ಮಳವಳ್ಳಿ: . ಭಯ. ಶೋಷಣೆ. ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ. ಹಿಂಸೆ ಅತ್ಯಾಚಾರ ತಡೆಗಟ್ಟಲು ವಿಫಲವಾಗಿರುವ ಮೋದಿ ಸರ್ಕಾರದ ವಿರುದ್ಧ, ಹಗಲು-ಇರುಳುಗಳು ಸರ್ವರ ಸೊತ್ತು. ಎಲ್ಲಾ ಒತ್ತು ಭಯ ಮುಕ್ತ ಬದುಕಿಗಾಗಿ ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಮಳವಳ್ಳಿ ಪಟ್ಟಣದಲ್ಲಿ ಶುಕ್ರವಾರ ೧೧:೦೦ ರಾತ್ರಿಯಲ್ಲಿ ಪಂಜಿನ ಮೆರವಣಿಗೆಯೊಂದಿಗೆ ಪ್ರತಿಭಟನೆ ನಡೆಸಲಾಯಿತು
ಪ್ರತಿಭಟನೆ ಯನ್ನ ಉದ್ದೇಶಿಸಿ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರಾದ ದೇವಿ ಮಾತನಾಡುತ್ತ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ. ದಲಿತರ. ರೈತರ .ಕೂಲಿಕಾರರ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ ಮಹಿಳೆಯರು ನಿರ್ಭೀತಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಬಾಂಬೆಯಲ್ಲಿ ನಿರ್ಭಯ ಪ್ರಕರಣಕ್ಕಿಂತ ಭೀಕರವಾದ ದುರ್ಘಟನೆ ನಡೆದಿದೆ ಅತ್ಯಾಚಾರ ನಡೆಸಿ ಗುಪ್ತಾಂಗಕ್ಕೆ ಕಬ್ಬಿಣದ ಸರಳನ್ನ ಚುಚ್ಚಿದ್ದಾರೆ ಸ್ತನಗಳನ್ನು ಕತ್ತರಿಸಿ ದೇಹದ ಹಲವಾರು ಭಾಗಗಳಿಗೆ ಚುಚ್ಚಿ ಹತ್ಯೆ ಮಾಡಲಾಗಿದೆ ರಕ್ಷಣಾ ಇಲಾಖೆಯ ಮಹಿಳಾ ಅಧಿಕಾರಿಯ ಮೇಲೆ ಅತ್ಯಾಚಾರ ನಡೆಸಿ ಸ್ತನಗಳ ಕತ್ತರಿಸಿ ಹತ್ಯೆ ಮಾಡಿದ್ದಾರೆ ತುಮಕೂರಿನಲ್ಲಿ ಹನ್ನೆರಡು ವರ್ಷದ ಹೆಣ್ಣು ಮಗುವಿನ ಮೇಲೆ ೬೫ವರ್ಷ ವೃದ್ದ ಅತ್ಯಾಚಾರ ನಡೆಸಿದ್ದಾನೆ ಪುಣೆಯ ರೈಲು ನಿಲ್ದಾಣದಲ್ಲಿ ೧೧ ವರ್ಷದ ಬಾಲಕಿಯ ಮೇಲೆ ಹತ್ತು ಮಂದಿ ಅತ್ಯಾಚಾರ ನಡೆಸಿದ್ದಾರೆ . ಇಷ್ಟೆಲ್ಲಾ ದುರ್ಘಟನೆಗಳು ನಡೆದರು ಬಿಜೆಪಿ ಸರ್ಕಾರ ಮಹಿಳೆಯರಿಗೆ ದಲಿತರಿಗೆ ರಕ್ಷಣೆ ನೀಡಲು ವಿಫಲವಾಗಿದೆ ಆದ್ದರಿಂದ ವರ್ಮಾ ಸಮಿತಿ ವರದಿ ಜಾರಿಗೊಳಿಸಿ ಇಂತಹ ಪ್ರಕರಣಗಳನ್ನು ಆರು ತಿಂಗಳೊಳಗೆ ಇತ್ಯರ್ಥಪಡಿಸಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ತ್ವರಿತ ನ್ಯಾಯಾಲಯಗಳ ಸ್ಥಾಪನೆ ಮಾಡಬೇಕು ಗ್ರಾಮ ಪಂಚಾಯತಿ ಅಧೀನದ ಸಾಮಾಜಿಕ ನ್ಯಾಯ ಸಮಿತಿಗಳು ಗ್ರಾಮಪಂಚಾಯಿತಿಗಳ ಮಟ್ಟದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿ ಮಹಿಳೆಯರಿಗೆ ರಕ್ಷಣೆ ನೀಡುವುದರ ಕುರಿತು ಕಠಿಣ ಕಾನೂನುಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸಬೇಕೆಂದು ಒತ್ತಾಯಿಸಿದರು ಮಳವಳ್ಳಿಯ ಕೆಎಸ್ ಆರ್ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಅನಂತರಾಮ್ ಸರ್ಕಾರದಲ್ಲಿ ಪ್ರತಿಭಟನೆ ನಡೆಸಿದರು ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಹಕಾರ್ಯದರ್ಶಿ ಸುನೀತಾ ತಾಲೂಕು ಅಧ್ಯಕ್ಷರಾದ ಸುಶೀಲಾ ಕಾರ್ಯದರ್ಶಿ ಮಂಜುಳಾ ಜಯಶೀಲ ಗೌರಮ್ಮ ಹಾಜರಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ