December 19, 2024

Bhavana Tv

Its Your Channel

ಬಿ ಜಿ ಪುರ ಪಂಚಾಯತ ಕಛೇರಿ ಆವರಣದಲ್ಲಿ ಜಮಾಬಂಧಿ ಕಾರ್ಯಕ್ರಮ

ಮಳವಳ್ಳಿ : ಮಳವಳ್ಳಿ ತಾಲೂಕಿನ ಬಿ ಜಿ ಪುರ ಪಂಚಾಯ್ತಿ ಕಛೇರಿ ಆವರಣ ದಲ್ಲಿ ೨೦೨೦-೨೧ನೇ ಸಾಲಿನ ಜಮಾಬಂಧಿ ಕಾರ್ಯಕ್ರಮ ಜರುಗಿತು..
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ ಪಂ ಇಒ ರಾಮಲಿಂಗಯ್ಯ ಅವರು ನರೇಗ ಯೋಜನೆಯಡಿ ಗ್ರಾಮದ ಶಾಲಾ ಕಾಂಪೌAಡ್, ಅಂಗನವಾಡಿ ಕಟ್ಟಡ, ರಸ್ತೆ ಚರಂಡಿ ನಿರ್ಮಾಣ ಸೇರಿದಂತೆ ಬಹುತೇಕ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳನ್ಮು ಕೈಗೆತ್ತಿ ಕೊಳ್ಳಲು ಅವಕಾಶವಿದ್ದು ಈ ಯೋಜನೆಯನ್ನು ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿಪಡಿಸುವಂತೆ ಕರೆ ನೀಡಿದರು.
ಅಲ್ಲದೆ ಸರ್ಕಾರದ ಯಾವುದೇ ಯೋಜನೆ ಅನುದಾನ ಬಳಕೆ ಮಾಡದೆ ಯೋಜನೆ ಹಣ ವಾಪಸ್ ಆದಲ್ಲಿ ಇದರಿಂದ ಪಂಚಾಯ್ತಿಗೆ ಮತ್ತೆ ಅನುದಾನ ಸಿಗುವುದು ಕಷ್ಟಸಾಧ್ಯವಾದ್ದರಿಂದ ಯೋಜನೆ ಹಣವನ್ನು ಸಕಾಲಕ್ಕೆ ಬಳಕೆ ಮಾಡಿಕೊಳ್ಳುವಂತೆ ಪಂಚಾಯ್ತಿ ಆಡಳಿತ ಮಂಡಳಿ ಹಾಗೂ ಪಿಡಿಒ ಅವರಿಗೆ ಸಲಹೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಗ್ರಾಮದ ಮುಖಂಡರು ಕಳೆದ ವರ್ಷ ವಿವಿಧ ಕಾಮಗಾರಿಗಳಿಗೆ ಕೈಗೊಳ್ಳಲು ಅನುಮೋದನೆ ನೀಡಿ ಹಣ ಸಹ ಕಾಯ್ದಿರಿಸಿದ್ದರೂ ಸಹ ಗುತ್ತಿಗೆದಾರ ಕೆಲಸ ನಿರ್ವಹಿಸದೆ ಕಾಮಗಾರಿ ಕುಂಠಿತಗೊAಡಿದೆ ಎಂದು ದೂರಿದರು.
ಅಲ್ಲದೇ ಬಿ ಜಿ ಪುರ ಗ್ರಾಮದಲ್ಲಿ ಮಂಟೇಸ್ವಾಮಿ ಮಠದಲ್ಲಿನ ವಾರದ ಪೂಜೆ, ವರ್ಷದ ಜಾತ್ರೆಗೆ ಸಾಕಷ್ಟು ಜನ ಆಗಮಿಸುತ್ತಿದ್ದು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಈಗಾಗಲೇ ನಿರ್ಣಯ ಕೈಗೊಂಡಿದ್ದರು ಇನ್ನೂ ಘಟಕ ಸ್ಥಾಪನೆ ಆಗಿಲ್ಲ ಎಂದು ಅರೋಪಿಸಿದರು.
ಈ ದೂರುಗಳ ಕುರಿತು ತಕ್ಷಣ ಕ್ರಮ ವಹಿಸುವಂತೆ ಇಒ ರಾಮಲಿಂಗಯ್ಯ ಪಿಡಿಒ ಅವರಿಗೆ ಆದೇಶಿಸಿದರು.
ಕಾರ್ಯಕ್ರಮ ದಲ್ಲಿ ಗ್ರಾ ಪಂ ಉಪಾಧ್ಯಕ್ಷ ಮಹಾದೇವಪ್ಪ, ಸಹಾಯಕ ಅಭಿಯಂತರ ಬೋರೇಗೌಡ, ಪಿಡಿಓ ಜಯಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: