December 22, 2024

Bhavana Tv

Its Your Channel

ರಾಜ್ಯ ಮೀನು ಮಹಾ ಮಂಡಲದ ನೂತನ ಅಧ್ಯಕ್ಷರಾದ ಸಿದ್ಧಲಿಂಗರಾಜುರವರಿಗೆ ಸನ್ಮಾನ

ವರದಿ: ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ

ಮಳವಳ್ಳಿ : ರಾಜ್ಯ ಮೀನು ಮಹಾ ಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಳವಳ್ಳಿಯವರೇ ಆದ ಸಿದ್ಧಲಿಂಗರಾಜು ಅವರನ್ನು ಮಳವಳ್ಳಿಯ ತವರು ನೆಲದಲ್ಲಿ ಸನ್ಮಾನಿಸುವ ಕಾರ್ಯಕ್ರಮ ವೊಂದು ಮಳವಳ್ಳಿ ಪಟ್ಟಣ ಪ್ರವಾಸಿ ಮಂದಿರದಲ್ಲಿ ಜರುಗಿತು.
ಅಖಿಲ ಕರ್ನಾಟಕ ವಾಲ್ಮೀಕಿ ರತ್ನ ಬಾದ್ ಷಾ ಕಿಚ್ಚ ಸುದೀಪ್ ಸೇನೆ ವತಿಯಿಂದ ಸಿದ್ದಲಿಂಗರಾಜು ಉರುಫ್ ಸಿದ್ದಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಂಘಟನೆಯ ಪರವಾಗಿ ಸನ್ಮಾನಿಸಿದ ಕಿಚ್ಚ ಸುದೀಪ್ ಸೇನೆಯ ರಾಜ್ಯಾಧ್ಯಕ್ಷ ಶಿವರಾಜ್ ನಾಯಕ್ ಅವರು ಈವರೆಗೆ ಬೇರೆ ಕೋಮಿನವರ ವಶದಲ್ಲಿದ್ದ ರಾಜ್ಯ ಮೀನು ಮಹಾಮಂಡಲ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗಕ್ಕೆ ಸೇರಿದ ಮಳವಳ್ಳಿಯವರೇ ಆದ ಸಿದ್ಧಲಿಂಗರಾಜು ಅವರು ತಮ್ಮ ಚಾಣಾಕ್ಷ ಪ್ರಯತ್ನ ದಿಂದ ಹುದ್ದೆ ಅಲಂಕರಿಸಿರುವುದು ಮಳವಳ್ಳಿಗೆ ಹೆಮ್ಮೆಯ ಸಂಗತಿ ಯಾಗಿದ್ದು ಇದೇ ರೀತಿ ಅವರು ಇನ್ನಷ್ಟು ಉನ್ನತ ಹುದ್ದೆಗೆ ಏರುವ ಮೂಲಕ ಮಳವಳ್ಳಿ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯ ಮೀನು ಮಹಾಮಂಡಲದ ನೂತನ ಅಧ್ಯಕ್ಷ ಸಿದ್ಧಲಿಂಗರಾಜು ಅವರು ಹಿಂದುಳಿದ ವರ್ಗಗಳಿಗೆ ಸೇರಿದ ಸಮುದಾಯಗಳು ತಮ್ಮ ವೈಯಕ್ತಿಕ ಲಾಲಸೆ ಜಿಜ್ಞಾಸೆಗಳನ್ನು ಬಿಟ್ಟು ರಾಜಕೀಯವಾಗಿ ಒಗ್ಗಟ್ಟಿನಿಂದ ಸಾಗಿದಾಗ ಮಾತ್ರ ನಾವು ಇಂತಹ ಉನ್ನತ ಸ್ಥಾನಗಳನ್ನು ಅಲಂಕರಿಸಲು ಸಾಧ್ಯ ಎಂದು ತಿಳಿಸಿದರು.
ನಮ್ಮ ರಾಜಕೀಯ ಒಡಕಿನಿಂದಾಗಿ ಬೇರೆ ಸಮುದಾಯದವರು ಆಯಾ ಕಟ್ಟಿನ ಅಧಿಕಾರದ ಸ್ಥಾನಗಳನ್ನು ಹಿಡಿದುಕೊಳ್ಳು ವಂತಾಗುತ್ತಿದ್ದು ಇದನ್ನು ಮನಗಂಡಿರುವ ನಾನು ಹಿಂದುಳಿದ ವರ್ಗದ ಸಮುದಾಯಗಳನ್ನು ಒಗ್ಗೂಡಿಸಿ ರಾಜಕೀಯ ಶಕ್ತಿಯಾಗಿ ರೂಪಿಸುವ ಸಲುವಾಗಿ ರಾಜ್ಯಾಧ್ಯಂತ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು
ಕಾರ್ಯಕ್ರಮ ದಲ್ಲಿ ಸಂಘಟ ನೆಯ ಮುಖಂಡರಾದ ಶಿವಕುಮಾರ್, ಗುರುಸಿದ್ದು, ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು.

error: