December 21, 2024

Bhavana Tv

Its Your Channel

ಹಣ ದುರುಪಯೋಗ ಕುರಿತು ಮಹಿಳೆಯರು ಹಾಗೂ ಸಾರ್ವಜನಿಕರಿಂದ ಪ್ರತಿಭಟನೆ

ಮಳವಳ್ಳಿ ; ಸ್ವ ಸಹಾಯ ಸಂಘದ ಮಹಿಳೆಯರು ಸಂದಾಯ ಮಾಡಿದ ಹಣವನ್ನು ಬ್ಯಾಂಕಿಗೆ ಕಟ್ಟದೆ ಲಕ್ಷಾಂತರ ರೂ ಹಣವನ್ನು ದುರುಪಯೋಗ ಮಾಡಿಕೊಂಡ ಸೊಸೈಟಿ ಕಾರ್ಯದರ್ಶಿ ವಿರುದ್ಧ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಸಾರ್ವಜನಿಕರು ಸೊಸೈಟಿ ಮುಂದೆ ನೆರೆದು ಕಾರ್ಯದರ್ಶಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಪ್ರಸಂಗ ಇಂದು ಮಳವಳ್ಳಿ ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಜರುಗಿತು.
ಘಟನೆ ಹಿನ್ನೆಲೆಯಲ್ಲಿ ಸೊಸೈಟಿ ಆವರಣದಲ್ಲಿ ಕೆಲಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣ ವಾಗಿತ್ತು ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸರು ಜನರನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇದರ ಬೆನ್ನಲ್ಲೇ ಹಣ ದುರುಪಯೋಗ ದೂರಿನ ಹಿನ್ನೆಲೆಯಲ್ಲಿ ಕಾರ್ಯದರ್ಶಿ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಒಳಪಡಿಸುವ ತೀರ್ಮಾನ ಕೈಗೊಂಡ ಸೊಸೈಟಿ ಆಡಳಿತ ಮಂಡಳಿ ಅಲ್ಲಿಯವರೆಗೆ ಕಾರ್ಯದರ್ಶಿ ಅವರನ್ನು ಸೇವೆಯಿಂದ ಅಮಾನತು ಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡಿತು.
ಈ ಗ್ರಾಮದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸೊಸೈಟಿ ವ್ಯಾಪ್ತಿಯ ೧೪ ಕ್ಕೂ ಹೆಚ್ಚು ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ನೀಡಿದ್ದು ಸದರಿ ಸಂಘದ ಮಹಿಳೆಯರು ಈಗಾಗಲೇ ಸಾಲದ ಬಾಕಿಯಲ್ಲಿ ಬಹಳಷ್ಟು ಹಣವನ್ನು ಸೊಸೈಟಿಗೆ ಮರುಪಾವತಿ ಮಾಡಿದ್ದು ಮಹಿಳೆಯರು ಸಂದಾಯ ಮಾಡಿದ ಹಣವನ್ನು ಡಿ ಸಿ ಸಿ ಬ್ಯಾಂಕಿಗೆ ಕಟ್ಟಬೇಕಾದ ಕಾರ್ಯದರ್ಶಿ ಕುಮಾರ್ ಅವರು ಬ್ಯಾಂಕಿಗೆ ಕಟ್ಟದೆ ದುರುಪಯೋಗ ಪಡಿಸಿ ಕೊಂಡಿದ್ದರು ಎನ್ನಲಾಗಿದೆ.
ವಿಷಯ ತಿಳಿದ ಮಹಿಳೆಯರು ಹಾಗೂ ಸಾರ್ವಜನಿಕರು ಇಂದು ಸೊಸೈಟಿ ಆಡಳಿತ ಮಂಡಳಿ ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ಸೊಸೈಟಿ ಆವರಣಕ್ಕೆ ನುಗ್ಗಿ ಕಾರ್ಯದರ್ಶಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ತಮಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಸ್ವಸಹಾಯ ಸಂಘದ ಮಹಿಳೆಯರು ತಮ್ಮ ಸಂಘಕ್ಕೆ ನೀಡಿದ ಸಾಲದ ಹಣದ ಬಹುತೇಕ ಭಾಗವನ್ನು ನಾವು ಮರುಪಾವತಿ ಮಾಡಿದ್ದು ಆದರೆ ಬ್ಯಾಂಕಿನವರು ಸಾಲ ಮರು ಪಾವತಿ ಆಗಿಲ್ಲ ಎಂದು ಹೇಳುತ್ತಿದ್ದಾರೆ ಇದಲ್ಲದೆ ಪ್ರತೀ ಸದಸ್ಯರು ಸಾವಿರಾರು ರೂ ಹಣವನ್ನು ಉಳಿತಾಯ ಮಾಡಿದ್ದು ಒಬ್ಬೊಬ್ಬ ಮಹಿಳೆ ೪೦ರಿಂದ ೫೦ ಸಾವಿರ ರೂ ಉಳಿತಾಯ ಮಾಡಿದ್ದು ಆದರೆ ಬ್ಯಾಂಕಿನ ನಮ್ಮ ಉಳಿತಾಯ ಖಾತೆಗಳಲ್ಲಿ ೩ರಿಂದ ೫ ಸಾವಿರ ಮಾತ್ರ ಇದೆ ನಾವು ಕೂಲಿ ಮಾಡಿ ಹೊಟ್ಟೆ ಬಟ್ಟೆ ಕಟ್ಟಿ ಉಳಿತಾಯ ಮಾಡಿದ್ದ ಹಣವನ್ನು ಕಾರ್ಯದರ್ಶಿ ಕಟ್ಟದೆ ನಮ್ಮನ್ನು ವಂಚಿಸಿದ್ದಾರೆ ಎಂದು ಅಳಲು ತೋಡಿಕೊಂಡರು.
ಸಭೆಯ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಸೊಸೈಟಿ ಅಧ್ಯಕ್ಷ ಲೋಕೇಶ್ ಗೌಡ ಅವರು ತಮ್ಮ ಸೊಸೈಟಿಗೆ ಸೇರಿದ ೩೦ ಲಕ್ಷಕ್ಕೂ ಹೆಚ್ಚಿನ ಹಣ ದುರುಪಯೋಗ ಆಗಿದೆ ಎಂದು ಡಿ ಸಿ ಸಿ ಬ್ಯಾಂಕ್ ಲೆಕ್ಕ ಪರಿಶೋಧನ ಸಮಿತಿ ವರದಿ ನೀಡಿದ್ದು ಇದರಲ್ಲಿ ಸಾಕಷ್ಟು ಹಣವನ್ನು ಕಾರ್ಯದರ್ಶಿ ಕಡೆಯಿಂದ ವಸೂಲಿ ಮಾಡಿದ್ದು ಇನ್ನೂ ೪ಲಕ್ಷಕ್ಕೂ ಹೆಚ್ಚು ಹಣವನ್ನು ಮರುಪಾವತಿ ಮಾಡದೆ ದುರುಪಯೋಗ ಮಾಡಿಕೊಂಡಿ ರುವ ಹಿನ್ನೆಲೆಯಲ್ಲಿ ಇಡೀ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಅಲ್ಲಿಯವರೆಗೆ ಕಾರ್ಯದರ್ಶಿ ಅವರನ್ನು ಸೇವೆಯಿಂದ ಅಮಾನತು ಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆದರೆ ತಾನು ಯಾವುದೇ ಹಣ ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಕಾರ್ಯದರ್ಶಿ ಕುಮಾರ್ ತಿಳಿಸಿದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: