December 20, 2024

Bhavana Tv

Its Your Channel

ಕಸಾಯಿ ಖಾನೆಗೆ ಸಾಗಿಸುತ್ತಿದ್ದ ೭ ಹಸುಗಳ ರಕ್ಷಣೆ

ಮಳವಳ್ಳಿ ; ಮೂರು ಟಾಟಾ ಎಸಿ ವಾಹನದಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ೭ ಹಸುಗಳನ್ನು ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೋಮವಾರ ಮುಂಜಾನೆ ೪ ಗಂಟೆ ಸಮಯದಲ್ಲಿ ಗಸ್ತಿನಲ್ಲಿದ್ದ ಕಿರುಗಾವಲು ಠಾಣೆಯ ಪಿ ಎಸ್ ಐ ಶೇಷಾದ್ರಿ ಕುಮಾರ್ ಹಾಗೂ ಸಿಬ್ಬಂದಿ ದೊಡ್ಡೇಗೌಡನ ಕೊಪ್ಪಲು ಗ್ರಾಮದ ಬಳಿ ಬರುತ್ತಿದ್ದ ಮೂರು ಟಾಟಾ ಎಸಿ ವಾಹನಗಳನ್ನು ತಡೆದು ನಿಲ್ಲಿಸುತ್ತಿದ್ದಂತೆ ವಾಹನದಲ್ಲಿ ಇದ್ದ ಚಾಲಕರು ಹಾಗೂ ಇತರರು ಪೊಲೀಸರನ್ನು ಕಂಡು ವಾಹನಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನಗಳನ್ನು ಪೊಲೀಸರು ಪರಿಶೀಲಿಸಿದಾಗ ಈ ಮೂರು ವಾಹನಗಳಲ್ಲಿ ಒಟ್ಟು ೭ ಹಸುಗಳು ಇದ್ದು ಇವುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ.
ವಾಹನಗಳ ಸಮೇತ ಹಸುಗಳನ್ನು ವಶಕ್ಕೆ ಪಡೆದು ಕೊಂಡಿರುವ ಪೊಲೀಸರು ಹಸುಗಳನ್ನು ಮೈಸೂರಿನ ಪಿಂಜರ ಪೋಲಿಗೆ ಒಪ್ಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕಿರುಗಾವಲು ಪೊಲೀಸರು ಪರಾರಿಯಾಗಿರುವ ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿದ್ದಾರೆ.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: