ಮಂಡ್ಯ: ಇಂದು ಉಚಿತ ಬೃಹತ್ ಕೋವಿಡ್-೧೯ ಲಸಿಕಾ ಮೇಳ ನಗರದ ೨೭ ಮತ್ತು ೨೮ ವಾರ್ಡಿನ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ವಿವಿ ಬಡಾವಣೆಯಲ್ಲಿ ಉಚಿತವಾಗಿ ಲಸಿಕೆ ಹಾಕಲಾಯಿತು. ಲಸಿಕಾ ಮೇಳಕ್ಕೆ ನಗರಸಭಾ ಸದಸ್ಯ ರಾಮಲಿಂಗಯ್ಯ, ಸೌಭಾಗ್ಯ, ಶಿವಲಿಂಗ ಪತ್ರಕರ್ತ ಎಂ ಲೋಕೇಶ, ಸೈಯದ್ ಮಹಮ್ಮದ್,
ಜಮ್ಮಿಲ್ ಚಾಲನೆ ನೀಡಿದರು.
ನಂತರ ರಾಮಲಿಂಗಯ್ಯ ಮಾತನಾಡಿ ಸದರಿ ಉಚಿತ ಲಸಿಕೆ ಮೇಳವನ್ನು ಸರ್ಕಾರ ವತಿಯಿಂದ ಉಚಿತವಾಗಿ ಒಂದನೇ ಮತ್ತು ಎರಡನೇ ಡೋಸ್ ಕೋವಿಡ್ ಲಸಿಕೆಯನ್ನು ನೀಡುತ್ತಿದ್ದು, ಸಾರ್ವಜನಿಕರು ಮತ್ತು ವಾರ್ಡಿನ ಎಲ್ಲಾ ೧೮ ವರ್ಷದ ಮೇಲ್ಪಟ್ಟ ಸಾರ್ವಜನಿಕರು ತೆಗೆದು ಕೊಳ್ಳಬೇಕು ಮತ್ತು ಲಸಿಕೆಯ ಪ್ರಯೋಜವನ್ನು ಪಡೆದುಕೊಳ್ಳಬೇಕೆಂದುರು
ನಂತರ ಪತ್ರಕರ್ತ ಎಂ ಲೋಕೇಶ್ ಮಾತನಾಡಿ ಸದರಿ ಲಸಿಕೆ ಮೇಳವು ರಾಜ್ಯದ ಎಲ್ಲಾ ಕಡೆ ನಡೆಯುತ್ತಿದ್ದು ಕರೋನಾ ಮುಕ್ತವಾಗಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾರ್ವಜನಿಕ ಹಿತದೃಷ್ಟಿಯಿಂದ ನಡೆಸಲಾಗುತ್ತಿದೆ ಆದುದರಿಂದ ಸಾರ್ವಜನಿಕರು ಸ್ಥಳೀಯರು ಉಚಿತ ಲಸಿಕೆಯ ಪ್ರಯೋಜನ ಪಡೆದಕೊಳ್ಳಬೇಕು. ಸಕಾಲದಲ್ಲಿ ಲಸಿಕೆ ಪಡೆದು ಸಂಪೂರ್ಣ ಸುರಕ್ಷತೆ ಪಡೆಯಿರಿ ಎಂದರು
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ೭೧ನೇ ವರ್ಷದ ಜನ್ಮದಿನದ ಶುಭಾಶಯಗಳು ತಿಳಿಸಿದರು ನಗರಸಭಾ ಸದಸ್ಯರು ಸೌಭಾಗ್ಯ ಶಿವಲಿಂಗ್ ಅವರು ಮಾತನಾಡಿ ಈಗಾಗಲೇ ನಗರದಲ್ಲಿ ಎಲ್ಲಾ ಮನೆಮನೆಗಳಿಗೆ ತೆರಳಿ ಲಸಿಕೆ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದ್ದು ಲಸಿಕಾ ಪ್ರಯೋಜನವನ್ನು ಪಡೆದುಕೊಳ್ಳಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು
ಕಾರ್ಯಕ್ರಮದಲ್ಲಿ ಸೌಭಾಗ್ಯ, ಶಿವಲಿಂಗ, ರಾಮಲಿಂಗಯ್ಯ, ಲೋಕೇಶ ಎಂ, ಸಹಿದ್ ಅಹ್ಮದ್ ಜಮಿಲ್, ಆರೋಗ್ಯ ಸಹಾಯಕಿ ಸಂಧ್ಯಾ ಆಶಾ ಕಾರ್ಯಕರ್ತೆ ವನಿತಾ ಗೌಡ ನಗರಸಭೆ ಪ್ರಶಾಂತ್ ಶಿಕ್ಷಕ ಸಣ್ಣ ಶೆಟ್ಟಿ ಉಪಸ್ಥಿತರಿದ್ದರು.
ವರದಿ;ಲೋಕೇಶ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ