
ಭಟ್ಕಳ್-ಭಟ್ಕಳ್ ಪುರಸಭೆಯ ೨೦೧೬-೧೭ ರ ಸಾಲಿನ ಅವೈಜ್ಞಾನಿಕ ಹರಾಜು ಪ್ರಕ್ರಿಯೆ ವಿರೋಧಿಸಿದ ೮೫ ಜನ ಯುವಕರ ಮೇಲೆ ಹಾಕಿರುವ ಕ್ರಿಮಿನಕ್ ಪ್ರಕರಣ ಹಿಂಪಡೆಯುವAತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಭಟ್ಕಳ್ ತಾಲೂಕಿನ ಪುರಸಭೆಯಲಿ ೨೦೧೬-೨೦೧೭ ಸಾಲಿನಲ್ಲಿ ನಡೆದ ೧೦೯ ಅಂಗಡಿಯ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಅಂಗಡಿಕಾರರಿಗೆ ನ್ಯಾಯ ಒದಗಿಸುವ ಸಲುವಾಗಿ , ಹರಾಜು ಪ್ರಕ್ರಿಯೆ ವಿರುದ್ಧ ಪ್ರತಿಭಟಿಸಿ ರಾಮಚಂದ್ರ ನಾಯ್ಕ ಎನ್ನುವು ಅಂಗಡಿಕಾರರು ಪ್ರಾಣ ಕೂಡ ಕಳೆದು ಕೊಂಡಿರುತ್ತಾರೆ, ಬಹುತೇಕ ಹೆಚ್ಚಿನ ಪಾಲು ನಾಮಧಾರಿ ಸಮಾಜದ ಬಡ ಕುಟುಂಬದ ಜನರು ಪುರಸಭೆ ಅಂಗಡಿ ಬಾಡಿಗೆ ಪಡೆದಿದ್ದು ,ನಾಮಧಾರಿ ಸಮಾಜದ ಬಡ ಅಂಗಡಿಕಾರರಿಗೆ ಆಗುವ ಅನ್ಯಾಯ ವಿರೋಧಿಸಿ ಪುರಸಭೆಯ ಅವೈಜ್ಞಾನಿಕ ಟೆಂಡರ್ ಹರಾಜು ಪ್ರಕ್ರಿಯೆ ವಿರೋಧಿಸಿ ನಾಮಧಾರಿ ಸಮಾಜದ ಹೆಚ್ಚಿನ ಯುವಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು, ನಮ್ಮ ಸಮಾಜದ ೮೫ ಜನರ ಮೇಲೆ ಪುರಸಭೆ ಅಧಿಕಾರಿಗಳು ಅಂದು ಭಟ್ಕಳ್ ಜೆ.ಎಂ.ಏಫ.ಸಿ ಕೋರ್ಟ್ ನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದರು, ಕಳೆದ ೫ ವರುಷಗಳಿಂದ ೮೫ ಯುವಕರು ಕೋರ್ಟ್ ಅಲೆಯುತ್ತಿದ್ದಾರೆ, ಇದರಿಂದ ಯುವಕರು ಮಾಸಿಕವಾಗಿ ಕುಗ್ಗಿ ಹೋಗಿದ್ದಾರೆ ಆದ ಕಾರಣ ನಾಮಧಾರಿ ಸಮಾಜದ ಅಧ್ಯಕ್ಷರು ಸಮಾಜದ ಯುವಕರ ಭವಿಷ್ಯ ದೃಷ್ಟಿಯಿಂದ ನಾಮಧಾರಿ ಸಮಾಜದ ಶಾಸಕ ಸುನಿಲ್ ನಾಯ್ಕ ಮೂಲಕ ಸರಕಾರಕ್ಕೆ ಒತ್ತಡ ಹಾಕಿ ೮೫ ಯುವಕರ ಮೇಲಿರುವ ಕ್ರಿಮಿನಲ್ ಪ್ರಕರಣ ಸರಕಾರವು ಹಿಂಪಡೆಯುವAತೆ ಮಾಡಬೇಕು ಎಂದು ಆಗ್ರಹಿಸಿ ಯುವ ಮುಖಂಡ ಶ್ರೀನಿವಾಸ ನಾಯ್ಕ ಹನುಮಾನ ನಗರ ನೇತೃತ್ವದಲ್ಲಿ ನಾಮಧಾರಿದಾರಿ ಸಮಾಜದ ಯುವಕರು ನಾಮದಾರಿ ಸಮಾಜದ ತಾಲೂಕ ಅಧ್ಯಕ್ಷ ಕೃಷ್ಣ ನಾಯ್ಕ ಅವರಿಗೆ ಮನವಿ ನೀಡಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ