December 22, 2024

Bhavana Tv

Its Your Channel

ಕಾಡಾನೆಗಳ ದಾಳಿ , ಬೆಳೆದು ನಿಂತಿದ್ದ ಭತ್ತದ ಫಸಲನ್ನು ತಿಂದು ನಾಶಪಡಿಸಿದ ಕಾಡಾನೆ

ಮಳವಳ್ಳಿ : ಕಾಡಾನೆಗಳ ತಂಡವೊAದು ದಾಳಿ ಮಾಡಿ ಬೆಳೆದು ನಿಂತಿದ್ದ ಭತ್ತದ ಫಸಲನ್ನು ತಿಂದು ನಾಶ ಪಡಿಸಿರುವ ಘಟನೆ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದಲ್ಲಿ ಜರುಗಿದೆ.

ಆನೆಗಳ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ಭತ್ತದ ಬೆಳೆ ನಾಶವಾಗಿ ಲಕ್ಷಾಂತರ ರೂ ನಷ್ಟ ಅನುಭವಿಸಿರುವ ರೈತರು ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿ ರೈತರು ಕಂಗಾಲಾಗಿದ್ದಾರೆ.
ಈ ಗ್ರಾಮದ ಮಹದೇವ ಎಂಬ ಯುವ ರೈತ ಬೇರೆಯವರ ಒಂದು ಎಕರೆ ಜಮೀನಿನನ್ನು ಪಾಲಿಗೆ ಪಡೆದು ಭತ್ತ ನಾಟಿ ಮಾಡಿಸಿದ್ದು ಒಳ್ಳೆ ಬೆಳೆ ಬಂದಿದ್ದು ನಿನ್ನೆ ರಾತ್ರಿ ಈ ಜಮೀನಿಗೆ ದಾಳಿ ಇಟ್ಟಿರುವ ೪-೫ ಆನೆಗಳ ತಂಡ ಇಡೀ ಭತ್ತದ ಬೆಳೆಯನ್ನು ತಿಂದು ನಾಶ ಪಡಿಸಿವೆ.
ಕಳೆದ ೫-೬ ತಿಂಗಳ ಹಿಂದಷ್ಟೇ ಇದೇ ರೈತ ತಮ್ಮ ಸ್ವಂತ ಜಮೀನಿನಲ್ಲಿ ಬೆಳೆದಿದ್ದ ರಾಗಿಯನ್ನು ಕೊಯ್ದು ಮೆದೆ ಹಾಕಿದ್ದು ನಾಳೆ ಒಕ್ಕಣೆ ಮಾಡಿ ಕೊಳ್ಳಬೇಕು ಎಂದುಕೊAಡಿರುವಾಗಲೇ ಹಿಂದಿನ ರಾತ್ರಿ ಮೆದೆಗೆ ದಾಳಿ ಇಟ್ಟ ಆನೆಗಳು ಇಡೀ ರಾಗಿ ಮೆದೆಯನ್ನೇ ತಿಂದು ನಾಶ ಪಡಿಸಿದ್ದವು ಎನ್ನಲಾಗಿದೆ.
ಇಡೀ ಕುಟುಂಬಕ್ಕೆ ವರ್ಷವಿಡೀ ಆಗುವಷ್ಟು ಬೆಳೆದಿದ್ದ ರಾಗಿಯನ್ನು ಆನೆಗಳು ತಿಂದು ಹಾಕಿದ್ದರಿಂದ ಇದೇ ಕೊರಗಿನಲ್ಲಿ ಮಹದೇವ ಅವರ ತಂದೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ತೀರಿಕೊಂಡರು ಎಂದು ಗೊತ್ತಾಗಿದೆ.
ಜೊತೆಗೆ ರಾಗಿ ಫಸಲಿನ ನಷ್ಟದ ಪರಿಹಾರವೇ ಇನ್ನೂ ಕೈಗೆ ಸಿಕ್ಕದೇ ಇರುವಾಗ ಇದೀಗ ಸಾಲಸೋಲ ಮಾಡಿ ಬೆಳೆದಿದ್ದ ಭತ್ತದ ಬೆಳೆ ಸಹ ಆನೆಗಳ ದಾಳಿಗೆ ಸಿಕ್ಕು ನಾಶವಾಗಿರುವುದರಿಂದ ಕಂಗಾಲಾಗಿರುವ ಮಹದೇವ ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಪರಿಹಾರ ಕೊಡಿಸಲು ಮುಂದಾಗದಿದ್ದರೆ ಮೊದಲೇ ಸಾಲದ ಸುಳಿಗೆ ಸಿಲುಕಿರುವ ನಾನು ವಿಷ ಕುಡಿಯ ಬೇಕಾಗುವುದು ಎಂದು ಎಚ್ಚರಿಸಿದ್ದಾರೆ.
ಇಷ್ಟಾದರೂ ಅರಣ್ಯ ಇಲಾಖೆಯ ಗಾಡ೯ ವೊಬ್ಬರನ್ನು ಬಿಟ್ಟರೆ ಬೇರಾವ ಅಧಿಕಾರಿಯೂ ಅತ್ತ ಸುಳಿಯುವ ಗೋಜಿಗೆ ಹೋಗಿಲ್ಲ.
ಮಹದೇವ ಅವರ ಜಮೀನಿನ ಜೊತೆಗೆ ಅದೇ ಗ್ರಾಮದ ಮಧು ಚಿಕ್ಕತಮ್ಮಣ್ಣ ಅವರ ಜಮೀನಿಗೆ ಸಹ ದಾಳಿ ಇಟ್ಟಿರುವ ಆನೆಗಳು ಸದರಿ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ತಿಂದು ನಾಶ ಪಡಿಸಿದ್ದು ಬೆಳೆ ಕಳೆದು ಕೊಂಡ ರೈತರಿಗೆ ತಕ್ಷಣ ಸೂಕ್ತ ಪರಿಹಾರ ಒದಗಿಸುವಂತೆ ಗ್ರಾಮದ ಮುಖಂಡ ಮನು ಅರಣ್ಯ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ವರದಿ: ಮಲ್ಲಿಕಾರ್ಜುನ ಮಳವಳ್ಳಿ

error: