December 22, 2024

Bhavana Tv

Its Your Channel

ಶೀಲ ಶಂಕಿಸಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ

ಮಳವಳ್ಳಿ: ಶೀಲ ಶಂಕಿಸಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಶವವನ್ನು ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಹೂತುಹಾಕಿ ಪರಾರಿಯಾಗಿರುವ ಕೃತ್ಯವೊಂದು ತಾಲ್ಲೂಕಿನ ಕಲ್ಲುವೀರನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಕಲ್ಲುವೀರನಹಳ್ಳಿ ಗ್ರಾಮದ ಶಿವರಾಜು ಎಂಬಾತ ತನ್ನ ಪತ್ನಿ ರಾಣಿ ಎಂಬಾಕೆಯನ್ನು ಮನೆಯಲ್ಲಿ ಶುಕ್ರವಾರ ಸಂಜೆ ೬.೩೦ ರ ಸಮಯದಲ್ಲಿ ಮೊದಲು ಚಾಕುವಿನಿಂದ ಹೊಟ್ಟೆಗೆ ಇರಿದು ನಂತರ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿ ಶವವನ್ನು ಮನೆಯ ರೂಮಿನಲ್ಲಿ ಇಟ್ಟು ನಂತರ ಮಧ್ಯೆ ರಾತ್ರಿ ವೇಳೆ ಪಕ್ಕದ ಸತೀಶ್ ಎಂಬುವವರ ಜಮೀನಿಗೆ ಶವವನ್ನು ಎಳೆದುಕೊಂಡು ತಂದು ಹೂತು ಹಾಕಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಶನಿವಾರ ಬೆಳಿಗ್ಗೆ ಸತೀಶ್ ಅವರು ತಮ್ಮ ಜಮೀನಿನಲ್ಲಿ ರಕ್ತ ಚೆಲ್ಲಾಡಿರುವುದು ಸ್ಥಳದಲ್ಲಿ ಶವವೊಂದನ್ನು ಹೂತಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಘಟನಾ ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಪೊಲೀಸರು , ಹೂತು ಹಾಕಿರುವ ಶವವನ್ನು ಹೊರ ತೆಗೆದು ಪ್ರಕರಣ ದಾಖಲಿಸಿಕೊಂಡು ಅರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಸಿಪಿಐ ಡಿ.ಪಿ.ಧನರಾಜ್, ಪಿಎಸ್ ಐ ಡಿ.ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: