December 22, 2024

Bhavana Tv

Its Your Channel

ಎಲ್ಲಾ ಪಕ್ಷ ವರ್ಗ ಸಮುದಾಯವನ್ನು ಒಟ್ಟಿಗೆ ಸೇರಿಸುವ ಶಕ್ತಿ ಕನಕದಾಸರ ಹೆಸರಿಗೆ ಇದೆ – ಸಚಿವ ಕೆ ಎಸ್ ಈಶ್ವರಪ್ಪ

ಮಳವಳ್ಳಿ ತಾಲ್ಲೂಕು ಅಡಳಿತ, ತಾಲ್ಲೂಕು ಪಂಚಾಯ್ತಿ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಮಳವಳ್ಳಿ ಪಟ್ಟಣದ ಉಪ್ಪನಹಳ್ಳಿ ಗ್ರಾಮದ ಬಳಿ ಸುಮಾರು ಒಂದು ಎಕರೆ ಪ್ರದೇಶದಲ್ಲಿ ನಿರ್ಮಾಣ ವಾಗಲಿರುವ ಕನಕ ಸಮುದಾಯ ಭವನದ ಶಂಕುಸ್ಥಾಪನಾ ಸಮಾರಂಭ ದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಕನಕರ ಹೆಸರಿನ ಭವನ ನಿರ್ಮಾಣ ಕಾರ್ಯದಲ್ಲಿ ಎಲ್ಲಾ ಪಕ್ಷದ ನಾಯಕರು ಈ ವೇದಿಕೆಯಲ್ಲಿ ಪಾಲ್ಗೊಂಡಿರುವುದೇ ಸಾಕ್ಷಿ ಎಂದ ಅವರು ಹೆದ್ದಾರಿ ರಸ್ತೆ ಬದಿಯಲ್ಲೇ ಒಂದು ಎಕರೆ ಸರ್ಕಾರಿ ಜಾಗ ನೀಡಿ ಭವ್ಯ ಕನಕ ಭವನ ನಿರ್ಮಾಣಕ್ಕೆ ಮುಂದಾಗಿರುವ ಶಾಸಕ ಅನ್ನದಾನಿ ಅವರನ್ನು ಅಭಿನಂದಿಸಿದರು. ಶಂಕುಸ್ಥಾಪನೆ ಬೆನ್ನಲ್ಲೇ ಕಾಮಗಾರಿ ಭರದಿಂದ ಸಾಗಬೇಕು ಯಾವುದೇ ಕಾರಣಕ್ಕೆ ಕಾಮಗಾರಿ ವಿಳಂಬಕ್ಕೆ ಅವಕಾಶ ಇಲ್ಲದಂತೆ ಇನ್ನೂ ಆರು ತಿಂಗಳ ಒಳಗಾಗಿ ಮುಗಿಸಿ ಉದ್ಘಾಟನೆಗೆ ನಾನೇ ಬರುತ್ತೇನೆ ಎಂದು ತಾಕೀತು ಮಾಡಿದರು. ಅಲ್ಲದೆ ಭವನ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಒಂದು ಕೋಟಿ ರೂ ಕೊಡಿಸುವ ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಈ ಸಮಾರಂಭದ ರುವಾರಿ ಹಾಗೂ ಕ್ಷೇತ್ರದ ಶಾಸಕರಾದ ಡಾ. ಕೆ ಅನ್ಮದಾನಿ ಮಳವಳ್ಳಿ ಪಟ್ಟಣದಲ್ಲಿ ಕನಕ ಭವನ ವೊಂದು ನಿರ್ಮಾಣವಾಗ ಬೇಕೆಂಬ ಬಹಳ ವರ್ಷದ ಕನಸು ನನಸಾಗುತ್ತಿದ್ದು ಈ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆಗಣಿಸಲಾಗಿದೆ ಎಂಬ ಮಾತು ಸರಿಯಲ್ಲ ಅವರನ್ನು ಸಹ ಆಹ್ವಾನಿಸಲಾಗಿತ್ತು ಎಂದರು.


ಭವನ ನಿರ್ಮಾಣಕ್ಕೆ ಎರಡು ಕೋಟಿಯನ್ನು ಈ ಹಿಂದೆ ಸಿದ್ದರಾಮಯ್ಯ ಮಂಜೂರು ಮಾಡಿದ್ದರು ಎಂಬ ಹೇಳಿಕೆ ಶುದ್ದ ಸುಳ್ಳು ಎಂದು ಸ್ಪಷ್ಟ ಪಡಿಸಿದ ಅನ್ನದಾನಿ ಅವರು ಈಗಷ್ಟೇ ಹೊಸದಾಗಿ ಒಂದು ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರು ಮಾತನಾಡಿ ಸಮುದಾಯದ ಕೆಲಸ ಕಾರ್ಯಕ್ಕೆ ವಿಚಾರದಲ್ಲಿ ಸದಾ ಮುಂದಿರುವುದಾಗಿ ಹೇಳಿದರಲ್ಲದೆ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ೧೦ ಲಕ್ಷ ರೂ ನೀಡುವ ಭರವಸೆ ನೀಡಿದರು.
ಮಾಜಿ ಶಾಸಕ ಹಾಗೂ ಕುರುಬ ಸಮುದಾಯದ ನಾಯಕ ವರ್ತೂರು ಪ್ರಕಾಶ್ ಮಾತನಾಡಿ ಹಿಂದೆ ಶಾಸಕರಾಗಿದ್ದವರು ಕುರುಬ ಸಮುದಾಯವನ್ನು ಕೇವಲ ಓಟ್ ಬ್ಯಾಂಕ್ ಮಾಡಿಕೊಂಡರೇ ಹೊರತು ಸಮುದಾಯಕ್ಕೆ ಒಂದು ಭವನ ನಿರ್ಮಿಸಿ ಕೊಡಲಿಲ್ಲ ಎಂದು ಹೆಸರೇಳದೆಯೇ ಮಾಜಿ ಸಚಿವ ನರೇಂದ್ರಸ್ವಾಮಿ ಅವರನ್ನು ಟೀಕಿಸಿದರು. ಸಿದ್ದರಾಮಯ್ಯ ಅವರು ಈ ಸಮಾರಂಭಕ್ಕೆ ಬಾರದಿರುವಂತೆ ಮಾಡಿರುವವರು ಅವರೇ ಈ ನಾಯಕನ ಮಾತು ಕೇಳುವುದರಿಂದಲೇ ಸಿದ್ದರಾಮಯ್ಯ ಅವರು ಹಾಳಾಗುತ್ತಿದ್ದಾರೆ ಎಂದು ದೂಷಿಸಿದರು.

ಮೈಸೂರಿನ ಕಾಗಿನೆಲೆ ಪೀಠದ ಶಿವಾನಂದ ಪುರಿ ಸ್ವಾಮಿಜಿ ಅವರು ಸಾನಿಧ್ಯ ವಹಿಸಿದ್ದ ಸಮಾರಂಭದಲ್ಲಿ ಬೆಂಗಳೂರಿನ ಅಕ್ಷಯ ಪಾತ್ರೆ ಪ್ರತಿಷ್ಠಾನ ಹಾಗೂ ಇಸ್ಕಾನ್ ಸಂಸ್ಥೆಯ ಶ್ರೀ ಮಹೋತ್ಸಾಹ ಚೈತನ್ಯ ದಾಸ ಅವರು ಮಾಜಿ ಸಚಿವರಾದ ಬಂಡೆಪ್ಪ ಕಾಂಶಪುರ್, ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿಗೌಡ ಮಾಜಿ ಶಾಸಕ ನ ಲ ನರೇಂದ್ರಬಾಬು, ಜಿಲ್ಲಾಧಿಕಾರಿ ಎಸ್ ಅಶ್ವಥಿ, ಎಸ್ಪಿ ಡಾ ಎಂ ಅಶ್ವಿನಿ ಮತ್ತಿತರರು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ಸಚಿವ ಈಶ್ವರಪ್ಪ ಅವರು ಪಂಡಿತಹಳ್ಳಿ ಗ್ರಾ ಪಂ ಆವರಣದಲ್ಲಿ ನೂತನ ಇ ಲೈಬ್ರರಿ ಯನ್ನು ಉದ್ಘಾಟಿಸಿದರು.
ಕನಕ ಭವನದ ರೂವಾರಿ ಶಾಸಕ ಡಾ ಕೆ ಅನ್ನದಾನಿ ಅವರಿಗೆ ಕುರುಬ ಸಮುದಾಯದ ಮುಖಂಡರಿAದ ಕಂಬಳಿ ಹೊದಿಸಿ ಜೊತೆಗೆ ಕುರಿ ಮರಿ ನೀಡಿ ಅಭಿನಂದನೆ ಸಲ್ಲಿಸಲಾಯಿತು

ವರದಿ ; ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: