December 22, 2024

Bhavana Tv

Its Your Channel

೨೧ ವರ್ಷ ದೇಶ ಸೇವೆ ಮಾಡಿದ ಯೋಧನಿಗೆ ಅದ್ಧೂರಿ ಸ್ವಾಗತ

ಬೆಳಕವಾಡಿ: ಕಳೆದ ೨೧ ವರ್ಷಗಳ ಕಾಲ ಬಿ.ಎಸ್.ಎಫ್ ಮಿಲಿಟರಿ ಪಡೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತನ್ನ ಸ್ವ ಗ್ರಾಮವಾದ ಬೆಳಕವಾಡಿಗೆ ಆಗಮಿಸಿದ ಯೋಧ ಸಿದ್ಧರಾಜು ಅವರನ್ನು ಗ್ರಾಮಸ್ಥರು ಹಾಗೂ ಯುವಕರು ಅದ್ಧೂರಿಯಾಗಿ ಸ್ವಾಗತಿಸಿ ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿದರು.
೨೦೦೦ ರ ಜೂನ್ ೨೬ ರಂದು ಬಿಎಸ್ ಎಫ್ ಗೆ ಸೇರಿದ ಸಿದ್ದರಾಜು ಅವರು ದೇಶದ ಗಡಿ ಪ್ರದೇಶಗಳಾದ ಕಾಶ್ಮೀರ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್ , ಪಶ್ಚಿಮ ಬಂಗಾಳ, ಪಂಜಾಬ್ ರಾಜಸ್ಥಾನ ಸೇರಿದಂತೆ ಹಲವೆಡೆ ಕಾರ್ಯ ನಿರ್ವಹಿಸಿದ್ದರು,
೨೦೧೯ರಲ್ಲಿ ಸೇನೆಯ ಅಮಲ್ದಾರ್ ಆಗಿ ಬಡ್ತಿ ಪಡೆದು ಒಟ್ಟು ೨೧ ವರ್ಷಗಳ ಕಾಲ ದೇಶ ಕಾಯುವ ಸೇವೆ ಪೂರೈಸಿ ಸಿದ್ಧರಾಜು ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಬೆಳಕವಾಡಿ-ಮಳವಳ್ಳಿ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ಕಲ್ಯಾಣ ಮಂಟಪದ ಬಳಿ ಭಾರಿ ಹಾರ ತುರಾಯಿಗಳೊಂದಿಗೆ ಭವ್ಯ ಸ್ವಾಗತ ನೀಡಿದರು
ಗ್ರಾಮಸ್ಥರ ಪರವಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಉಮಾ ನಿವೃತ್ತ ಯೋಧರಿಗೆ ಸ್ವಾಗತ ಕೋರಿದರರು .
ಈ ಸಂದರ್ಭದಲ್ಲಿ ಹಲವು ಗ್ರಾ ಪಂ ಸದಸ್ಯರು ಸೇರಿದಂತೆ ಪಿಡಿಓ ಶಿವಸ್ವಾಮಿ, ನೀವೃತ್ತ ಪ್ರಾಧ್ಯಪಕ ಪ್ರೊ, ರಂಗಸ್ವಾಮಿ ಮಾಜಿ ತಾ ಪಂ ಅಧ್ಯಕ್ಷ ಮಹಾದೇವಸ್ವಾಮಿ, ಪೊಲೀಸ್ ಪ್ರಭು ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದು ಯೋಧ ಸಿದ್ದರಾಜು ಅವರನ್ನು ಸ್ವಾಗತಿಸಿದರು.
ನಂತರ ತಮಟೆ ನಗಾರಿ ಗಳೊಂದಿಗೆ ಸಮವಸ್ತ್ರದೊಂದಿಗೆ ಬೆಳ್ಳಿರಥ ವೇರಿದ ಸಿದ್ದರಾಜು ಅವರನ್ನು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.

ವರದಿ: ಮಲ್ಲಿಕಾರ್ಜುಣ ಸ್ವಾಮಿ ಮಳವಳ್ಳಿ

error: