December 22, 2024

Bhavana Tv

Its Your Channel

ಡ್ರೈವಿಂಗ್ ಲೈಸೆನ್ಸ್ ಪಡೆಯಲೆಂದು ಬಂದ ವ್ಯಕ್ತಿ ಕಾರಿನ ಸಮೇತ ಕೆರೆಯ ನೀರಿಗೆ

ಶಿರಸಿಯಲ್ಲಿರುವ ವಿಭಾಗೀಯ ಆರ್‌ಟಿಓ ಕಛೇರಿಯ ಕೆರೆಯ ದಡದಲ್ಲಿರುವ ಈ ಸ್ಥಳಕ್ಕೆ ಲೈಸೆನ್ಸ್ ಪಡೆಯಲು ಬರುವ ಚಾಲಕರು ಚಾಲನೆಯ ಟ್ರಯಲ್ ಕೊಡುವಾಗ ಕೆರೆಯ ಸಮೀಪವೇ ವಾಹನಗಳನ್ನು ಚಲಾಯಿಸುವದು ಕಡ್ಡಾಯವಾಗಿದೆ . ಗುರುವಾರ ಸಿದ್ಧಾಪುರದಿಂದ ನವೀನ ಎನ್ನುವವರು ಕಾರಿನ ಲೈಸೆನ್ಸ್ ಗಾಗಿ ಶಿರಸಿಯ ಆರ್‌ಟಿಓ ಕಛೇರಿಗೆ ಬಂದಿದ್ದರು. ನಿಯಮಾನುಸಾರ ಚಾಲನಾ ಟ್ರಯಲ್ ಕೊಡುವ ವೇಳೆ ನಿಯಂತ್ರಣ ತಪ್ಪಿ ಕಛೇರಿಯ ಎದುರಿನಲ್ಲಿ ನೀರುತುಂಬಿದ ಕೆರೆಗೆ ಕಾರು ಸಮೇತ ಬಿದ್ದಿದ್ದರು ತಕ್ಷಣ ಶಿರಸಿಯ ನಿಸರ್ಗ ಸ್ಟುಡಿಯೋ ಮಾಲೀಕರಾದ ಅಕ್ಷಯ ನಾಯ್ಕ ಇವರು ನೀರಿಗೆ ಧುಮುಕಿ ಚಾಲಕನನ್ನು ರಕ್ಷಿಸಿ .ಮಾನವೀಯತೆಯನ್ನು ಮೆರೆದಿದ್ದಾರೆ. ಹಾಗೂ ನಂತರ ಕ್ರೇನ್ ಮೂಲಕ ಕಾರನ್ನು ನೀರಿನಿಂದ ಎತ್ತಲಾಯಿತು. ಅಕ್ಷಯ ನಾಯ್ಕ ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

error: