December 21, 2024

Bhavana Tv

Its Your Channel

ಹಳದೀಪುರದಲ್ಲಿ ಕೂಲಿ ಕೆಲಸಕ್ಕಾಗಿ ಆಗಮಿಸಿದ 67 ಮಂದಿ ಅಲೆಮಾರಿಗಳನ್ನು ಹೊನ್ನಾವರ ಹಾಸ್ಟೇಲನಲ್ಲಿ ನೆಲೆಸುವಂತೆ ವಸತಿ ವ್ಯವಸ್ಥೆ ಕಲ್ಪಿಸಿದ ಪೋಲಿಸ್ ಇಲಾಖೆ

ಕಳೆದ ಹಲವು ದಿನಗಳಿಂದ ಎಲ್ಲಡೆ ಕರೋನಾ ಸುದ್ದಿಗಳೇ ಕೇಳಿ ಬರತ್ತಿದ್ದು ದೇಶವೇ ಲಾಕ್ ಡೌನ್ ಘೋಷಣಿ ಮಾಡಿದ್ದು ಸಂಪೂರ್ಣ ಸ್ಥಬವಾಗಿದೆ. ಈ ಹಿನ್ನಲೆಯಲ್ಲಿ ಕಳೆದ ಹಲವು ದಿನಗಳ ಹಿಂದೆ ಹಳದೀಪುರದಲ್ಲಿ ಕಟ್ಟಡ ನಿಮಾರ್ಣಕ್ಕಾಗಿ ಆಗಮಾಸಿದ ಅಲೆಮಾರಿಗಳು ಕೆಲಸವಿಲ್ಲದೆ ಪರದಾಡುತ್ತಿದ್ದರು. ಇದರಿಂದ ಹಸಿವನ್ನು ನಿಗಿಸಲು ಸಾಧ್ಯವಾಗದೇ ಎಲ್ಲಡೆ ಅಲೆದಾಡುತ್ತಿದ್ದರು. ಇದರಿಂದ ಸ್ಥಳಿಯ ನಿವಾಸಿಗಳಲ್ಲಿಯೂ ಗೊಂದಲಮನೆ ಮಾಡಿತ್ತು. ಈ ವಿಷಯವನ್ನು ಗಮನಕ್ಕೆ ಬಂದ ತಕ್ಷಣ ಹೊನ್ನಾವರ ಪೋಲಿಸ್ ಇಲಾಖೆ ತಾಲೂಕ ಆಡಳಿತದೊಂದಿಗೆ ಚರ್ಚಿಸಿ ಸರ್ಕಾರಿ ಹಾಸ್ಟೆಲನಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯ ಕ್ಷಣಕ್ಕೆ ಸಾಕ್ಷಿಯಾದರು. ಪೋಲಿಸ್ ಇಲಾಖೆಯ ಈ ಕಾರ್ಯಕ್ಕೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

error: