December 22, 2024

Bhavana Tv

Its Your Channel

ಗುಂಡ್ಲುಪೇಟೆ; ಹಿರಿಯ ಪೌರಕಾರ್ಮಿಕರಿಗೆ ಸನ್ಮಾನ.

ಗುಂಡ್ಲುಪೇಟೆ:- ಪಟ್ಟಣದ ಪುರಸಭೆಯಲ್ಲಿ ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಕಾವಲುಪಡೆಯ ಸಂಘಟನೆಯ ವತಿಯಿಂದ ಹಿರಿಯ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಹಾಗೂ ಎಲ್ಲಾ ಪೌರಕಾರ್ಮಿಕರಿಗೆ ಮತ್ತು ಪುರಸಭೆಯ ನೌಕರರಿಗೆ ಸಿಹಿ ವಿತರಿಸಿ ಶುಭ ಕೋರಲಾಯಿತು.

ಕಾವಲುಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಎ. ಅಬ್ದುಲ್ ಮಾಲಿಕ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರ ಪಾತ್ರ ಬಹಳ ಮುಖ್ಯ ವಾದದ್ದು ಹಾಗಾಗಿ ಪೌರಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪೌರಕಾರ್ಮಿಕರಿಗೆ ಶುಭವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಪಿ ಗಿರೀಶ್, ಉಪಾಧ್ಯಕ್ಷರಾದ ದೀಪಿಕಾ ಅಶ್ವಿನ್, ಎಲ್ಲಾ ಸದಸ್ಯರುಗಳು, ಪುರಸಭೆಯ ಮುಖ್ಯ ಅಧಿಕಾರಿಯಾದ ಹೇಮಂತ್ ರಾಜು, ಹಿರಿಯ ಹೋರಾಟಗಾರರಾದ ಬ್ರಹ್ಮಾನಂದ ಮತ್ತು ಕಾವಲುಪಡೆಯ ತಾಲೂಕು ಅಧ್ಯಕ್ಷರಾದ ಎ. ಅಬ್ದುಲ್ ಮಾಲಿಕ್, ಪೌರ ಕಾರ್ಮಿಕರ ಸೇವೆಯನ್ನು ಮುಕ್ತಕಂಠದಿAದ ಶ್ಲಾಘಿಸಿದರು.
ಕಾವಲುಪಡೆಯ ತಾಲೂಕು ಗೌರವಾಧ್ಯಕ್ಷರಾದ ವೆಂಕಟೇಶ್ ಗೌಡ್ರು, ಕಾರ್ಯದರ್ಶಿಗಳಾದ ಎಸ್ ಮುಬಾರಕ್, ಕಾರ್ಯಾಧ್ಯಕ್ಷರಾದ ಇಲಿಯಾಸ್, ಟೌನ್ ಉಪಾಧ್ಯಕ್ಷರಾದ ಸಾಧಿಕ್ ಪಾಶ, ಸಂಚಾಲಕರಾದ ಮಿಮಿಕ್ರಿ ರಾಜು ಹಾಜರಿದ್ದರು
ವರದಿ:ಸದಾನಂದ ಕನ್ನೆಗಾಲ ಗುಂಡ್ಲುಪೇಟೆ

error: