ಮಳವಳ್ಳಿ: ಮೈಸೂರಿನಲ್ಲಿ ಎಮ್ ಬಿ ಎ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆಸಿರುವ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಸಂಜೆಯ ನಂತರ ಮನೆಯಿಂದ ಹೊರಗೆ ಬಂದು ತಿರುಗಾಡುವುದು ತಪ್ಪು ಎಂದು. ಅತ್ಯಾಚಾರಕ್ಕೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿರುವ ಗೃಹಮಂತ್ರಿ ಅರಗ ಜ್ಞಾನೇಂದ್ರ ಹಾಗೂ ಅತ್ಯಾಚಾರ ಸಾಮನ್ಯವಾಗಿ ಹಾಗಾಗೆ ನಡೆಯುತ್ತಿರುತ್ತೆವೆಂದು ಹೇಳಿಕೆ ಕೊಟ್ಟಿರುವ ಸಚಿವ ಉಮೇಶ್ ಕತ್ತಿ ಮೇಲೆ ಕೇಸು ದಾಖಲಿಸಿ ಎಂದು ಜನವಾದಿ ಮಹಿಳಾ ಸಂಘಟನೆ ಡಿವೈಎಫ್‌ಐ, ಎಸ್‌ಎಫ್‌ಐ. ಕರ್ನಾಟಕ ಪ್ರಾಂತ ರೈತ ಸಂಘಟನೆಯಿAದ ಮಳವಳ್ಳಿ ಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಯನ್ನು ಉದ್ದೇಶಿಸಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅದ್ಯಕ್ಷರಾದ ದೇವಿ ಮಾತನಾಡುತ್ತ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯ ಹೆಚ್ಚಾಗಿದೆ ಮನುವಾದಿಗಳ ಅಜೆಂಡಾ ದಲ್ಲಿ ಮಹಿಳೆಯರನ್ನ ಎರಡನೆ ದರ್ಜೆ ಪ್ರಜೆಗಳಾಗಿ ಕಾಣುತ್ತಿರುತ್ತಾರೆ ಅದರಂತೆ ಇಂದು ನಾಗರಿಕರಿಗೆ ಯಾವುದೇ ರಕ್ಷಣೆ ನೀಡುತ್ತಿಲ್ಲ ಇಂತಹ ಬೇಜವಬ್ದಾರಿ ಸರ್ಕಾರ ತೊಲಗಬೇಕು ಎಂದು ಒತ್ತಾಯಿಸಿದರು
ಜನವಾದಿ ಮಹಿಳಾ ಸಂಘಟನೆಯ ಸುನೀತಾ ಮಂಜುಳ ಸುಶೀಲಾ.ಕರ್ನಾಟಕ ಪ್ರಾಂತ ರೈತ ಸಂಘದ ಅದ್ಯಕ್ಷರಾದ ಎನ್ ಎಲ್ ಭರತ್ ರಾಜ್ ಚಿಕ್ಕಸ್ವಾಮಿ ಡಿವೈಎಫ್‌ಐ ನ ಶಿವಕುಮಾರ್ ಹೇಮಂತ್ ಎಸ್‌ಎಫ್‌ಐ ನ ನಿವೇದಿತಾ. ಬೀದಿಬದಿ ವ್ಯಾಪರಿಗಳ ಸಂಘದ ಗೌರಮ್ಮ ಸವಿತಾ ಭಾಗವಹಿಸಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ