December 22, 2024

Bhavana Tv

Its Your Channel

ಆಗಸ್ಟ್ ೧೫ ರಂದು ಮಳವಳ್ಳಿ ಪಟ್ಟಣದ ರೋಟರಿ ಶಾಲೆ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ

ಮಳವಳ್ಳಿ : ರಾಷ್ಟ್ರದ ಮಹಾನ್ ಪುರುಷರ ಸ್ಮರಣಾರ್ಥವಾಗಿ, ಅಗಲಿದ ಮಹಾನ್ ನಾಯಕರ ನೆನಪಿಗಾಗಿ ಜೊತೆಗೆ ದೇಶದ ಕಾಯುವ ಯೋಧರ ಗೌರವಾರ್ಥವಾಗಿ ಮತ್ತು ೭೫ನೇ ಸ್ವಾತಂತ್ರ‍್ಯೋತ್ಸವದ ಸವಿ ನೆನಪಿಗಾಗಿ ಬರುವ ೧೫ ರಂದು ಮಳವಳ್ಳಿ ಪಟ್ಟಣದ ರೋಟರಿ ಶಾಲೆ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿರುವ ಮಳವಳ್ಳಿ ತಾಲೂಕಿನ ಯುವಕ ಮಿತ್ರರು ಹಾಗೂ ತಾಲೂಕಿನ ಹಲವಾರು ಸಂಘಸAಸ್ಥೆಗಳ ಕಾರ್ಯ ಶ್ಲಾಘನೀಯವಾದುದ್ದು ಎಂದು ಮಾಜಿ ಸಚಿವ ಪಿ ಎಂ ನರೇಂದ್ರಸ್ವಾಮಿ ಪ್ರಶಂಸಿದ್ದಾರೆ.

ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಈ ಹಿಂದೆಯೂ ಹಲವಾರು ಭಾರಿ ಯಶಸ್ವಿ ರಕ್ತದಾನ ಶಿಬಿರಗಳನ್ನು ನಡೆಸಿರುವುದರ ಜೊತೆಗೆ ಗಿಡ ನೆಡು ಕಾರ್ಯಕ್ರಮವನ್ನು ಹುಟ್ಟುಹಾಕಿ ದೇಶ ವಿದೇಶಗಳಲ್ಲಿ ಇದೊಂದು ದೊಡ್ಡ ಆಂದೋಲನವಾಗುAತೆ ಮಾಡಿದ ಕೀರ್ತಿ ಮಳವಳ್ಳಿ ಯುವಕ ಮಿತ್ರರ ಬಳಗಕ್ಕೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಇಂತಹ ಸಾಮಾಜಿಕ ಜವಾಬ್ದಾರಿಯ ಕಳಕಳಿ ಹೊಂದಿರುವ ಮಳವಳ್ಳಿ ಯುವಕ ಮಿತ್ರರ ಬಳಗ ಹಾಗೂ ವಿವಿಧ ಸಂಘಟನೆಗಳು ಸೇರಿ ಸ್ವಾತಂತ್ರ‍್ಯ ದಿನದಂದು ಐತಿಹಾಸಿಕವಾದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದ್ದು ಪಕ್ಷಾತೀತವಾಗಿ ಜಾತ್ಯಾತೀತ ವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ಎಲ್ಲಾ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸಂಪೂರ್ಣ ಬೆಂಬಲ ನೀಡುವುದರ ಜೊತೆಗೆ ಪಕ್ಷದ ಕಾರ್ಯಕರ್ತರು ಮುಖಂಡರು ಸ್ವತಃ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಖಾತೆಗಾಗಿ ಮಂತ್ರಿಗಳು ಕಿತ್ತಾಟ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ನರೇಂದ್ರಸ್ವಾಮಿ ಬಿಜೆಪಿಯವರು ನುಡಿಯುವುದಕ್ಕೂ ನಡೆಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿ ಎಂದರು.
ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಲಂಗುಲಗಾಮಿಲ್ಲದೆ ಎಷ್ಟು ರಾಜಾರೋಷವಾಗಿ ನಡೆಯುತ್ತಿದೆ ಎಂಬುದಕ್ಕೆ ಪಾಂಡವಪುರ ವ್ಯಾಪ್ತಿಯಲ್ಲಿ ಸ್ಪೋಟಕ ಜಿಲಿಟಿನ್ ಕಡ್ಡಿಗಳು ಚೀಲ ಗಟ್ಟಲೆ ಸಿಕ್ಕಿರುವುದು ಸಾಕ್ಷಿಯಾಗಿದ್ದು ಇನ್ನಾದರೂ ಜಿಲ್ಲಾಡಳಿತ ಈ ಅಕ್ರಮ ಗಣಿಗಾರಿಕೆ ಮಟ್ಟ ಹಾಕಲು ಬಿಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಜೆ ದೇವರಾಜು, ಸುಂದರ್ ರಾಜ್, ಮಾಜಿ ಜಿ ಪಂ ಸದಸ್ಯೆ ಸುಜಾತ ಕೆ ಎಂ ಪುಟ್ಟು ಗೋಷ್ಠಿಯಲ್ಲಿ ಹಾಜರಿದ್ದರು.

ವರದಿ : ಬಿ. ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ

error: