March 12, 2025

Bhavana Tv

Its Your Channel

ಭಟ್ಕಳ: ಜಿ.ಎಸ್.ಬಿ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ

ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ವತಿಯಿಂದ ಭಟ್ಕಳ ತಾಲೂಕಾ ಸ್ವಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶ್ರೀ ಶಾಂತೇರಿ ಕಾಮಾಕ್ಷಿ ಸಭಾಗೃಹದಲ್ಲಿ ಕೋವಿಡ್ ಸಂಬAಧಿತ ಮುಂಜಾಗೃತೆಯೊAದಿಗೆ ಜರುಗಿತು.

ರಕ್ಷಾ ಬಂಧನದ ಪ್ರಯುಕ್ತ ಸಮಾಜ ಬಾಂಧವರು ಪರಸ್ಪರ ರಾಖಿ ಕಟ್ಟಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ
ಚಾಲನೆಯನ್ನು ನೀಡಲಾಯಿತು. ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿ.ಎಸ್.ಎಸ್ ಅಧ್ಯಕ್ಷರಾದ ಕಲ್ಪೇಶ ಪೈ,
ಕೊಂಕಣೀ ಮಾನ್ಯತಾ ದಿನದ ಆಚರಣೆಯ ಮಹತ್ವ ಹಾಗೂ ಭಾಷೆಯ ಅಭಿವೃದ್ಧಿಯ ಕುರಿತ ಯೋಜನೆಗಳ ಮಾಹಿತಿಯನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಐ.ಐ.ಟಿ ಮದ್ರಾಸನ ಸಂಶೋಧನಾ ಸ್ಕಾಲರ್ ಹರೀಶ ಪೈ ರವರು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪುರಸ್ಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ವಿದ್ಯಾರ್ಥಿಗಳ ಏಳ್ಗೆಗೆ ಪಾಲಕರ ಶ್ರಮ ಹಾಗೂ ಲಭ್ಯವಿರುವ ಪ್ರಚಲಿತ ಶೈಕ್ಷಣಿಕ ಕೋರ್ಸುಗಳ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಗೌರವಾಧ್ಯಕ್ಷರಾದ ನಾಗೇಶ ಪೈ ಮಾತನಾಡಿ ನೂತನ ಶಿಕ್ಷಣ ನೀತಿಯ ಪ್ರಯೋಜನವನ್ನು ಉಲ್ಲೇಖಿಸುತ್ತಾ ಸಮಯದ ಸದ್ಬಳಕೆಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ಗಣಪತಿ ಪ್ರಭು, ಮಂಜುನಾಥ ಪ್ರಭು, ಜ್ಯೋತಿ ನಾಯಕ, ದಿನೇಶ ಪ್ರಭು, ಲಕ್ಷö್ಮಣ ಕಾಮತ ಸಹಿತ ಪಾಲಕ ಪೋಷಕರು ಉಪಸ್ಥಿತರಿದ್ದರು. ಸಹಕಾರ್ಯದರ್ಶಿ ಗುರುದಾಸ ಪ್ರಭು ನಿರೂಪಿಸಿದರು, ಕಾರ್ಯದರ್ಶಿ ಶ್ರೀನಾಥ ಪೈ ವಂದಿಸಿದರು.

error: