December 19, 2024

Bhavana Tv

Its Your Channel

ದೊಡ್ಡಕೆರೆ, ಮಾರೇಹಳ್ಳಿ ಕೆರೆಗೆ ಶಾಸಕ ಡಾ.ಕೆ.ಅನ್ನದಾನಿ ಬಾಗಿನ ಅರ್ಪಣೆ

ವರದಿ: ಮಲ್ಲಿಕಾರ್ಜುನ ಮಳವಳ್ಳಿ
ಮಳವಳ್ಳಿ ; ತಾಲ್ಲೂಕಿನ ಜೀವನಾಡಿಗಳಾಗಿರು ಮಳವಳ್ಳಿ ದೊಡ್ಡಕೆರೆ ಹಾಗೂ ಮಾರೇಹಳ್ಳಿ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಈ ಎರಡು ಕೆರೆಗಳಿಗೆ ಶಾಸಕ ಡಾ ಕೆ ಅನ್ನದಾನಿ ಅವರು ಇಂದು ಬಾಗಿನ ಅರ್ಪಿಸಿದರು.
ಮೊದಲು ಮಳವಳ್ಳಿ ದೊಡ್ಡ ಕೆರೆಗೆ ಪಕ್ಷದ ಮುಖಂಡರು ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಆಗಮಿಸಿದ ಶಾಸಕರು ಕೆರೆಗೆ ವಿಶೇಷ ಪೂಜೆ ಮಾಡಿ ಬಾಗಿನ ಅರ್ಪಿಸಿದರು..
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕಳೆದ ನಾಲ್ಕು ವರ್ಷಗಳಿಂದ ತಾಲೂಕಿನ ಜೀವನಾಡಿಯಾಗಿ ರುವ ದೊಡ್ಡ ಕೆರೆ ಹಾಗೂ ಮಾರೇಹಳ್ಳಿ ಕೆರೆ ಭರ್ತಿಯಾಗುತ್ತಿದ್ದು ನಾಲ್ಕು ವರ್ಷದಿಂದಲೂ ನಿರಂತರವಾಗಿ ಬಾಗಿನ ಅರ್ಪಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಾಕೃತಿಕವಾಗಿ ರಮ್ಯ ತಾಣವಾಗಿರುವುದರ ಜೊತೆಗೆ ಸಾವಿರಾರು ಎಕರೆ ರೈತರ ಕೃಷಿ ಜಮೀನಿಗೆ ನೀರು ಉಣಿಸುತ್ತಿರು ವುದೇ ಅಲ್ಲದೇ ಸುತ್ತಮುತ್ತಲಿನ ಅಂತರ್ ಜಲ ಕಾಪಾಡುವ ಮೂಲಕ ಈ ಎರಡು ಕೆರೆಗಳು ತಾಲ್ಲೂಕಿನ ಉಸಿರಾಗಿವೆ ಎಂದು ತಿಳಿಸಿದರು.
ತಾಲ್ಲೂಕಿನ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆ ಯಾಗದಂತೆ ಸಕಾಲಕ್ಕೆ ನೀರು ಒದಗಿಸಲಾಗುವುದು ಎಂದು ಶಾಸಕ ಅನ್ನದಾನಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ರಾಧ ನಾಗರಾಜು, ಉಪಾಧ್ಯಕ್ಷ ಟಿ ನಂದಕುಮಾರ್, ಮಾಜಿ ಅಧ್ಯಕ್ಷರಾದ ಎನ್ ನಂಜುAಡಯ್ಯ, ಎಂ ಹೆಚ್ ಕೆಂಪಯ್ಯ, ಎಂ ಎ ಚಿಕ್ಕರಾಜು, ಸದಸ್ಯರಾದ ಸಿದ್ದರಾಜು, ನೂರುಲ್ಲಾ, ಪ್ರಶಾಂತ್, ಕುಮಾರ್, ಜಯಸಿಂಹ, ಮುಖಂಡರಾದ ನಾರಾಯಣ, ನಾಗರಾಜು, ಕಂಬರಾಜು, ಅಂಕನಾಥ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಜಯಸಿಂಹ ಹಾಗೂ ಇನ್ನಿತರ ರೈತರು ಮಾತನಾಡಿ ನಾಲೆಗಳಲ್ಲಿ ಹೂಳು ತುಂಬಿಕೊAಡು, ಜಂಡು ಬೆಳೆದು ಕೊಂಡು, ನೀರು ಜಮೀನುಗಳಿಗೆ ಸರಾಗವಾಗಿ ಹರಿಯುತ್ತಿಲ್ಲ ಎಂದು ದೂರಿದರಲ್ಲದೆ ನೀರಾವರಿ ಇಲಾಖೆಯ ಸವಡೆಗಳು ನಾಲೆಗಳ ಮೇಲೆ ಬಂದು ನಾಲೆಯನ್ನು ಸರಿಪಡಿಸುವ ಕೆಲಸ ಮಾಡುತ್ತಿಲ್ಲ ಈ ಬಗ್ಗೆ ಪ್ರಶ್ನಿಸುವ ರೈತರಿಗೆ ಉಡಾಫೆ ಉತ್ತರ ನೀಡುತ್ತಾರೆ ಎಂದು ವಿವರಿಸಿದರು .
ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ಶಾಸಕ ಅನ್ನದಾನಿ ಅಧಿಕಾರಿಗಳಿಗೆ ಸೂಚಿಸಿದರು.
ಮಾರೇಹಳ್ಳಿ ಕೆರೆಗೆ ಬಾಗಿನ ಅರ್ಪಿಸುವ ವೇಳೆ ನಾಲೆಯಲ್ಲಿ ನೀರು ಬರುತ್ತಿರುವುದನ್ನು ನಂಬಿ ರೈತರು ನಾಟಿ ಕೆಲಸ ಮಾಡುತ್ತಿರುವಾಗಲೇ ಏಕಾಏಕಿ ಅಧಿಕಾರಿಗಳು ನೀರು ನಿಲ್ಲಿಸಿ ತೊಂದರೆಯುoಟು ಮಾಡುತ್ತಾರೆ, ಕೇಳಿದರೆ ಶಾಸಕರ ಬಾಗಿನ ಅರ್ಪಿಸುವ ಕಾರಣ ನೀರು ನಿಲ್ಲಿಸಿದ್ದೇವೆ ಎಂದು ಹೇಳುತ್ತಾರೆ ಎಂದು ಮಾಜಿ ಪುರಸಭಾಧ್ಯಕ್ಷ ಚಿಕ್ಕರಾಜು ಮತ್ತಿತರರು ದೂರಿದರು.

error: