April 26, 2024

Bhavana Tv

Its Your Channel

ಭಟ್ಕಳದಲ್ಲಿ ಕೊರೋನಾ ನಿಯಂತ್ರಣಕ್ಕೆ ಮನೆ ಬಾಗಿಲಿಗೆ ಚಿಕಿತ್ಸೆ

ಭಟ್ಕಳ: ಮಹಾಮಾರಿ ಕೊರೋನಾ ವೈರಸ್ ಸೋಂಕು ಹರಡುತ್ತದೆ ಎನ್ನುವ ಆತಂಕದಲ್ಲಿರುವ ಭಟ್ಕಳದಲ್ಲಿ ಮನೆ ಬಾಗಿಲಿಗೆ ವೈದ್ಯರನ್ನ ಕಳಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಈಗಾಗಲೇ ಭಟ್ಕಳದಲ್ಲಿ ಏಳು ಜನರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟ ಹಿನ್ನಲೆಯಲ್ಲಿ ಹೆಲ್ತ್ ಎಮರ್ಜೆನ್ಸಿ ಹಾಗೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮನೆಯಿಂದ ಯಾರೂ ಹೊರಬರದಂತೆ ಸೂಚನೆ ನೀಡಿದ್ದರು ಅನಾರೋಗ್ಯ ಕಾರಣ ಹೇಳಿ, ಔಷದಿ ತೆಗೆದುಕೊಳ್ಳಬೇಕು ಎನ್ನುವ ಕಾರಣ ನೀಡಿ ಮನೆಯಿಂದ ಕೆಲವರು ಒಡಾಟ ಮಾಡುತ್ತಿದ್ದರು‌.

ಸೋಂಕು ಹರಡುವ ಸೂಕ್ಷ್ಮ ಪ್ರದೇಶ ಆಗಿರುವ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರಬರದೇ ಮನೆಯಲ್ಲಿಯೇ ಹೆಲ್ಪ್ ಲೈನ್ ಗೆ ಫೋನ್ ಮಾಡಿ ಸಮಸ್ಯೆ ಹೇಳಿದರೆ ಆ ಮನೆಗೆ ವೈದ್ಯರು ತೆರಳಿ ಚಿಕಿತ್ಸೆ ಹಾಗೂ ಔಷದಿ ಕೊಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಒಂದೊಮ್ಮೆ ಹೆಚ್ಚಿನ ಚಿಕಿತ್ಸೆ ಬೇಕಾಗಿದ್ದರೆ ಅಂಬ್ಯುಲೆನ್ಸ್ ಸಿದ್ದಪಡಿಸಿಕೊಂಡಿದ್ದು ತಕ್ಷಣ ಆಸ್ಪತ್ರೆಗೆ ರವಾನೆ ಮಾಡುವ ಕಾರ್ಯಕ್ಕೆ ಸಹ ಮುಂದಾಗಿದೆ. ಈಗಾಗಲೇ ಎಂಟು ವೈದ್ಯರನ್ನ ಮನೆ ಮನೆಗೆ ಚಿಕಿತ್ಸೆ ಕೊಡಲು ಸಿದ್ದತೆ ಮಾಡಿಕೊಂಡಿದ್ದು ಇಂದಿನಿಂದ ಲಾಕ್ ಡೌನ್ ಅವಧಿ ಮುಗಿಯುವ ಏಪ್ರಿಲ್ 14 ರವರೆಗೆ ಈ ಸೌಲಭ್ಯ ಕೊಡಲು ನಿರ್ಧರಿಸಲಾಗಿದೆ

error: