December 22, 2024

Bhavana Tv

Its Your Channel

ಕಾವಲು ಪಡೆಯ ವತಿಯಿಂದ ತಾಲ್ಲೂಕು ದಂಡಾಧಿಕಾರಿಗಳ ವಸತಿಗೃಹ ಸುಚಿತ್ವ ಮಾಡುವಂತೆ ಮನವಿ

ಗುಂಡ್ಲುಪೇಟೆ :- ಗುಂಡ್ಲುಪೇಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಾಲ್ಲೂಕು ದಂಡಾಧಿಕಾರಿಗಳ ವಸತಿಗೃಹ ಅಶುಚಿತ್ವದಿಂದ ಕೂಡಿದ್ದು ತುಂಬಾ ಹಾಳಾಗಿದೆ ಗಿಡಗಂಟೆಗಳು ಬೆಳೆದು ನಿಂತಿವೆ ಇದನ್ನು ದುರಸ್ತಿಪಡಿಸಿ ಕನ್ನಡ ಭವನಕ್ಕೆ ನೀಡಿದರೆ ಹಲವಾರು ಕನ್ನಡಪರ ಕಾರ್ಯಕ್ರಮ ನಡೆಸಲು ಅನುಕೂಲವಾಗುತ್ತದೆ ಆದ್ದರಿಂದ ಶಾಸಕರು ಇದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಅಬ್ದುಲ್ ಮಾಲಿಕ್ ರವರು ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಟೌನ್ ಅಧ್ಯಕ್ಷರಾದ ವೆಂಕಟೇಶ್ ಗೌಡ್ರು, ತಾಲೂಕು ಕಾರ್ಯಾಧ್ಯಕ್ಷರಾದ ಇಲಿಯಾಸ್, ಸಲಹೆಗಾರರಾದ ಮುಬಾರಕ್ ಎಸ್, ಟೌನ್ ಉಪಧ್ಯಕ್ಷರಾದ ಸಾಧಿಕ್ ಪಾಶ, ಪದಾಧಿಕಾರಿಗಳಾದ ಹೆಚ್ ರಾಜು, ಮಿಮಿಕ್ರಿ ರಾಜು ಹಾಜರಿದ್ದರು
ವರದಿ ಸದಾನಂದ ಕನ್ನೆಗಾಲ ಗುಂಡ್ಲುಪೇಟೆ

error: