ಕುಮುಟಾದಿಂದ ಹೊನ್ನಾವರಕ್ಕೆ ಪೈಪಲೈನ್ ಮೂಲಕ ಸೊರಿಕೆಯಾಗುವ ನೀರನ್ನು ಕೋಣಕಾರ ಭಾಗದವರು ಕೊಡದ ಮೂಲಕ ನೀರನ್ನು ಸಂಗ್ರಹಿಸಿ ಕುಡಿಯಲು ಬಳಸುತ್ತಿದ್ದರು. ಇದನ್ನು ಮನಗಂಡು ಶಾಸಕರ ಗಮನಕ್ಕೆ ತಂದ ಗ್ರಾಮಸ್ಥರು ಈ ಭಾಗದವರ ಸಂಕಷ್ಟ ತಿಳಿಸಿದಾಗ ಸರ್ಕಾರದ ಮಟ್ಟದಲ್ಲಿ ಗಮನಸೆಳೆದು ಜಿಲ್ಲಾ ಪಂಚಾಯತಿಗೆ ೧೦೦ಕೋಟಿ ಅನುದಾನ ಬಿಡುಗಡೆ ಮಾಡಲಾಯಿತು. ಈ ಜಿಲ್ಲಾ ಪಂಚಾಯತ ಸದಸ್ಯರಾದ ಶಿವಾನಂದ ಹೆಗಡೆಯವರು ಇದನ್ನು ಜಿಲ್ಲಾ ಪಂಚಾಯತ ಅನುದಾನದಡಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದು ಇದರನ್ವಯ ಶನಿವಾರ ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಈ ಯೋಜನೆಯಡಿ ಮಂಜೂರಾದ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿದರು. ಯೋಜನೆ ಅಡಿ ಕಿರುಬೈಲ್ ಬಳಿ ಬಾವಿ ನಿರ್ಮಿಸಿ ಸರಿಸುಮಾರು ೧ ಕೀಮೀ ಅಂತರದಲ್ಲಿರುವ ಕೋಣಕಾರ ಹಾಗೂ ಕಿರುಬೈಲು ಗ್ರಾಮದ ಮನೆಗಳಿಗೆ ಕುಡಿಯುವ ನೀರಿನ್ನು ಪೂರೈಕೆಯಾಗಲಿದೆ.
ಈ ಬಗ್ಗೆ ಶಾಸಕ ದಿನಕರ ಶೆಟ್ಟಿ ಮಾತನಾಡಿ ಈ ಹಿಂದಿನಿAದಲೂ ಈ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಕಾರವಿತ್ತು. ಇದನ್ನರಿತು ೧೦೦ಕೋಟಿ ಅನುದಾನ ಜಿಲ್ಲೆಗೆ ಬಂದಿದ್ದು ೨೦ ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯತ ಅನುದಾನದಡಿ ಬಾವಿ ನಿರ್ಮಿಸಿ ಪೈಪಲೈನ್ ಮೂಲಕ ನೀರಿನ ಸರಬರಾಜು ಮಾಡಲಿದ್ದೇವೆ. ಇದರಿಂದ ಎರಡು ಗ್ರಾಮದ ಹಲವು ಮನೆಗಳಿಗೆ ಅನೂಕೂಲವಾಗಲಿದೆ ಎಂದರು.
ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಕೋಣಕಾರ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಯಾವ ರೀತಿ ಇತ್ತು ಎಂದರೆ ಆ ಭಾಗದ ಸಾರ್ವಜನಿಕರು ಕುಮುಟಾದಿಂದ ಹೊನ್ನಾವರಕ್ಕೆ ಹೋಗುವ ಪೈಪನಿಂದ ಸೋರಿಕೆಯಾಗುವ ನೀರನ್ನು ಕೊಡದಲ್ಲಿ ಹಿಡಿದು ಅಡುಗೆ ಮತ್ತು ಕುಡಿಯಲು ಬಳಸುತ್ತಿದ್ದರು. ಈ ಯೋಜನೆ ಜಾರಿಯಾದ ಬಳಿಕ ಈ ಸಮಸ್ಯೆ ದೂರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಕಾಂತ ಮೋಗೇರ, ಗುಣಮಾಲ ಜೈನ್, ಉಪಾಧ್ಯಕ್ಷ ಕಲ್ಪನಾ, ಸದಸ್ಯರಾದ ನಾಗರಾಜ ಮುಕ್ರಿ, ಪೂರ್ಣಿಮಾ ಹೆಗಡೆ, ರತ್ನಾಕರ ನಾಯ್ಕ, ಸತೀಶ, ಗೋವಿಂದ ಜೋಗಿ, ಶಿವಾನಂದ ನಾಯ್ಕ ಉಪಸ್ಥಿತರಿದ್ದರು.
More Stories
ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ
ಅಕ್ರಮವಾಗಿ ಗಾಂಜಾ ಮಾರಾಟ, ಭಟ್ಕಳ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ
ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣೆಯವರು ನಡೆಸಿದ ಅಣಕು ಕಾರ್ಯಾಚರಣೆಯಲ್ಲಿ ಆರು ಜನ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿ