December 21, 2024

Bhavana Tv

Its Your Channel

ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವಪ್ಪ

ನಾಗಮಂಗಲ: ಯಾವುದೇ ಪ್ಲಾನ್ ಇಲ್ಲದ ಸಸಿ ನೆಡುವ ಕಾರ್ಯಕ್ರಮ ನಿಲ್ಲಿಸಿ ಈಗಾಗಲೆ ಸಸಿ ನೆಟ್ಟು ಪೋಷಿಸುತ್ತಿರುವವರನ್ನ ಪ್ರೋತ್ಸಾಹಿಸುವ ಕೆಲಸ ಮಾಡಿದರೆ ಸಾಕು ಯೋಜನೆ ಯಶಸ್ವಿಯಾಗಲು ಸಾಧ್ಯವಿದೆ ಎಂದು ನಾಗಮಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವಪ್ಪ ಸಂಘ ಸಂಸ್ಥೆಗಳಿಗೆ ಸಲಹೆ ಮಾಡಿದ್ದಾರೆ.

ನಾಗಮಂಗಲ ಸಿಟಿ ಲಯನ್ಸ್ ಸಂಸ್ಥೆ ಪಟ್ಟಣದ ಉಪ್ಪಾರ ಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಯಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಸಿ ನೆಡುವ ಯೋಜನೆ ಬಹುಕಾಲ ಯಶಸ್ವಿಯಾಗಲು ಸಸಿ ನೆಟ್ಟು ನಿರ್ವಹಣೆ ಮಾಡುತ್ತಿರುವವರಿಗೆ ಪ್ರೋತ್ಸಾಹ ಧನ ನೀಡುವ ಪ್ರಯತ್ನವನ್ನ ಸಂಘ ಸಂಸ್ಥೆಗಳು ಮಾಡಿದರೆ ಸಮಾಜದಲ್ಲಿ ಮತ್ತಷ್ಟು ಯುವಜನತೆ ಪ್ರೇರಣೆ ಸಿಕ್ಕಂತಾಗುತ್ತಾಗುತ್ತದೆ ಆದ್ದರಿಂದ ಮುಂದಾಲೋಚನೆಯ ಪ್ಲಾನ್ ಇಲ್ಲದೆ ಸಸಿ ನೆಡುವ ಕಾರ್ಯಕ್ರಮ ನಿಲ್ಲಿಸಿ ಎಂದು ಸಲಹೆ ಮಾಡಿದರು.

ಹಾಗೂ ಶಿಕ್ಷಣ ಇಲಾಖೆ ಯಿಂದ ಶಾಲಾ ಆವರಣದಲ್ಲಿ ವಿವಿಧ ತಳಿಯ ಹಣ್ಣುಗಳ ಸಸಿ ನೆಡುವ ಕಾರ್ಯಕ್ರಮದ ಯೋಜನೆ ರೂಪಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಲಯನ್ಸ್ ಸಂಸ್ಥೆ ಅಧ್ಯಕ್ಷ ನಂದಕಿಶೋರ್ ಮಾತನಾಡಿ ಕೊರೊನಾ ಸಂಕಷ್ಟದಲ್ಲಿ ಜನತೆಗೆ ಆಮ್ಲಜನಕ ಮಹತ್ವ ಅರಿವಿಗೆ ಬಂದಿದ್ದು ನಾವೆಲ್ಲರೂ ಮರಕಡಿದ ಜಾಗದಲ್ಲಿ ಮತ್ತೂಂದು ಸಸಿ ನೆಡುವ ಪ್ರಮಾಣ ಮಾಡೋಣಾ ಎಂದು ಮನವಿ ಮಾಡಿದರು.

ಇದೆ ವೇಳೆ ನಾಗಮಂಗಲ ಪ್ರೆಸ್ ಕ್ಲಬ್ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಲಯನ್ಸ್ ಸಂಸ್ಥೆ ಉಪಾಧ್ಯಕ್ಷ ನಂಜುAಡೇಗೌಡ ಸಮಾಜಮುಖಿ ಕೆಲಸದಲ್ಲಿ ಮಾದ್ಯಮಗಳ ಪಾತ್ರ ದೊಡ್ಡದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಬಸವೇಗೌಡ, ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕಲಾ, ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಉಗ್ರೇಗೌಡ, ಮತ್ತು ಪದಾಧಿಕಾರಿಗಳು ಹಾಜರಿದ್ದರು.

ವರದಿ: ಚಂದ್ರಮೌಳಿ ನಾಗಮಂಗಲ

error: