May 25, 2023

Bhavana Tv

Its Your Channel

ಹೊನ್ನಾವರ ತಾಲೂಕಾ ಆಸ್ಪತ್ರೆಯ ಜನಪ್ರಿಯ ವೈದ್ಯ ಡಾ. ಪ್ರಕಾಶ ನಾಯ್ಕ, ಎಂ.ಡಿ. ಯವರಿಂದ ತಾಲೂಕಿನ ಜನತೆಗೆ ಸಲಹೆ.

ಹೊನ್ನಾವರ ಮಾ. ೨೯ : ದಯವಿಟ್ಟು ಯಾರೂ ಮನೆ ಗೇಟ್ ಬಿಟ್ಟು ಹೊರಗೆ ಬರಬೇಡಿ. ಮನೆ ಹಾಗೂ ಮನೆಯ ಕಂಪೌAಡ ಒಳಗೆ ಇರಿ. ಪದೇಪದೇ ಹೊರಗೆ ಬರುವವರು, ಪೇಪರ್ ಹಾಕುವವರು, ಹಾಲು ಕೊಡುವವರು, ತರಕಾರಿ ಅಂಗಡಿ, ಔಷಧ ಅಂಗಡಿ, ದಿನಸಿ ಅಂಗಡಿಯಲ್ಲಿ ಜನರ ಜೊತೆ ವ್ಯವಹರಿಸುವವರು ಹಾಗೂ ಮನೆಯಲ್ಲಿ ಹಿರಿಯರೊಂದಿಗೆ ಬೆರೆಯದೆ ೬ಫೂಟ್ ಅಂತರ ಕಾಪಾಡಿಕೊಳ್ಳುವುದು. ಪೇಪರ್ ಬಂದ ತಕ್ಷಣ ಓದಿ ಹೊರಮೈ ಮುಟ್ಟದೇ ಮಡಿಸಿ ಒಳ ಮೈ ಮೇಲೆ ಮಾಡಿ ಬದಿಗೆ ಸರಿಸಿ ಕೈ ತೊಳೆದುಕೊಳ್ಳಿ. ಪದೇಪದೇ ಮುಟ್ಟಬೇಡಿ, ಹಾಲು ಪ್ಯಾಕೆಟ್ ಬಂದ ತಕ್ಷಣ ಪಾತ್ರೆಗೆ ಹಾಕಿ ಕೊಟ್ಟೆಯನ್ನು ಡಷ್ಟಬಿನ್‌ಗೆ ಹಾಕಿ ಕೈ ತೊಳೆದುಕೊಳ್ಳಿ. ಆದಷ್ಟು ಪ್ಲಾಸ್ಟಿಕ್ ಬಳಕೆ ಬೇಡ. ಪೇಪರ್ ಅಥವಾ ಬಟ್ಟೆ ಚೀಲ ಉಪಯೋಗಿಸಿ, ಪದೇಪದೇ ವಸ್ತುಗಳನ್ನು ಮುಟ್ಟಬೇಡಿ, ಪದೇಪದೇ ಕೈ ತೊಳೆದುಕೊಳ್ಳಿ, ಮೆತ್ತಗೆ ಮಾತನಾಡಿದರೆ ಒಳ್ಳೆಯದು, ಗಟ್ಟಿಯಾಗಿ ಗಂಟಲು ಒತ್ತಿ ಮಾತನಾಡಬೇಡಿ ಎಂದು ಸಲಹೆ ನೀಡಿದ್ದಾರೆ.

About Post Author

error: