ವರದಿ: ಲೋಕೇಶ ಮಳವಳ್ಳಿ
ಮಳವಳ್ಳಿ: ನಿವೃತ್ತ ಶಿಕ್ಷಕ ದಿ.ಕೆ.ಮಾಯಿಗಶೆಟ್ಟಿ ಸೇವಾ ಸಮಿತಿ , ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಹಾಗೂ ಪ್ರವಾಸಿ ತಾಣ ಪತ್ರಿಕೆ ವತಿಯಿಂದ ಶ್ರೀರಂಗಪಟ್ಟಣ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ತಾಲ್ಲೂಕಿನ ಕೊರೋನಾ ವಾರಿಯರ್ಸ್ ಪ್ರಯೋಗ ಶಾಲಾ ತಂತ್ರಜ್ಞಧಿಕಾರಿಗಳನ್ನು ಅಭಿನಂದಿಸಲಾಯಿತು.
ನಾಡಪ್ರಭು ಕೆಂಪೇಗೌಡರ ಜಯಂತೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗಿಡಕ್ಕೆ ನೀರೆರೆಯುವ ಮೂಲಕ ಗ್ರೇಡ್-೨ ತಹಸೀಲ್ದಾರ್ ರೇಖಾ ರವರು ಕಾರ್ಯಕ್ರಮ ಉದ್ಘಾಟಿಸಿ ಕೊರೋನಾ ವಾರಿಯರ್ಸ್ಗಳ
ಅವಿರತ ಸೇವೆಯನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಎನ್.ಕೆ.ವೆಂಕಟೇಶ್ ರವರು ಮಾತನಾಡಿ ಮೊದಲನೆ ಅಲೆಯಿಂದ ಮೂರನೆ ಅಲೆ ಆರಂಭದವರೆಗೂ ಆರೋಗ್ಯ ಇಲಾಖೆಯ ಎಲ್ಲ ವಾರಿಯರ್ ಗಳು ಸಲ್ಲಿಸಿರುವ ಸೇವೆ ಅತ್ಯಂತ ಪ್ರಶಂಸನೀಯ, ಜನಸೇವೆಯೇ ಜನಾರ್ಧನ ಸೇವೆ ಎನ್ನುವ ಸೌಭಾಗ್ಯ ನಮ್ಮ ಪಾಲಿಗಾದರೆ, ವೈದ್ಯೋ ನಾರಾಯಣ ಹರಿ ಎಂಬುದು ಜನರ ಪಾಲಿಗೆ ಒದಗಿದೆ. ಮೂರನೆ ಅಲೆಯನ್ನು ಎಲ್ಲರೂ ಸಮರ್ಥವಾಗಿ ಎದುರಿಸೋಣ, ಲಸಿಕಾ ಬಲ, ಮುಂಜಾಗ್ರತಾ ನಿಯಮದ ಬಲ, ಪೌಷ್ಠಿಕ ಆಹಾರ ಸೇವನೆ ಮೂಲಕ ರೋಗ ನಿರೋಧಕ ಶಕ್ತಿಯನ್ನು ಪಡೆದು ಕೊರೋನಾ ಸೇರಿದಂತೆ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಡುತ್ತಾ, ಜನ ಸಮುದಾಯವನ್ನು ಜಾಗೃತಗೊಳಿಸುತ್ತಾ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಅಭಿನಂದನೆ ಗಳ ಪ್ರೇರಣೆಯಿಂದ ಮತ್ತಷ್ಟು ಉತ್ಸಾಹದಿಂದ ಸೇವೆ ಸಲ್ಲಿಸೋಣ ಎಂದರು.
ಸಿರಿಗನ್ನಡ ಪ್ರತಿಷ್ಠಾನದ ಜಿಲ್ಲಾಧ್ಯಕ್ಷರಾದ ಎಂ.ಲೋಕೇಶ್ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಚಂದ್ರಶೇಖರ್, ಮಂಡ್ಯ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಬಾಬು,ಮೈಸೂರಿನ ಸಮಾಜ ಸೇವಕರಾದ ಯಶೋದ,ತಾಲ್ಲೂಕು ಮೇಲ್ವಿಚಾರಣಾಧಿಕಾರಿ ಜಿ.ಮೋಹನ್ ಉಪಸ್ಥಿತರಿದ್ದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಲೀಂಪಾಷ ಕಾರ್ಯಕ್ರಮ ನಿರೂಪಿಸಿದರು.
ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿಗಳಾದ ನೂರುಲ್ ಹುಸೇನ್,ಭಾನುಮತಿ,ಜಾವೀದ್,ಸಪ್ನಾ ಆರ್.ನಾಯರ್,ಸುರೇಖಾ,ವಜ್ರೇಶ್ವರಿ,ರಾಘವೇಂದ್ರ, ಪ್ರಕಾಶ್ ಸೇರಿದಂತೆ ೧೪ ಮಂದಿ ಪ್ರಯೋಗ ಶಾಲಾ ತಂತ್ರಜ್ಞಧಿಕಾರಿಗಳನ್ನು ಗೌರವಿಸಲಾಯಿತು.
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ