December 20, 2024

Bhavana Tv

Its Your Channel

ಕರಿಯಣ್ಣ, ಕೆಂಚಣ್ಣ ದೇವರ ನೂತನ ಮೂರ್ತಿಗಳ ಪೂಜೆ ಹಾಗೂ ಮೆರವಣಿಗೆ

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

ಮಳವಳ್ಳಿ : ನಾಡಿನ ಧಾರ್ಮಿಕ ಪ್ರಕಾರಗಳ ಪರಂಪರೆಯಲ್ಲಿ ದಾಸಯ್ಯ ರವರುಗಳ ಪರಂಪರೆ ಸಹ ಪ್ರಮುಖವಾದದು.ನಾರಾಯಣಸ್ವಾಮಿ ಯ ಆರಾಧಕರಾದ ದಾಸಯ್ಯ ಗಳಿಗೆ ನಾರಾಯಣಸ್ವಾಮಿ ಯ ಬಂಟರೆAದೇ ಕರೆಯಲ್ಪಡುವ ಕರಿಯಣ್ಣ , ಕೆಂಚಣ್ಣ ದೇವರ ನೂತನ ಮೂರ್ತಿಗಳ ಪೂಜೆ ಆರಾಧನೆ ಹಾಗೂ ಮೆರವಣಿಗೆ ಕಾರ್ಯ ಪಟ್ಟಣದಲ್ಲಿ ಜರುಗಿತು.
ಪಟ್ಟಣದ ಗಂಗಾಮತ ಬೀದಿಯ ದಾಸಯ್ಯ ಪಂಗಡದವರು ನೂತನವಾಗಿ ಮಾಡಿಸಿರುವ ಕರಿಯಣ್ಣ ಕೆಂಚಣ್ಣ ದೇವರ ಮೂರ್ತಿಗಳಿಗೆ ಪಟ್ಟಣದ ದೊಡ್ಡಕೆರೆ ಬಳಿ ಹೂವಿನ ಅಲಂಕಾರ ನೈವೇದ್ಯ ಗಳೊಂದಿಗೆ ಸಾಂಪ್ರದಾಯಿಕ ವಾಗಿ ಪೂಜೆ ಸಲ್ಲಿಸಲಾಯಿತು. ನಂತರ ಕೊಂಬು ಕಹಳೆ ಸದ್ದಿನೊಂದಿಗೆ ಆಕರ್ಷಕ ಮೆರವಣಿಗೆಯಲ್ಲಿ ಕರಿಯಣ್ಣ ಕೆಂಚಣ್ಣ ದೇವರುಗಳನ್ನು ಗಂಗಾ ಬೀದಿಗೆ ಕರೆದೊಯ್ಯಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಾಸಯ್ಯ ಪಂಗಡದ ಪ್ರಮುಖರಾದ ಕೆಂಬಾರೆ ನಾರಾಯಣ ಅವರು ಕಳೆದ ಕರಿಯಣ್ಣ ಕೆಂಚಣ್ಣ ದೇವರ ಮೂರ್ತಿಗಳನ್ನು ಮಾಡಿಸಬೇಕೆಂಬ ನಮ್ಮ ದಾಸಯ್ಯಗಳ ಪಂಗಡದ ಪ್ರಯತ್ನ ಈಗ ಈಡೇರಿದಂತಾಗಿದೆ ಎಂದು ತಿಳಿಸಿದರು.ಮೆರವಣಿಗೆಯುದ್ದಕ್ಕೂ ದಾಸಯ್ಯಗಳ ಸಮೂಹ ಕೊಂಬು ಕಹಳೆ ಜಾಗಟೆ ಯೊಂದಿಗೆ ಪಾಲ್ಗೊಂಡು ಮೆರವಣಿಗೆಗೆ ವೆ ಮೆರಗು ನೀಡಿದರು

error: