December 22, 2024

Bhavana Tv

Its Your Channel

ಮಳವಳ್ಳಿ ಪಟ್ಟಣದ ಹೆದ್ದಾರಿ ರಸ್ತೆಯಲ್ಲಿ ನಾಯಿಗಳ ಹಿಂಡು, ಜನರಲ್ಲಿ ನಾಯಿಯ ದಾಳಿ ಆತಂಕ

ಮಳವಳ್ಳಿ : ಜನ ಸಾವು ನೋವು ಅನುಭವಿಸಿದ ನಂತರವೇ ಎಚ್ಚೆತ್ತುಕೊಳ್ಳುವ ಜಾಯಮಾನ ನಮ್ಮ ಸ್ಥಳೀಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಚಾಳಿಯಾಗಿ ಹೋಗಿದೆ.
ಒಮ್ಮೊಮ್ಮೆ ಜನ ಸತ್ತರೂ ಎಚ್ಚೆತ್ತು ಕೊಳ್ಳದ ನಮ್ಮ ಆಡಳಿತ ವ್ಯವಸ್ಥೆ ಇನ್ನೂ ಸಾವುನೋವು ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳುವುದು ಕನಸಿನ ಮಾತೇ ಸರಿ.
ಮಳವಳ್ಳಿ ಪಟ್ಟಣದಲ್ಲಿ ನಾಯಿಗಳ ಹಿಂಡುಗಳನ್ಙು ನೋಡಿದರೆ ಯಾವ ಘಳಿಗೆಯಲ್ಲಿ ಯಾರ ಮೇಲೆ ಎಗರಿ ಎಷ್ಟು ಜನರ ರಕ್ತ ಹೀರುತ್ತವೋ ಯಾವ ಮಕ್ಕಳ ಪ್ರಾಣ ಬಲಿ ಪಡೆಯುತ್ತವೋ ಎಂಬ ಆತಂಕ ಉಂಟಾಗುತ್ತದೆ.
ಸುಮಾರು ೫೦ ಕ್ಕೂ ಹೆಚ್ಚಿನ ನಾಯಿಗಳಿರುವ ಒಂದೊAದು ಹಿಂಡು ಗಲ್ಲಿ ಗಲ್ಲಿಗಳ ರಸ್ತೆಯಲ್ಲಿ ಸುತ್ತು ಹಾಕುತ್ತಿದ್ದು ಗಲ್ಲಿ ರಸ್ತೆ ಗಳಿರಲಿ ಪಟ್ಟಣದ ಹೆದ್ದಾರಿ ರಸ್ತೆಗಳಲ್ಲೇ ನಾಯಿಗಳ ಹಿಂಡಿನ ಆರ್ಭಟ ಕಂಡ ವಾಹನ ಸವಾರರು ನಾಯಿಗಳ ಸಹವಾಸ ನಮಗೇಕೆ ಎಂಬAತೆ ರಸ್ತೆಯನ್ನೇ ನಾಯಿಗಳಿಗೆ ಬಿಟ್ಟು ರಸ್ತೆ ಬದಿಯಲ್ಲಿ ವಾಹನ ಚಲಾಯಿಸಿಕೊಂಡು ಹೋಗುತ್ತಿರುವುದು ನಾಯಿಗಳ ಆರ್ಭಟಕ್ಕೆ ಸಾಕ್ಷಿಯೇ ಸರಿ.
ವಾಹನ ಸವಾರರೇ ನಾಯಿಗಳ ಹಿಂಡಿಗೆ ಹೆದರಿ ನಾಯಿಗಳಿಗೆ ದಾರಿಬಿಟ್ಟು ಹೋಗುತ್ತಾರೆ ಎಂದರೆ ಇನ್ನೂ ಬಡಾವಣೆ ಗಲ್ಲಿ ಗಳಲ್ಲಿ ಓಡಾಡುವ ಮಹಿಳೆಯರು ಮಕ್ಕಳ ಸ್ಥಿತಿ ಹೇಗಿರಬೇಡ ಊಹಿಸಿಕೊಳ್ಳಿ, ಈಗಾಗಲೇ ಕೆಲವೆಡೆ ನಾಯಿಗಳ ದಾಳಿಗೆ ಮಕ್ಕಳು ರಕ್ತ ಸುರಿಸಿಕೊಂಡು ಆಸ್ಪತ್ರೆ ಸೇರಿವೆ.
ಮನೆ ಮುಂದೆ ಕಟ್ಟಿದ್ದ ಜಾನುವಾರುಗಳನ್ನು ಕೊಂದು ತಿಂದು ಹಾಕುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಿದೆ.
ರಸ್ತೆ ಗಲ್ಲಿಗಳಲ್ಲಿ ನಾಯಿಗಳ ಹಾವಳಿ ಸಾಮಾನ್ಯ ವಾದರೂ ಆಸ್ಪತ್ರೆ ಆವರಣಕ್ಕೂ ನಾಯಿಗಳು ದಾಂಗುಡಿ ಇಡುತ್ತಿದ್ದು ಇಂದು ಸುಮಾರು ೫೦ಕ್ಕೂ ಹೆಚ್ಚು ನಾಯಿಗಳ ಹಿಂಡು ಪಟ್ಟಣದ ಆಸ್ಪತ್ರೆ ಆವರಣಕ್ಕೆ ನುಗ್ಗಿ ಇಡೀ ಆವರಣದಲ್ಲಿ ಕೋಲಾಹಲ ಎಬ್ಬಿಸಿವೆ.
ನಾಯಿಗಳ ಈ ಆರ್ಭಟಕ್ಕೆ ಆಸ್ಪತ್ರೆಯ ರೋಗಿಗಳು ಹಾಗೂ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದು ಅವನ್ನು ಓಡಿಸುವುದಿರಲಿ ಸದ್ಯ ನಮ್ಮ ತಂಟೆಗೆ ಬರದಿದ್ದರೆ ಸಾಕು ಎಂದು ವಾಡ್೯ ಗಳ ಒಳಗೆ ಹೋಗಿ ಪಾರಾಗುವ ಸ್ಥಿತಿ ನಿರ್ಮಾಣ ವಾಗಿತ್ತು.
ಅದೇನೇ ಇರಲಿ ಜನ ಜಾನುವಾರುಗಳ ಜೀವಕ್ಕೆ ಕಂಟಕ ವಾಗುತ್ತಿರುವ ಈ ನಾಯಿಗಳ ಹಿಂಡಿನ ನಿಯಂತ್ರಣಕ್ಕೆ ಪುರಸಭೆ ಮುಂದಾಗದಿದ್ದರೆ ಮುಂದೆ ಸಂಭವಿಸಲಿರುವ ಅನಾಹುತಕ್ಕೆ ಪುರಸಭೆ ಹೊಣೆಯಾಗ ಬೇಕಾಗುತ್ತದೆ..

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: