April 12, 2024

Bhavana Tv

Its Your Channel

ಕುಮಟಾ ತಾಲ್ಲೂಕಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ “ಜನತಾ ಕರ್ಫ್ಯೂ”ವಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಈ ಹಿನ್ನೆಯಲ್ಲಿ ಪಟ್ಟಣ ಸಂಪೂರ್ಣವಾಗಿ ಬಂದ್ ಆಗಿದೆ. ಅದೇ ರೀತಿ ಗ್ರಾಮಿಣ. ಭಾಗದಲ್ಲಿಯೂ ನರಪಿಳ್ಳೆಯೂ ಸಹ ಎಲ್ಲಿಯೂ ಕಾಣ ಸಿಗುತ್ತಿಲ್ಲ. ಮುಂಜಾನೆ ಹಾಲು ಪತ್ರಿಕೆ ಕೊಳ್ಳಲು ಕೆಲವರು ಮನೆಯಿಂದ ಹೊರ ಬಂದಿದ್ದರು ೯ಗಂಟೆ ಹೊತ್ತಿಗೆ ಮನೆ ಸೇರಿ ಕೊಂಡಿದ್ದಾರೆ. ಪಟ್ಟಣದ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ಮೀನು ಮಾರುಕಟ್ಟೆ, ರೇಲ್ವೆ ನಿಲ್ದಾಣ ಸೇರಿದಂತೆ ಎಲ್ಲಾ ಕಡೆ ಖಾಲಿ ಖಾಲಿಯಾಗಿದೆ.
ಈ ಬಗ್ಗೆ ಮಾದ್ಯಮದವರೊಂದಿಗೆ ಶಸಕ ದಿನಕರ ಶೆಟ್ಟಿಯವರು ಮಾತನಾಡಿ ಕುಮಟ ಜನತೆಗೆ ಅಭಿನಂದಿಸಿದ್ದಾರೆ. ಪ್ರದಾನಿ ಮೋದಿಯವರು ಹೇಳಿದಂತೆ ತಾಲೂಕಿನದ್ಯಂತ ಸಂಜೆ ೫ ಗಂಟೆಗೆ ಚಪ್ಪಾಳೆ ಜಗಟೆಗಳನ್ನು ಬಾರಿಸಿ ಅಭಿನಂದನೆ ಸಲ್ಲಿಸಿದರು, ಶಾಸಕ ದಿನಕರ ಶೆಟ್ಟಿಯರು ತಮ್ಮ ಕುಟುಂಬದವರೊಡನೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

error: