December 21, 2024

Bhavana Tv

Its Your Channel

ಗುಂಡ್ಲುಪೇಟೆ ಪ್ರವಾಸಿ ತಾಣ ದಲ್ಲಿ ಶಾಸಕರಾದ ಸಿಎಸ್ ನಿರಂಜನ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜನಸಂಪರ್ಕ ಸಭೆ ನಡೆಯಿತು,

ಗುಂಡ್ಲುಪೇಟೆ ; ಪ್ರವಾಸಿ ತಾಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ತಮ್ಮ ೪೦ ತಿಂ ಗಳ ಅವಧಿಯಲ್ಲಿ ಏನೆಲ್ಲಾ ಅಭಿವೃದ್ಧಿ ಯಾಗಿದೆ ಎನ್ನುಹುದು ನಿಮ್ಮ ಮಾದ್ಯಮಾದಲ್ಲಿ ಪ್ರಸಾರ ಮಾಡಿದ್ದೀರಿ. ಹಾಗಾಗಿ ಅಭಿವೃದ್ಧಿ ತಾಲೂಕಿಗೆ ಏನು ಆಗಿಲ್ಲ ಎನ್ನುವ ವಿರೊದ ಪಕ್ಷದವರ ಮಾತು ಸುಳ್ಳು ಅನ್ನುವಂತಹದನ್ನ ಸೂಚಿಸುತಿದೆ ಎ೦ದರು. ಯಾವ್ಯಾವ ಇಲಾಖೆಯಲಿ ಎಷ್ಟು ಕೆಲಸಗಳು ಆಗುತಿವೆ ಅಂತ ಅವರೇ ಮಾಹಿತಿ ತೆಗೆದುಕೊಳ್ಳಲಿ ಅಂತ ತಿಳಿಸಿದರು.
ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತಿದ್ದೇವೆ ಅಲ್ಲದೆ ಇಂದು ವಿಧಾನ ಮಂಡಲ ಅಧಿವೇಶನ ವಿದ್ದರೂ ಪ್ರತಿ ಸೋಮವಾರ ಜನಸಂಪರ್ಕ ಸಭೆಯನು ಮುಂದುವರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿಯ ಮಂಡಲ ಅಧ್ಯಕ್ಷರಾದ ದೊಡುಂಡಿ ಜಗದೀಶ್, ಎಸ್ಸಿ ಮಂಜುನಾಥ್, ಅಭಿಷೇಕ್ ಗುಡಿಮನೆ, ಎಚ್ ವಿ ಮಂಜು ,ಡಿ ಮಹೇಶ್, ಮಲ್ಲೇಶ್, ನಾಗೇಂದ್ರ ಮಾಡ್ರಹಳ್ಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಂದೀಶ್, ಪ್ರಸಾದ್ ಹಸಗೂಲಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವರದಿ; ಸದಾನಂದ ಗುಂಡ್ಲುಪೇಟೆ

error: