March 13, 2025

Bhavana Tv

Its Your Channel

ಹೊನ್ನಾವರ ಹಾಗೂ ಭಟ್ಕಳ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಯೋಜನೆ

ಭಟ್ಕಳ: ಹೊನ್ನಾವರ ಹಾಗೂ ಭಟ್ಕಳ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಯೋಜನೆಯಡಿ ೧೫೩ ಕೋಟಿ ವೆಚ್ಚದ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ನಡೆಸಿದ ಸಮೀಕ್ಷೆ ಕಾರ್ಯದ ಕುರಿತು ಬೆಂಗಳೂರಿನಲ್ಲಿ ಶಾಸಕ ಸುನೀಲ ನಾಯ್ಕ ಜಲಸಂಪನ್ಮೂಲ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಹೊನ್ನಾವರದಿಂದ ಶಿರಾಲಿವರೆಗೆ ೨೯ ಹಳ್ಳಿಗಳ ೫೨ ಸಾವಿರ ಜನರಿಗೆ ಹಾಗೂ ೩೫ ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ೨೦೫೧ರ ತನಕ ನೀರಿನ ಕೊರತೆ ಆಗದ ರೀತಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಯೋಜನೆ ಅನುಷ್ಠಾನಕ್ಕೆ ಸಮೀಕ್ಷೆ ನಡೆಸಲು ೫೦ ಲಕ್ಷ ಅನುದಾನ ನೀಡಲಾಗಿತ್ತು. ಅಗತ್ಯ ಇರುವೆಡೆ ನೀರಿನ ಸಂಗ್ರಹಣೆ ಹಾಗೂ ಸರಬರಾಜು ಮಾಡಲು ಸಮೀಕ್ಷೆ ನಡೆಸಿದ ಅಧಿಕಾರಿಗಳು ಬೆಂಗಳೂರಿನಲ್ಲಿ ಶಾಸಕರಿಗೆ ಯೋಜನೆ ರೂಪರೇಷೆ ಬಗ್ಗೆ ಮಾಹಿತಿ ನೀಡಿದರು.
ಅರಣ್ಯ ಹಾಗೂ ಮಾಲ್ಕಿ ಜಾಗದಲ್ಲಿ ಪೈಪ್‌ನಲ್ಲಿ ಹಾದು ಹೋಗುವಾಗ ಎದುರಾಗುವ ಆಕ್ಷೇಪಣೆಗಳ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದಾಗ, ಶಾಸಕರು ತಾವು ಖುದ್ದು ಜಾಗ ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ೨೯ ಹಳ್ಳಿಗಳಲ್ಲಿ ಇರುವ ನದಿಗಳಿಗೆ ಅಗತ್ಯ ಇರುವ ಕಡೆ ಚೆಕ್ ಡ್ಯಾಂ ನಿರ್ಮಾಣ ಮಾಡಿದರೆ ಸುತ್ತಮುತ್ತಲಿನ ಜನರಿಗೆ ಕುಡಿಯಲು ಹಾಗೂ ಕೃಷಿ ಭೂಮಿಗೆ ಅಗತ್ಯ ನೀರು ಸರಬರಾಜ ಮಾಡಲು ತೊಂದರೆಯಾಗದು ಎಂದು ಅಧಿಕಾರಿಗಳು ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.

error: