December 22, 2024

Bhavana Tv

Its Your Channel

ಸೆಪ್ಟೆಂಬರ್ ೨೭ ರಂದು ನಡೆಯುವ ಭಾರತ್ ಬಂದ್‌ಗೆ ಬೆಂಬಲಿಸುವOತೆ ಮಳವಳ್ಳಿಯಲ್ಲಿ ಪಂಜಿನ ಮೆರವಣಿಗೆ

ಮಳವಳ್ಳಿ ; ರೈತ ವಿರೋಧಿ ಭೂಸುಧಾರಣೆ ಕಾಯ್ದೆ. ವಿದ್ಯುತ್ ಕಾಯ್ದೆ .ಎಪಿಎಂಸಿ. ಕಾಯ್ದೆಗೆ ತಿದ್ದುಪಡಿ .ವಿರೋಧಿಸಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತ್ರಿ ಕಾಯ್ದೆ ಜಾರಿಗಾಗಿ ನಿರುದ್ಯೋಗ. ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ. ಗ್ಯಾಸ್.ಪೆಟ್ರೊಲ್ ರಸಗೊಬ್ಬರ .ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಸೆಪ್ಟೆಂಬರ್ ೨೭ ರಂದು ನಡೆಯುವ ಭಾರತ್ ಬಂದ್‌ಗೆ ಬೆಂಬಲಿಸುವAತೆ ಮಳವಳ್ಳಿ ಯಲ್ಲಿ ಪಂಜಿನ ಮೆರವಣಿಗೆ ನಡೆಸಿ ವರ್ತಕರು ನಾಗರಿಕರು ಸಹಕರಿಸ ಬೇಕೆಂದು ಮನವಿ ಮಾಡಲಾಯಿತು.

ರೈತ ವಿರೋಧಿ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತ ಜನವಾದಿ ಮಹಿಳಾ ಸಂಘಟನೆ. ಕರ್ನಾಟಕ ಪ್ರಾಂತ ರೈತ ಸಂಘ. ಸಿಐಟಿಯು. ಡಿವೈಎಫ್‌ಐ. ಸಂಘಟನೆಗಳು ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ. ವರ್ತಕರಲ್ಲಿ ನಾಗರಿಕರಲ್ಲಿ ಬಂದ್‌ಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು
ಪ್ರತಿಭಟನೆಯನ್ನು ಉದ್ದೇಶಿಸಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅದ್ಯಕ್ಷರಾದ ದೇವಿ ಮಾತನಾಡುತ್ತ. ಕೆ೦ದ್ರ ಸರ್ಕಾರ, ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಘೋಷಣೆ ಮಾಡಿದ ಒಂದು ವರ್ಷ ಹಾಗು ದೆಹಲಿಯಲ್ಲಿನ ಐತಿಹಾಸಿಕ ರೈತ ಹೋರಾಟಕ್ಕೆ ಹತ್ತು ತಿಂಗಳು ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ “ರೈತಾಪಿ ಕೃಷಿಯನ್ನು ನಾಶ ಮಾಡಿ ಕೃಷಿ’ಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸಲು ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ಹಾಗು ವಿದ್ಯುತ್ ಮಸೂದೆಯನ್ನು ರದ್ದು ಮಾಡಬೇಕು ಹಾಗು ಕೃಷಿ ಉತ್ಪನ್ನಗಳ ಉತ್ಪಾದನೆಯ ವೆಚ್ಚದ ಮೇಲೆ ಶೇ. ೫೦ ರಷ್ಟು ಲಾಭವನ್ನು ಖಾತರಿ ಮಾಡುವ “ಕನಿಷ್ಟ ಬೆಂಬಲ ಬೆಲೆ ಕಾನೂನು” ಜಾರಿಗೆ ತರಬೇಕೆಂದು ಆಗ್ರಹಿಸಿ ಐದು ನೂರಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ ೨೭ ರಂದು “ಭಾರತ್ ಬಂದ್ ಗೆ ಕರೆ ನೀಡಿದೆ.
ಹೈನುಗಾರಿಕೆಯಲ್ಲಿ ತೊಡಗಿರುವ ಅಸಂಖ್ಯಾತ ರೈತರು, ಕೃಷಿಕೂಲಿಕಾರರು ಹಾಗೂ ದಲಿತರು, ಅಲ್ಪಸಂಖ್ಯಾತರ ಬದುಕು. ಆಹಾರದ ಹಕ್ಕಿನ ಮೇಲಿನ ದಾಳಿ ನಡೆಸುತ್ತಿರುವ ‘ಗೋಹತ್ಯೆ ನಿಷೇಧ ಕಾಯ್ದೆ”ಗೆ ತಂದಿರುವ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ಕೈಬಿಡಬೇಕು, ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಗಳಿಂದ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗಳನ್ನು ತಂದ ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಮಾರ್ಪಡಿಸಿರುವ ಕ್ರಮವನ್ನು ಕೈ ಬಿಡಬೇಕು. ಮಾನ, ಮಾರ್ಯಾದೆ ಬಿಟ್ಟು ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಲು ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಕೇಂದ್ರ ಸರ್ಕಾರ ಹಗಲು ದರೋಡ ನಡೆಸುತ್ತಿದೆ ಎಂದು ಕಿಡಿ ಕಾರಿದರು.
ಜನವಾದಿ ಮಹಿಳಾ ಸಂಘಟನೆಯ ಸುನೀತ ಸುಶೀಲಾ . ಪ್ರೇಮ ಜಯಶೀಲಾ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಕಾರ್ಯದರ್ಶಿ ಲಿಂಗರಾಜ ಮೂರ್ತಿ. ಗುರುಸ್ವಾಮಿ ಚಿಕ್ಕಸ್ವಾಮಿ .ಮರಿಗೌಡ ಕೃಷ್ಣಪ್ಪ ಸಿಐಟಿಯು ತಿಮ್ಮೇಗೌಡ ಗೌರಮ್ಮ ಸವಿತ ಮಹದೇವಮ್ಮ ಡಿವೈಎಫ್ ಐನ ಶಿವಕುಮಾರ್ ಹೇಮಂತ್ ಡಿ ಎಸ್ ಎಸ್ ನ ಯತೀಶ್ , ಮಹೇಶ್ , ಲಿಂಗದೇವರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: