December 22, 2024

Bhavana Tv

Its Your Channel

ಗ್ರಾಮಸ್ಥರೊಡನೆ ಸ್ವತಃ ಗುದ್ದಲಿ ಹಿಡಿದು ಶಾಲಾ ಆವರಣ ಸ್ವಚ್ಚಗೊಳಿಸಿದ ಬಿಇಒ ಚಿಕ್ಕಸ್ವಾಮಿ.

ಮಳವಳ್ಳಿ : ವಿಶಾಲವಾದ ಶಾಲಾ ಮೈದಾನದಲ್ಲಿ ಬೆಳೆದುಕೊಂಡಿದ್ದ ಗಿಡಗಂಟೆಗಳು ದೊಡ್ಡ ದೊಡ್ಡ ಮುಳ್ಳಿನ ಪೊದೆಗಳನ್ನು ಗ್ರಾಮದ ಯುವಕರು, ವಿದ್ಯಾರ್ಥಿಗಳ ಜೊತೆಗೆ ನರೇಗಾ ಯೋಜನೆಯ ಕೂಲಿಕಾರರು ಸೇರಿ ಸ್ವಚ್ಛಗೊಳಿಸುವ ಮೂಲಕ ಮಾದರಿ ಕಾರ್ಯ ಕೈಗೊಂಡ ಪ್ರಸಂಗ ತಾಲೂಕಿನ ತಳಗವಾದಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಹಾಗೂ ಪದವಿ ಪೂರ್ವ ಕಾಲೇಜು ಈ ಎಲ್ಲಾ ಸಂಸ್ಥೆಗಳು ಒಂದೇ ಆವರಣದಲ್ಲಿ ಇರುವ ವಿಶಾಲವಾದ ಶೈಕ್ಷಣಿಕ ಆವರಣವಿದ್ದು ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಒಂದುವರೆ ವರ್ಷದಿಂದ ಮುಚ್ಚಿದ್ದ ಶಿಕ್ಷಣ ಸಂಸ್ಥೆ ಗಳು ಇದೀಗ ಆರಂಭವಾಗಿವೆ.
ಆದರೆ ಸುದೀರ್ಘ ಕಾಲ ಮಕ್ಕಳ ಕಲರವ ಇಲ್ಲದೆ ಪಾಳು ಬಿದ್ದಂತಾಗಿ ಹೋಗಿದ್ದ ಶಾಲಾ ಆವರಣದಲ್ಲಿ ಗಿಡಗಂಟೆಗಳ ಜೊತೆ ಬೃಹತ್ ಗಾತ್ರದ ಪೊದೆಗಳು ಬೆಳೆದು ಕೊಂಡಿದ್ದನ್ನು ಗಮನಿಸಿದ ಗ್ರಾಮದ ಯುವ ಮುಖಂಡರು, ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರೂ ಟಿ ಎಂ ಪ್ರಕಾಶ್ ಅವರು ಸಾರ್ವಜನಿಕರ ಹಾಗೂ ಗ್ರಾಮ ಪಂಚಾಯ್ತಿಯವರ ಸಹಕಾರ ದೊಂದಿಗೆ ಇಡೀ ಶಾಲಾ ಅವರಣವನ್ನು ಸ್ವಚ್ಚ ಗೊಳಿಸುವುದರ ಜೊತೆಗೆ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುವ ಕಾರ್ಯಯೋಜನೆ ಯನ್ನು ಕೈಗೆತ್ತಿಕೊಂಡಿದ್ದರ ಫಲವಾಗಿ ಇಂದು ಗ್ರಾಮದ ಮುಖಂಡರು, ಎಸ್ ಡಿ ಎಂ ಸಿ ಯವರು, ಶಾಲಾ ಶಿಕ್ಷಕರು ಸಿಬ್ಬಂದಿ ಜೊತೆಗೆ ವಿದ್ಯಾರ್ಥಿ ಗಳು, ಸೇರಿ ಇಡೀ ಶಾಲಾ ಆವರಣವನ್ನು ಸ್ವಚ್ಚ ಗೊಳಿಸುವ ಕಾರ್ಯಕ್ಕೆ ಇಳಿದು ಬಿಟ್ಟರು.
ಗ್ರಾಮದ ಮುಖಂಡರು ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಸಾತ್ ನೀಡಿದ ತಳಗವಾದಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ನರೇಗ ಯೋಜನೆಯ ಕೂಲಿಕಾರರ ಕಳುಹಿಸಿ ಕೊಟ್ಟಿದ್ದರು.
ಈ ಎಲ್ಲರ ಶ್ರಮದ ಫಲವಾಗಿ ಇಂದು ಬೆಳಿಗ್ಗೆ ಯಿಂದ ಶಾಲಾ ಆವರಣವನ್ನು ಸ್ವಚ್ಚ ಗೊಳಿಸುವ ಕಾರ್ಯ ಭರದಿಂದ ಸಾಗಿತು.
ಈ ಶಾಲಾ ಆವರಣದ ಸ್ವಚ್ಚತಾ ಕಾರ್ಯಕ್ಕೆ ಯಾವುದಾದರು ಗಿಡಕ್ಕೆ ನೀರು ಹಾಕುವ ಮೂಲಕ ಸಾಂಕೇತಿಕ ಚಾಲನೆ ನೀಡಿ ಎಂದು ಕರೆದರೆ ಸಾಂಕೇತಿಕ ಕಾರ್ಯವನ್ನು ಬದಿಗೆ ತಳ್ಳಿ ಸ್ವತಃ ಕೈಯಲ್ಲಿ ಎಲೆಗುದುಲಿ ಹಿಡಿದು ಮೈದಾನಕ್ಕಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಅವರು ಮೈದಾನದಲ್ಲಿ ಬೆಳೆದು ನಿಂತಿದ್ದ ಗಿಡಗಂಟೆಗಳನ್ನು ಕತ್ತರಿಸುವ ಮೂಲಕ ಕೆಲಕಾಲ ಶ್ರಮದಾನ ಮಾಡಿ ನೆರೆದಿದ್ದ ಗ್ರಾಮಸ್ಥರು, ಶಿಕ್ಷಕರು ವಿದ್ಯಾರ್ಥಿಗಳು ಅಚ್ಚರಿ ಪಡುವುದರ ಜೊತೆಗೆ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಈ ಕುರಿತು ಮಾತನಾಡಿದ ಬಿಇಒ ಚಿಕ್ಕಸ್ವಾಮಿ ಅವರು ಪರಿಹಾರ ಸ್ವಚ್ಚ ವಾಗಿದ್ದರೆ ಜನರ ಮಕ್ಕಳ ಆರೋಗ್ಯ ಉತ್ತಮ ವಾಗಿರಲು ಸಾಧ್ಯ. ಅದರಲ್ಲೂ ಗಿಡಮರಗಳ ನಾಶ ದಿಂದ ಆಮ್ಲಜನಕದ ಕೊರತೆ ಉಂಟಾದಲ್ಲಿ ಎಂತಹ ಭೀಕರ ಪರಿಸ್ಥಿತಿಯನ್ನು ಎದುರಿಸ ಬೇಕಾಗುತ್ತದೆ ಎಂಬುದರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದ್ದು ಈ ನಿಟ್ಟಿನಲ್ಲಿ ತಳಗವಾದಿ ಗ್ರಾಮದ ಮುಖಂಡರು, ಎಸ್ ಡಿ ಎಂ ಸಿ ಯವರು ಹಾಗೂ ಶಾಲಾ ಸಿಬ್ಬಂದಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಉತ್ತಮ ಗಿಡಗಳನ್ನು ನೆಡುವ ಮೂಲಕ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.
ಸ್ವಚ್ಚತಾ ಕಾರ್ಯದ ರುವಾರಿಯಾದ ಎಸ್ ಡಿ ಎಂ ಸಿ ಅಧ್ಯಕ್ಷ ಟಿ ಎಂ ಪ್ರಕಾಶ್ ಮಾತನಾಡಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಜೊತೆ ಸೇರಿ ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಶಾಲಾ ಆವರಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸಿ ವಿದ್ಯಾರ್ಥಿಗಳಿಗೆ ಉತ್ತಮ ಆಟದ ಮೈದಾನ ನಿರ್ಮಿಸಿ ಕೊಡುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಇಒ ಚಿಕ್ಕಸ್ವಾಮಿ ಅವರು ಗಿಡಗಳನ್ನು ನೆಡುವ ಮೂಲಕ ಶಾಲಾ ಆವರಣದಲ್ಲಿ ಗಿಡ ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಗ್ರಾಮದ ಮುಖಂಡರಾದ ರಾಜೇಶ್, ಪಟೇಲ್ ಶಿವಣ್ಣ, ಚಂದ್ರಶೇಖರ್, ವಿಶ್ವನಾಥ್, ಪ್ರಾಂಶುಪಾಲರಾದ ಶ್ರೀನಿವಾಸ್ ಉಪ ಪ್ರಾಂಶುಪಾಲ ಚಂದ್ರಶೇಖರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: