December 22, 2024

Bhavana Tv

Its Your Channel

ಕಾಲು ಜಾರಿ ನಾಲೆಯಲ್ಲಿ ಮುಳುಗಿ ನೌಕರನೋರ್ವ ಸಾವು

ಮಳವಳ್ಳಿ ; ನಾಲೆಯಲ್ಲಿ ಮುಳುಗಿ ನೌಕರನೋರ್ವ ಸಾವುನ್ನಪ್ಪಿದ ದುರ್ಘಟನೆ ಯೊಂದು ಮಳವಳ್ಳಿ ತಾಲೂಕಿನ ಶಿವನ ಸಮುದ್ರದ ಬಳಿ ಜರುಗಿದೆ.
ತಾಲ್ಲೂಕಿನ ನೆಟ್ಕಲ್ ಗ್ರಾಮದ ವಾಸಿಯಾದ ಶ್ರೀನಿವಾಸ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದು ಈತ ಕಳೆದ ೭ ವರ್ಷದಿಂದಲೂ ಬೆಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ಶಿವನಸಮುದ್ರ ಬಳಿಯ ಬಿ ಡಬ್ಲ್ಯೂ ಎಸ್ ಎಸ್ ಬಿ ನಾಲೆಯ ತೂಬಿನ ಗೇಟ್ ಬಳಿ ಕಸ ತೆಗೆಯುವ ಕೆಲಸವನ್ನು ಹೊರಗುತ್ತಿಗೆ ನೌಕರನಾಗಿ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಕಳೆದ ಮಂಗಳವಾರ ಸಾಯಂಕಾಲ ೫.೪೫ ರ ಸಮಯದಲ್ಲಿ ನಾಲೆಯ.ಗೇಟ್ ನಲ್ಲಿ ಸಿಕ್ಕಿ ಕೊಂಡಿದ್ದ ಕಸವನ್ನು ನೀರಿನಿಂದ ಹೊರ ತೆಗೆಯುವ ಯತ್ನದಲ್ಲಿದ್ದಾಗ ಕಾಲು ಜಾರಿ ನಾಲೆಗೆ ಬಿದ್ದು ಮೃತಪಟ್ಟನೆಂದು ವರದಿಯಾಗಿದೆ.
ಬಹಿರ್ದೆಷೆಗೆ ಹೋಗಿದ್ದ ಸಹಪಾಠಿ ಶಿವಮಲ್ಲು ಬಂದು ನೋಡಿದಾಗ ಶ್ರೀನಿವಾಸ ಕಾಣೆಯಾಗಿದ್ದ ಎಂದು ಹೇಳಲಾಗಿದೆ.
ಕೂಡಲೇ ಮನೆಯವರಿಗೆ ವಿಷಯ ಮುಟ್ಟಿಸಲಾಗಿ ಮನೆಯವರು ಹಾಗೂ ಬಿ ಡಬ್ಲ್ಯೂ ಎಸ್ ಎಸ್ ಬಿ ಸಿಬ್ಬಂದಿ ನಾಲೆಯ ಗೇಟ್ ಬಂದ್ ಮಾಡಿ ನಿರಂತರ ಶೋಧ ನಡೆಸಿದ ನಂತರ ಬುಧವಾರ ರಾತ್ರಿ ಶ್ರೀನಿವಾಸ್ ಅವರ ಶವ ನಾಲೆಯಲ್ಲಿ ಪತ್ತೆಯಾಗಿದೆ.ಬೆಳಕವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿ ದ್ದಾರೆ.
ವೈದ್ಯಕೀಯ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ನೀಡಲಾಗಿದೆ.

ವರದಿ:ಮಲ್ಲಿಕಾರ್ಜುನ ಮಳವಳ್ಳಿ

error: