
ಭಟ್ಕಳ: ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಸಂಘದ ನಾಲ್ವರು ಸದಸ್ಯರನ್ನು ಆರು ವರ್ಷಗಳ ಕಾಲ ಸಂಘದ ಸದಸ್ಯತ್ವದಿಂದ ಅಮಾನತು ಮಾಡಿ ಠರಾವಿಸಲಾಯಿತು.
ಯಲ್ಲಾಪುರದಿಂದ ಸಂಘದ ಸದಸ್ಯತ್ವವನ್ನು ಪಡೆದಿದ್ದ ಶಂಕರ ಭಟ್ಟ ತಾರಿಮಕ್ಕಿ, ನಾಗರಾಜ ಮದ್ಗುಣಿ, ನಾಗೇಶ ಕುಮಾರ್ ಎನ್. ಹಾಗೂ ಸಿ.ಆರ್. ಶ್ರೀಪತಿ ಇವರು ಬೇರೆಯೇ ಉದ್ದೇಶದಿಂದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದ್ದು, ಅವರನ್ನು ಮುಂದಿನ ಎರಡು ಅವಧಿಯ ತನಕ ನಮ್ಮ ಸಂಘಟನೆಯ ಸದಸ್ಯತ್ವ ಪಡೆಯದಂತೆ ಅಮಾನತು ಮಾಡಿ ಸಭೆ ನಿರ್ಣಯಿಸಿತು. ಈ ಕುರಿತು ರಾಜ್ಯ ಸಂಘಕ್ಕೆ ಪತ್ರಬರೆದು ಅವರ ಸದಸ್ಯತ್ವವನ್ನು ಅಮಾನತು ಪಡಿಸಿ ಸಂಘದ ವೆಬ್‌ಸೈಟ್‌ನಿಂದ ತೆಗೆದು ಹಾಕುವಂತೆ ಕೋರಲು ನಿರ್ಧರಿಸಲಾಯಿತು.
ಜಿಲ್ಲಾ ಸಂಘದ ಡಾ. ಯು. ಚಿತ್ತರಂಜನ್ ಪ್ರಶಸ್ತಿಯ ಕುರಿತು ಚರ್ಚೆನಡೆಸಿ ಮುಂದಿನ ಸಭೆಯಲ್ಲಿ ಈ ಕುರಿತು ಸ್ಪಷ್ಟವಾದ ನಿಯಮಾವಳಿಯನ್ನು ರೂಪಿಸುವಂತೆಯೂ ನಿರ್ಣಯಿಸಿದ್ದು, ಈಗಾಗಲೇ ಪೂರ್ಣಗೊಂಡಿರುವ ಮೊದಲ ಮಹಡಿಯ ಉದ್ಘಾಟನೆಯನ್ನು ಅತಿಥಿಗಳ ದಿನಾಂಕವನ್ನು ಪಡೆದು ನಿಗದಿಗೊಳಿಸಲು ತೀರ್ಮಾನಿಸಲಾಯಿತು. ಕೊರೊನಾ ಕಾಲದಲ್ಲಿಯೂ ಕೂಡಾ ಸಂಘ ಕ್ರೀಯಾಶೀಲವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತೀರ್ಮಾನಿಸಲಾಯಿತು. ಜಿಲ್ಲಾ ಪತ್ರಿಕಾ ಭವನದ ಆವರಣ ಗೋಡೆಯನ್ನು ನಿರ್ಮಿಸುವಂತೆ ಇಲಾಖೆಗೆ ಸೂಚನೆ ನೀಡಿದ್ದಲ್ಲದೇ ಅಗತ್ಯ ಅನುದಾನವನ್ನು ಕೂಡಾ ಬಿಡುಗಡೆ ಮಾಡುವಲ್ಲಿ ಮುತುವರ್ಜಿ ವಹಿಸಿದ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದು ಇನ್ನೂ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ನರಸಿಂಹ ಅಡಿ, ರಾಜ್ಯ ಸಮಿತಿ ಸದಸ್ಯ ಸುಬ್ರಾಯ ಭಟ್ಟ ಬಕ್ಕಳ, ಉಪಾಧ್ಯಕ್ಷ ಪ್ರದೀಪ ಶೆಟ್ಟಿ, ಖಜಾಂಚಿ ಸುಮಂಗಲಾ ಹೊನ್ನೆಕೊಪ್ಪ, ಉಪಾಧ್ಯಕ್ಷ ಬಿ.ವಿ. ಪಾಟೀಲ ಮುಂಡಗೋಡ, ಅನಂತ ದೇಸಾಯಿ ಜೋಯಿಡಾ, ಕಾರ್ಯದರ್ಶಿ ಕೆಕ್ಕಾರ ನಾಗರಾಜ ಭಟ್ಟ ಸಿದ್ದಾಪುರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ