ಗಡಿಯಾರದ ಮುಳ್ಳು ಸಂಜೆ ೫ ಗಂಟೆಗೆ ತಾಗುತ್ತಿದ್ದಂತೆಯೇ ಅಭಿನಂದನೆಯ ಸದ್ದು ಮಾರ್ದನಿಸಿತು. ಮನೆಗಳ ಎದುರು, ಮಹಡಿ ಮೇಲೆ, ಕಾಂಪೌAಡ್ ಒಳಗೆ, ರಸ್ತೆಗಳಲ್ಲಿ ಗುಂಪು ಗುಂಪಾಗಿ ಹಲವರು ನಿಂತು ಚಪ್ಪಾಳೆ ಬಾರಿಸಿದರು. ಕೆಲವರು ಕುಟುಂಬ ಸಮೇತರಾಗಿ ಈ ಕಾರ್ಯದಲ್ಲಿ ಪಾಲ್ಗೊಂಡರು. ಫೋಟೊ, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸಂಭ್ರಮಿಸಿದರು. ವೃದ್ಧರು, ಮಹಿಳೆಯರು, ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡರು ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಚಿಕಿತ್ಸೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವೈದ್ಯರು, ಶುಶ್ರೂಷಕ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳು, ಪೊಲೀಸರು, ಮಾಧ್ಯಮದವರು ಹೀಗೆ ಸಮಾಜದ ನಾನಾ ವರ್ಗದವರು ಹಗಲಿರುಳು ದುಡಿಯುತ್ತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಲು ಸಾಮೂಹಿಕವಾಗಿ ಚಪ್ಪಾಳೆ ತಟ್ಟಲು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸಲಹೆ ನೀಡಿದ್ದರು. ರವಿವಾರ ದಿನವಿಡಿ ಜನತೆಯೆ ಕರ್ಪೂ ನಡೆಸುವ ಮೂಲಕ ಇದು ದೇಶದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವ ಕ್ಷಣಕ್ಕೆ ಸಾಕ್ಷಿಯಾಯಿತು. ಸಾರ್ವಜನಿಕರ ಸ್ಪಂದನೆ ಉತ್ತಮವಾಗಿದ್ದು ಹೊನ್ನಾವರ ಪಟ್ಟಣ ಅಷ್ಟೆ ಅಲ್ಲದೆ ಗ್ರಾಮಂತರ ಪ್ರದೇಶದ ಅಂಗಡಿಗಳು ಬಂದ್ ಆಗಿತ್ತು. ಸಾರಿಗೆ ಸಂಸ್ಥೆ ಬಸ್ ಅಲ್ಲದೇ ಮ್ಯಾಕ್ಸಿ ಕ್ಯಾಬ್ ಆಟೋ ರಿಕ್ಷಾ ಸೇರಿದಂತೆ ಎಲ್ಲ ವಾಹನ ಚಾಲಕರು ಸಂದ್ಪಿಸಿದ್ದರು. ಸದಾ ಜನಜಂಗುಲಿಯಿAದ ತುಂಬಿದ್ದ ಹೊನ್ನಾವರ ಪಟ್ಟಣದ ರಸ್ತೆಗಳೆಲ್ಲ ವಾಹನ ಸಂಚಾರ ಇರಲಿಲ್ಲ ಬಂದರ್ ಭಾಗದಲ್ಲಿ ಮೀನು ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು ತಾಲೂಕಿನ ಬಸ್ ನಿಲ್ದಾಣವು ಕೂಡಾ ಬಸ್ ಚಲಿಸದೇ ನಿಂತಿತ್ತು. ವಿಶೇಷವೆಂದರೆ ಕರ್ಕಿ ರೈಲ್ವೆ ನಿಲ್ದಾಣ ಸ್ವಚ್ಚಗೊಳಿಸುವ ಮೂಲಕ ಕರೊನಾ ಭೀತಿಯನ್ನು ದೂರವಾಗಿಸಲು ಪ್ರಯತ್ನಿಸಿದರು.
ಒಟ್ಟಾರೆ ಶಾಂತಿಯುತವಾಗಿ ಜನತಾ ಕರ್ಪೂ ನಡೆದಿದ್ದು ೫ ಗಂಟೆಗೆ ಎಲ್ಲಡೆ ಗಂಟೆ ಚಪ್ಪಾಳೆ ನಾದ ಕೇಳಿ ಬಂತು
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.