದು ನೋಡಬೇಕಿದೆ.
ವಿಶ್ವನಾಥ ಸಾಲ್ಕೋಡ್

error: