December 22, 2024

Bhavana Tv

Its Your Channel

ಪಿಡಿಒರವರ ನಿರ್ಲಕ್ಷ್ಯ ಕ್ರಮವನ್ನು ಖಂಡಿಸಿ ಗ್ರಾಮ ಪಂಚಾಯತ ಸದಸ್ಯನಿಂದ ಉಪವಾಸ ಸತ್ಯಾಗ್ರಹ

ಮಳವಳ್ಳಿ : ಇ ಖಾತೆಗಾಗಿ ಅರ್ಜಿ ಸಲ್ಲಿಸಿ ತಿಂಗಳುಗಳೇ ಉರುಳಿದರೂ ಖಾತೆ ಮಾಡಿಕೊಡದೆ ಪಿಡಿಒ ಅವರ ನಿರ್ಲಕ್ಷ್ಯ ಕ್ರಮವನ್ನು ಖಂಡಿಸಿ ಗ್ರಾಮ ಪಂಚಾಯತ ಸದಸ್ಯ ರೊಬ್ಬರು ಪಂಚಾಯತಿ ಕಚೇರಿ ಆವರಣದಲ್ಲಿ ಆಹೋ ರಾತ್ರಿ ಏಕಾಂಗಿಯಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಸಂಗ ಮಳವಳ್ಳಿ ತಾಲೂಕಿನ ಕಗ್ಗಲೀಪುರ ಗ್ರಾ ಪಂ ಆವರಣ ದಲ್ಲಿ ಜರುಗಿದೆ.

ಹೊನಗಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವರೇ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಗ್ರಾ ಪಂ ಸದಸ್ಯ ರಾಗಿದ್ದು ಇದೇ ಗ್ರಾಮದ ವೆಂಕಟ ರಮಣ ಎಂಬುವರ ಪತ್ನಿಯಾದ ಪುಟ್ಟರಾಚಮ್ಮ ಎಂಬುವರು ತಮಗೆ ಸೇರಿದ ಆಸ್ತಿಯನ್ನು ಇ ಖಾತೆ ಮಾಡಿಕೊಡುವಂತೆ ಪಂಚಾಯತಗೆ ಅರ್ಜಿ ಸಲ್ಲಿಸಿ ೩-೪ ತಿಂಗಳೇ ಕಳೆದಿದ್ದು ಆದರೆ ಅವರಿಗೆ ಖಾತೆ ಮಾಡಿಕೊಡದೆ ಪಂಚಾಯತ ಪಿಡಿಒ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ರಾಜಶೇಖರಮೂರ್ತಿ ಆರೋಪಿಸಿದ್ದಾರೆ.
ಪಿಡಿಒ ಅವರ ಈ ಧೋರಣೆ ಖಂಡಿಸಿ ಇಂದು ಸಾಯಂಕಾಲ ದಿಂದ ಕಚೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸದಸ್ಯರು ತಮಗೆ ನ್ಯಾಯ ಸಿಗದ ಹೊರತು ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ವರದಿ: ಮಲ್ಲಿಕಾಜುನ ಸ್ವಾಮಿ ಮಳವಳ್ಳಿ

error: