March 12, 2025

Bhavana Tv

Its Your Channel

ಭಟ್ಕಳದ ಅಮೀನುದ್ದೀನ್ ರಸ್ತೆಯಲ್ಲಿ ಎರಡು ಬೈಕ್ ನಡುವೆ ಡಿಕ್ಕಿ; ಸವಾರನ ಸಾವು

ಭಟ್ಕಳ ನವಾಯತ್ ಕಾಲೋನಿಯ ಅಮೀನುದ್ದೀನ್ ರಸ್ತೆಯಲ್ಲಿ ಎರಡು ಬೈಕ್‌ಗಳ ನಡುವೆ ಶುಕ್ರವಾರ ಸಂಜೆ ವೇಳೆ ಡಿಕ್ಕಿ ಸಂಭವಿಸಿದೆ. ಪರಿಣಾಮವಾಗಿ ಬೈಕ್ ಸವಾರನೋರ್ವ ಸಾವನ್ನಪ್ಪಿದ್ದಾನೆ.

ಬದ್ರಿಯಾ ಕಾಲೋನಿಯ ಇಮ್ರಾನ್ ಕುನ್ನಂಗುಡ ಮಹಮದ್ ಜಾಫರ್ (೪೨) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇಮ್ರಾನ್ ತನ್ನ ಪತ್ನಿ ಮತ್ತು ಆತನ ಎಂಟು ತಿಂಗಳ ಮಗಳೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಎದುರಿನ ಬೈಕ್ ಸವಾರ ಅಪಘಾತದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾನೆ ಅಪಘಾತ ನಡೆದಾಗ ಗಂಭೀರ ಗಾಯಗೊಂಡ ಇಮ್ರಾನನ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಉಡುಪಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಇಮ್ರಾನ್ ತಡರಾತ್ರಿ ಮೃತಪಟ್ಟಿದ್ದಾರೆ

ಇಮ್ರಾನ್ ಭಟ್ಕಳದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ತುಂಬಾ ಶ್ರಮಪಡುತ್ತಿದ್ದ ವ್ಯಕ್ತಿ. ಅವರಿಗೆ ಒಟ್ಟು ಆರು ಜನ ಹೆಣ್ಣು ಮಕ್ಕಳಿದ್ದಾರೆ.

error: