March 13, 2025

Bhavana Tv

Its Your Channel

ಗುರು ಸುಧೀಂದ್ರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನಮೋ ರಸಪ್ರಶ್ನೆ ಕಾರ್ಯಕ್ರಮ

ಭಟ್ಕಳ ಪಟ್ಟಣದ ಗುರು ಸುಧೀಂದ್ರ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನಮೋ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರೋಹಿತ್ ಎನ್.ನಾಯ್ಕ ಪ್ರಥಮ, ನಿತೀನ್ ನಾಯ್ಕ ದ್ವಿತೀಯ ಹಾಗೂ ಲಿಬೋ ರೇವಣಕರ್ ಮತ್ತು ತೇಜಸ್ ಎನ್.ಶೆಟ್ಟಿ ತೃತೀಯ ಸ್ಥಾನ ಹಂಚಿಕೊAಡರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ, ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ವಿರೇಂದ್ರ ಶಾನಭಾಗ್, ರಾಜ್ಯಬಿಜೆ ಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್ ಶೆಟ್ಟಿ, ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ ರವಿ ನಾಯ್ಕ ಜಾಲಿ, ಯುವ ಮೋರ್ಚಾ ಅಧ್ಯಕ್ಷ ಮಹೇಂದ್ರ ನಾಯ್ಕ, ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸುರೇಶ್ ನಾಯ್ಕ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯ್ಕ, ಮಾಜಿ ಸೈನಿಕರ ಪ್ರಕೋಷದ ಜಿಲ್ಲಾ ಸಂಚಾಲಕ ಶ್ರೀಕಾಂತ್ ನಾಯ್ಕ, ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ ನಾಯ್ಕ ಮುಂತಾದವರು ಇದ್ದರು.

error: