April 26, 2024

Bhavana Tv

Its Your Channel

ಸೆ.೨೭ ಭಾರತ ಬಂದ್‌ಗೆ ರೈತಸಂಘ ಮತ್ತು ಪ್ರಗತಿಪರ ಸಂಘಟನೆಗಳಿOದ ಬೆಂಬಲ

ಗುoಡ್ಲುಪೇಟೆ : ಸೆಪ್ಟೆಂಬರ್ ೨೭ರಂದು ಸ೦ಯುಕ್ತ ಕಿಶಾನ್ ಕರೆ ಕೊಟ್ಟಿರುವ ಬಂದ್‌ಗೆ ಹಸಿರು ಸೇನೆ ಮತ್ತು ರಾಜ್ಯ ರೈತ ಸಂಘದವರು ಕನ್ನಡಪರ ಸಂಘಟನೆಗಳು ಕೈಜೋಡಿಸಿ ಪೂರ್ವಭಾವಿ ಸಭೆಯನ್ನು ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಯಿತು.
ರೈತ ಮುಖಂಡರಾದ ಕಡಬೂರು ಮಂಜುನಾಥ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರನ್ನು ಬೆನ್ನೆಲುಬು ಎಂದು ಹೇಳುತ್ತಾರೆ ಆದರೆ ರೈತರಿಗೆ ಸರ್ಕಾರದಿಂದ ಯಾವುದೇ ರೀತಿಯ ಅನುಕೂಲಗಳು ಆಗುವುದಿಲ್ಲ ಕಳೆದ ೧೦ ತಿಂಗಳಿAದ ಡೆಲ್ಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ. ಹಾಗಾಗಿ ದೇಶಾದ್ಯಂತ ಸೆ. ೨೭ರಂದು ನಡೆಯುವ ಬೃಹತ್ ಹೋರಾಟಕ್ಕೆ ರೈತಸಂಘದಿAದ ಮತ್ತು ಪ್ರಗತಿಪರ ಸಂಘಟನೆಗಳು ಬೆಂಬಲವನ್ನು ಸೂಚಿಸಲಾಗಿದೆ ಎಂದು ತಿಳಿಸಿದರು.

ನಂತರ ಶುಭಾಷ್ ಮಾಡ್ರಹಳ್ಳಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ ವಿರೋಧ ನೀತಿಗಳನ್ನು ಅನುಸರಿಸುತ್ತಿವೆ. ಬಂಡವಾಳಶಾಹಿ ಮತ್ತು ಉದ್ದಿಮೆದಾರರ ಪರ ಇವೆ ಎಂದು ತಿಳಿಸಿದರು
ನಂತರ ಮಾಡ್ರಹಳ್ಳಿ ಮಹದೇವಪ್ಪ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರನ್ನು ಬೆನ್ನೆಲುಬು ಎಂದು ಹೇಳುತ್ತಾರೆ ಆದರೆ ಅದು ಮಾತಿಗಷ್ಟೇ ಬಂಡವಾಳಶಾಹಿ ಗಳಿಗೆ ಅನುಕೂಲವನ್ನು ಮಾಡುತ್ತದೆ ಹೊರತು ರೈತರಿಗೆ ಯಾವುದೇ ತರಹದ ಅನುಕೂಲಗಳು ಸಿಗುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ೧೫ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ರೈತರಿಗೆ ಬೆಂಬಲವನ್ನು ಸೂಚಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುಂಡ್ಲುಪೇಟೆ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಮಾಲಿಕ್, ಕರವೇ ತಾಲೂಕು ಅಧ್ಯಕ್ಷರಾದ ಸುರೇಶ್ ನಾಯಕ್ ನಾರಾಯಣ ಗೌಡರ ಬಣ, ಮತ್ತೋರ್ವ ಕರವೇ ಅಧ್ಯಕ್ಷ ಮೋಹನ್ , ಶುಭಾಷ್ ಮಾಡ್ರಹಳ್ಳಿ, ಮಾನವ ಹಕ್ಕು ಸಮಿತಿಯ ಜಿಲ್ಲಾ ಕಾರ್ಯದರ್ಶಿ ಮುತ್ತಣ್ಣ,ಮಾನವ ಬಂಧುತ್ವ ವೇದಿಕೆ, ಆರ್ ಸೋಮಣ್ಣ, ಎಸ್ ಡಿ ಪಿ ಐ ಸಂಘಟನೆಯವರು, ಆಟೋ ಚಾಲಕರ ಸಂಘದವರು, ಗಡಿನಾಡು ಯುವ ವೇದಿಕೆ ಮತ್ತು ವೈಭವ ಕರ್ನಾಟಕ ಸಂಘದವರು, ಇನ್ನೂ ಅನೇಕ ಕನ್ನಡಪರ ಸಂಘಟನೆಗಳು ರೈತರಿಗೆ ಬೆಂಬಲವನ್ನು ಸೂಚಿಸಿದ್ದಾರೆ. ತಾಲೂಕು ರೈತ ಮುಖಂಡರಾದ ಕಡಬೂರು ಮಂಜುನಾಥ್, ಶಿವಪುರ ಮಹದೇವಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷರಾದ ಶಿವಮಲ್ಲು ಹೊನ್ನೇಗೌಡನಹಳ್ಳಿ, ಮಾದು, ದಿಲೀಪ್, ಶಾಂತಮಲ್ಲಪ್ಪ ವೀರಪುರ ನಾಗರಾಜು, ನಾಗಣ್ಣ ಬಸವರಾಜು, ಮಾಡ್ರಳ್ಳಿ ಮಹದೇವಪ್ಪ, ಕುಂದಕೆರೆ ಸಂಪತ್ತು, ಇನ್ನು ಮುಂತಾದ ರೈತ ಮುಖಂಡರು ಮತ್ತು ಹಲವಾರು ಕನ್ನಡಪರ ಸಂಘಟನೆಗಳು ಭಾಗಿಯಾಗಿದ್ದರು

ವರದಿ ಸದಾನಂದ ಕಣ್ಣೆ ಗಾಲ ಗುಂಡ್ಲುಪೇಟೆ

error: