December 22, 2024

Bhavana Tv

Its Your Channel

ಶಾಸಕ ಡಾ. ಕೆ ಅನ್ನದಾನಿ ಅವರಿಗೆ ಕರೋನಾ ಸೋಂಕು ತಗುಲಿದ ಹಿನ್ನೆಲೆ ವಿಶೇಷ ಪೂಜೆ ಪ್ರಾರ್ಥನೆ.

ಮಳವಳ್ಳಿ : ಕೋವಿಡ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಡಾ. ಕೆ ಅನ್ನದಾನಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ತಳಗವಾದಿ ಕ್ಷೇತ್ರದ ಜಿ ಪಂ ಮಾಜಿ ಸದಸ್ಯ ಹನುಮಂತು ಅವರ ನೇತೃತ್ವದಲ್ಲಿ ತಳಗವಾದಿ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರಿಂದ ದೇವರಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.
ತಳಗವಾದಿ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಖಂಡರು ಶಾಸಕರು ಸೋಂಕಿನಿAದ ಶೀಘ್ರವಾಗಿ ಗುಣಮುಖರಾಗುವುದರ ಜೊತೆಗೆ ಇನ್ನಷ್ಟು ಆರೋಗ್ಯವಂತರಾಗಿ ಕ್ಷೇತ್ರದ ಜನರ ಸೇವೆ ಮಾಡುವ ಇನ್ನಷ್ಟು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ ಪಂ ಮಾಜಿ ಸದಸ್ಯರಾದ ಹನಮಂತು, ಗ್ರಾಮದ ಮುಖಂಡರಾದ ಚೌಡಯ್ಯ, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಶಿವಮಲ್ಲಪ್ಪ ಮುಂತಾದವರು ಕಳೆದ ಎರಡು ವರ್ಷದಿಂದಲೂ ಕ್ಷೇತ್ರದ ಜನರನ್ನು ಕೋವಿಡ್‌ನಿಂದ ಕಾಪಾಡಲು ಹಗಲಿರುಳು ಶ್ರಮಿಸುವುದರ ಜೊತೆಗೆ ಎರಡನೇ ಅಲೆ ಸಂದರ್ಭದಲ್ಲಿ ಸಾವಿರಾರು ಜನ ಸೋಂಕಿತ ರನ್ನು ಸಾವಿನ ದವಡೆಯಿಂದ ಪಾರು ಮಾಡಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ನಿರಂತರವಾಗಿ ಶ್ರಮಿಸಿದ ಶಾಸಕ ಅನ್ನದಾನಿ ಅವರು ಸ್ವತಃ ಸೋಂಕಿಗೆ ಒಳಗಾಗಿರುವುದು ದುರದೃಷ್ಟಕರ ವಾಗಿದ್ದು ಶೀಘ್ರ ವಾಗಿ ಗುಣಮುಖರಾಗಿ ಮೊದಲಿಗಿಂತಲೂ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕ್ಷೇತ್ರದ ಜನರ ಸೇವೆ ಮಾಡುವ ಶಕ್ತಿಯನ್ನು ದೇವರು ನೀಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜು, ಬುಲೆಟ್ ನಿಂಗಣ್ಣ, ಶಿವಸ್ವಾಮಿ, ಮಹಾದೇವಸ್ವಾಮಿ, ಸಿದ್ದರಾಜು, ಕಂಟ್ರಾಕ್ಟರ್ ಹನುಮಂತೇಗೌಡ ಮತ್ತಿತರರು ಹಾಜರಿದ್ದರು.

ವರದಿ: ಮಲ್ಲಿಕಾರ್ಜುನ ಮಳವಳ್ಳಿ

error: