December 22, 2024

Bhavana Tv

Its Your Channel

೭೫ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲು ಮಳವಳ್ಳಿ ತಾಲ್ಲೂಕು ಆಡಳಿತ ತೀರ್ಮಾನ

ಮಳವಳ್ಳಿ : ಕೋವಿಡ್ ಮೂರನೇ ಅಲೆ ಹರಡುವಿಕೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಈ ಭಾರಿಯ ೭೫ನೇ ಸ್ವಾತಂತ್ರ‍್ಯ ದಿನಾಚರಣೆ ಯನ್ನು ಸರಳವಾಗಿ ಆಚರಿಸಲು ಮಳವಳ್ಳಿ ತಾಲ್ಲೂಕು ಆಡಳಿತ ತೀರ್ಮಾನಿಸಿದೆ.
ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ತಹಸೀಲ್ದಾರ್ ವಿಜಯಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಕೋವಿಡ್ ಮೂರನೇ ಅಲೆ ಆರಂಭದ ಕುರಿತು ಈಗಾಗಲೇ ತಜ್ಞರು ಮುನ್ಸೂಚನೆ ನೀಡಿರುವುದರ ಜೊತೆಗೆ ಇದೇ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನಿನ್ನೆ ಕೋವಿಡ್ ಮಾರ್ಗ ಸೂಚಿಯನ್ನು ಒಳಗೊಂಡ ಹೊಸ ಆದೇಶ ಹೊರಡಿಸಿ ೩೦ ಕ್ಕಿಂತಲೂ ಹೆಚ್ಚಿನ ಜನರು ಸೇರುವ ಎಲ್ಲಾ ಸಭೆ ಸಮಾರಂಭಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು ಈ ಆದೇಶ ಪಾಲನೆಯ ಅನ್ವಯ ಬರುವ ೧೫ ರಂದು ಸ್ವಾತಂತ್ರ‍್ಯ ದಿನವನ್ನು ಎಂದಿನAತೆ ಕನಕ ದಾಸ ಕ್ರೀಡಾಂಗಣದಲ್ಲಿ ೩೦ ಜನರ ಸಮ್ಮುಖದಲ್ಲಿ ಸರಳವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಧ್ವಜಾರೋಹಣ, ವೇದಿಕೆ ಕಾರ್ಯಕ್ರಮ ಎಂದಿನAತೆ ನಡೆಯಲಿದ್ದು ಪೊಲೀಸ್ ತಂಡ ದಿಂದ ಮಾತ್ರ ಧ್ವಜ ವಂದನೆ ಪರೇಡ್ ಬಿಟ್ಟರೆ ಬೇರೆ ಯಾವ ಶಾಲಾ ಮಕ್ಕಳ ತಂಡ ಭಾಗವಹಿಸಲು ಅವಕಾಶ ಇಲ್ಲ ಜೊತೆಗೆ ಶಾಲಾ ಮಕ್ಕಳಿಗೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಕೋವಿಡ್‌ನಿಂದ ಮೃತಪಟ್ಟವರನ್ನು ಉಚಿತವಾಗಿ ಅಂತ್ಯಕ್ರಿಯೆ ನಡೆಸಿಕೊಟ್ಟ ಕಿರುಗಾವಲು ಮುಸ್ಲಿಂ ಸಂಘಟನೆಯ ಜಬೀಉಲ್ಲಾ ತಂಡ ಹಾಗೂ ಮಳವಳ್ಳಿ ಆರ್ ಎಸ್ ಎಸ್ ನ ಪ್ರಸಾದ್ ಮತ್ತು ಅವರ ತಂಡದವರನ್ನು ಸನ್ಮಾನಿಸಲಾಗುವುದು ಎಂದು ತಹಸೀಲ್ದಾರ್ ವಿಜಯಣ್ಣ ಘೋಷಿಸಿದರು.
ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಜನರ ಗುಂಪು ಸೇರಿಸಿ ಹಬ್ಬ ಹರಿದಿನ, ಸಭೆ ಸಮಾರಂಭ ಮಾಡುವವರ ವಿರುದ್ದ ಮೊಕದ್ದಮೆ ದಾಖಲಿಸುವಂತೆ ಗ್ರಾ ಪಂ, ಪುರಸಭೆಯ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಅವರು ಸೂಚಿಸಿದರು.
ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಮಳವಳ್ಳಿ

error: