ಮಳವಳ್ಳಿ ; ಇಂದಿನಿAದ ೯ ರಿಂದ ೧೨ ವರೆಗಿನ ಭೌತಿಕ ತರಗತಿಗಳು ಆರಂಭ ಸಾಗುತ್ತಿರುವ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಥಮ, ದ್ವಿತೀಯ ತರಗತಿಯ ವಿದ್ಯಾರ್ಥಿನಿಯರಿಗೆ ಹೂಗುಚ್ಚ ಹಾಗೂ ಸಿಹಿ ಹಂಚುವ ಮೂಲಕ ವಿದ್ಯಾರ್ಥಿ ನಿಯರನ್ನು ಶಾಸಕ ಡಾ. ಕೆ ಅನ್ನದಾನಿ ಸ್ವಾಗತಿಸಿದರು.
ಇದೇ ರೀತಿ ಪಕ್ಕದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿಯರನ್ನು ಸಹ ಸ್ವಾಗತಿಸಿದರು.
ನಂತರ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಒಂದುವರೆ ವರ್ಷಗಳ ಕಾಲ ಜನಸಾಮಾನ್ಯರ ಬದುಕಿನ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೂ ದಕ್ಕೆ ತಂದೊಡ್ಡಿದ್ದ ಕರೋನ ಹಾವಳಿಯಿಂದ ಇಷ್ಟು ದಿನಗಳ ಕಾಲ ವಿದ್ಯಾರ್ಥಿಗಳು ಶಾಲಾ ಮುಖವನ್ನೇ ನೋಡದಿರುವಂತಾಗಿತ್ತು ಎಂದು ವಿಷಾಧಿಸಿದರು.
ಈಗಲೂ ಸಹ ಕರೋನ ನಮ್ಮನ್ನು ಬಿಟ್ಟು ಹೋಗಿಲ್ಲ ಎಂಬುದನ್ನು ಎಲ್ಲಾ ವಿದ್ಯಾರ್ಥಿ ಗಳು ಅರ್ಥ ಮಾಡಿಕೊಂಡು ಮಾಸ್ಕ್, ಸ್ಯಾನಿಟೈಸರ್ ಬಳಕೆಯಂತಹ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ತಮ್ಮ ವಿದ್ಯಾಭ್ಯಾಸ ಮುಂದುವರಿಸುವAತೆ ಕರೆ ನೀಡಿದರುದೀ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ರಾಧ ನಾಗರಾಜು, ಉಪಾಧ್ಯಕ್ಷ ಟಿ ನಂದಕುಮಾರ್, ತಹಸೀಲ್ದಾರ್ ವಿಜಯಣ್ಣ, ತಾ ಪಂ ಇಒ ರಾಮಲಿಂಗಯ್ಯ, ಬಿಇಒ ಚಿಕ್ಕಸ್ವಾಮಿ, ಪುರಸಭಾ ಸದಸ್ಯರಾದ ನೂರುಲ್ಲಾ, ಸಿದ್ದರಾಜು, ಪ್ರಮೀಳಾ, ಮುಖಂಡರಾದ ನಾಗರಾಜು, ನಾಗೇಶ್, ರವಿ, ನಾರಾಯಣ ಪ್ರಾಂಶುಪಾಲರಾದ ಕಾವೇರಮ್ಮ , ಸೇರಿದಂತೆ ಮತ್ತಿತರರು ಹಾಜರಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ