ಮಳವಳ್ಳಿ : ಕರೋನ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಡಾ. ಕೆ ಅನ್ನದಾನಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಮಳವಳ್ಳಿ ತಾಲ್ಲೂಕು ಯುವ ಘಟಕದ ವತಿಯಿಂದ ಮಾರೇಹಳ್ಳಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸ ಲಾಯಿತು.
ಯುವ ಜೆಡಿಎಸ್ ನ ತಾಲ್ಲೂಕು ಅಧ್ಯಕ್ಷ ಚಂದಹಳ್ಳಿ ಶ್ರೀಧರ್ ಅವರ ನೇತೃತ್ವದಲ್ಲಿ ನಡೆದ ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಾಲೂಕಿನ ಹಲವಾರು ಜೆಡಿಎಸ್ ಮುಖಂಡರು ಶಾಸಕರು ಶೀಘ್ರ ಗುಣಮುಖರಾಗಿ ಕ್ಷೇತ್ರದ ಜನರ ಸೇವೆಗೆ ಶೀಘ್ರ ಮರುಳುವಂತಾಗಲಿ ಎಂದು ಮರೇಹಳ್ಳಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಪುರಸಭೆ ಉಪಾಧ್ಯಕ್ಷ ಟಿ ನಂದಕುಮಾರ್ ಅವರು ಕಳೆದ ಮೂರು ತಿಂಗಳಿAದ ತಾಲೂಕಿನ ಸಾವಿರಾರು ಜನ ಸೋಂಕಿತರ ಪ್ರಾಣ ರಕ್ಷಣೆಗೆ ಹಗಲಿರುಳು ಶ್ರಮಿಸುವುದರ ಜೊತೆಗೆ ಮೂರನೇ ಕರೋನ ಸೋಂಕಿನ ಬಗ್ಗೆ ಎಚ್ಚರದಿಂದ ಇರುವಂತೆ ಕ್ಷೇತ್ರದ ಜನರನ್ನು ನಿರಂತರ ವಾಗಿ ಎಚ್ಚರಿಸುತ್ತಲೇ ಇದ್ದ ಜೊತೆಗೆ ಪ್ರತೀ ಹಂತದಲ್ಲೂ ಕೋವಿಡ್ ಬಗ್ಗೆ ಎಚ್ಚರದಿಂದ ಇರುತ್ತಿದ್ದ ಶಾಸಕರಿಗೆ ಸೋಂಕು ತಗುಲಿರುವುದು ಆತಂಕರ ಸಂಗತಿಯಾಗಿದ್ದು ಶಾಸಕರು ಆದಷ್ಟು ಬೇಗ ಗುಣಮುಖರಾಗಿ ಮನೆಗೆ ಮರಳುವಂತಾಗಲಿ ಎಂದು ಹಾರೈಸಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ಯುವ ಜೆಡಿಎಸ್ ಅಧ್ಯಕ್ಷ ಚಂದಹಳ್ಳಿ ಶ್ರೀಧರ್, ಎಸ್ಸಿ ವಿಭಾಗದ ಅಧ್ಯಕ್ಷ ಕಲ್ಕುಣಿ ನಂಜುAಡಸ್ವಾಮಿ, ಮಾಜಿ ಜಿ ಪಂ ಸದಸ್ಯರಾದ ಬಿ ರವಿ, ಮಾಜಿ ಪುರಸಭಾಧ್ಯಕ್ಷ ದೊಡ್ಡಯ್ಯ, ಪುರಸಭಾ ಸದಸ್ಯರಾದ ಸಿದ್ದರಾಜು, ಕುಮಾರ್, ಪ್ರಮೀಳಾ, ಮುಖಂಡರಾದ ಕೆಂಬಾರೆ ನಾರಾಯಣ, ಅಂಕನಾಥ್, ಪೊತಂಡೆ ನಾಗರಾಜು, ಮತ್ತಿತರರು ಪಾಲ್ಗೊಂಡಿದ್ದರು
ವರದಿ: ಮಲ್ಲಿಕಾರ್ಜುನ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ