
ಭಟ್ಕಳ: ಅಕ್ಟೋಬರ್ ೧ರಿಂದಲೇ ಆಹಾರ ಸುರಕ್ಷತಾ ಕಾಯ್ದೆ ಜಾರಿಯಾಗುತ್ತಿದ್ದು, ಹೊಟೆಲ್, ಬೇಕರಿ, ಕಿರಾಣಿ, ತರಕಾರಿ, ಕೋಲ್ಡಿಂಕ್ಸ್ ಸೇರಿದಂತೆ ಆಹಾರ ಉತ್ಪಾದನೆ ಹಾಗೂ ವಿತರಣಾ ಘಟಕಗಳು ಕಾಯ್ದೆಯ ಅನುಸಾರವಾಗಿಯೇ ವ್ಯಾಪಾರ, ವಹಿವಾಟು ನಡೆಸಬೇಕು ಎಂದು ಜಿಲ್ಲಾ ಆರೋಗ್ಯ ಸುರಕ್ಷಾ ಅಧಿಕಾರಿ ಡಾ.ರಾಜಶೇಖರ ಹೇಳಿದರು.
ಅವರು ತಾಲೂಕಿನ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಜಿಲ್ಲಾಡಳಿತ, ಕಾರವಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹಾಗೂ ಭಟ್ಕಳ ತಾಲ್ಲೂಕು ವರ್ತಕರ ಸಂಘದ ಸಹಯೋಗದೊಂದಿಗೆ ಆಯೋಜಿಸಲಾದ ಆರೋಗ್ಯ ಸುರಕ್ಷತಾ ಕಾಯ್ದೆ ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ಪರಿಶುದ್ಧ ಆಹಾರ ಪಡೆಯುವುದು ಸಾರ್ವಜನಿಕರ ಹಕ್ಕಾಗಿದೆ. ೨೦೦೬ರಿಂದಲೇ ಕಲಬೆರಕೆ ತಡೆ ಕಾನೂನು ಜಾರಿಯಲ್ಲಿದ್ದರೂ ಅದರಲ್ಲಿ ಅಂತಹ ಸತ್ವ ಇದ್ದಿರಲಿಲ್ಲ. ಆದರೆ ಇದೀಗ ಜಾರಿಯಾಗುತ್ತಿರುವ ಕಾನೂನು ಕಠಿಣವಾಗಿರಲಿದೆ. ಕಲಬೆರಕೆ, ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಮಾರಾಟ ಕೊಲೆಯ ರೀತಿಯಲ್ಲಿಯೇ ಅಪರಾಧವಾಗುತ್ತದೆ ಎಂದರು. ಹೊಟೆಲ್‌ಗಳಲ್ಲಿ ಹಳಸಿದ ಆಹಾರ ಗಳಿದ್ದರೆ ಅದನ್ನು ಗ್ರಾಹಕರಿಗೆ ನೀಡ ಬಾರದು, ಸರಕಾರಿ ವಿದ್ಯಾರ್ಥಿ ನಿಲಯ, ಪಡಿತರ ಅಂಗಡಿ, ದೇವಸ್ಥಾನದಲ್ಲಿ ಆಹಾರವಾಗಿ ಸೇವಿಸಲ್ಪಡುವ ಪ್ರಸಾದಕ್ಕೂ ಇನ್ನು ಮುಂದೆ ಕಾನೂನು ಅನ್ವಯವಾಗಲಿದೆ. ಆಹಾರ ವಸ್ತುಗಳನ್ನು ಮಾರಾಟ ಮಾಡುವ ಪ್ರತಿಯೋರ್ವರೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪರವಾನಿಗೆ ಪಡೆದಿರಬೇಕು, ಯಾರಿಂದಲೋ ಆಹಾರ ವಸ್ತುಗಳನ್ನು ಪಡೆದು ಗ್ರಾಹಕರಿಗೆ ನೀಡಿ, ಆಹಾರಕ್ಕೂ ನಮಗೂ ಸಂಬAಧ ಇಲ್ಲ ಎನ್ನಲು ಆಗದು, ಸಾರ್ವಜನಿಕರು ತಾವು ಖರೀದಿಸುವ ಆಹಾರ ಪದಾರ್ಥವು ಕಳಪೆಯಾಗಿದ್ದರೆ, ನಕಲಿ ಅಥವಾ ತಪ್ಪು ಮಾಹಿತಿಯಿಂದ ಕೂಡಿದ್ದರೆ ದೂರು ನೀಡಲು ಅವಕಾಶ ಇದೆ ಎಂದು ವಿವರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ತಹಶೀಲ್ದಾರ ಎಸ್.ರವಿಚಂದ್ರ, ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಆಹಾರ ಮಾರಾಟಕ್ಕೆ ಹೊಸ ಕಾಯ್ದೆಯಿಂದ ಕಡಿವಾಣ ಬೀಳಲಿದೆ. ಪ್ಯಾಕಿಂಗ್ ಘಟಕಗಳು, ಸಂಸ್ಕರಣೆ ಮಾಡುವವರು, ವಿತರಕರು, ಸಾಗಾಣಿಕೆ ಮಾಡುವವರು ಜಾಗೃತೆ ವಹಿಸಬೇಕು ಎಂದರು.
ವೇದಿಕೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಅರುಣ ಕಾಶಿ ಭಟ್, ಭಟ್ಕಳ ಪುರಸಭಾ ಕೈಸರ್ ಮೊತೇಶಮ್, ಭಟ್ಕಳ ವರ್ತಕರ ಸಂಘದ ಅಧ್ಯಕ್ಷ ಶ್ರೀಧರ ಶ್ಯಾನಭಾಗ, ಕಾರ್ಯದರ್ಶಿ ಇಮ್ಮಿಯಾಜ್ ಮೊದಲಾದವರು ಉಪಸ್ಥಿತರಿದ್ದರು.


More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ