December 22, 2024

Bhavana Tv

Its Your Channel

ಮಳವಳ್ಳಿ ತಾ.ಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆ

ಮಳವಳ್ಳಿ : ಆಡಳಿತಾಧಿಕಾರಿ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕಾರ್ಯ ಯೋಜನೆಗಳು ಸರಿಯಾಗಿ ಪ್ರಗತಿಯಾಗಿಲ್ಲ ಎಂಬ ಅಪವಾದ ಜನರಿಂದ ಬಾರದಂತೆ ಕಾರ್ಯ ನಿರ್ವಹಿಸಬೇಕೆಂದು ತಾ ಪಂ ಆಡಳಿತಾಧಿಕಾರಿಗಳೂ ಆದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ತಾ .ಪಂ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಅಭಿವೃದ್ಧಿ ಕುಂಠಿತಗೊAಡಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ವ್ಯಕ್ತವಾಗದಂತೆ ನೋಡಿಕೊಳ್ಳುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳ ವೇಗವನ್ನು ಹೆಚ್ಚಿಸುವ ಮೂಲಕ ಆಡಳಿತಾಧಿಕಾರಿಗಳ ಸಹ ಉತ್ತಮ ಕೆಲಸ ಮಾಡಿ ತೋರಿಸ ಬೇಕೆಂದು ಕೋರಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಯ್ಯ ಮಾತನಾಡಿ ಬೆಳೆ ಸಮೀಕ್ಷೆ ಕಾರ್ಯಕ್ರಮವನ್ನು ರೈತರು ಉತ್ತಮ ರೀತಿಯಲ್ಲಿ ಬಳಸಿಕೊಂಡ ಪರಿಣಾಮ ಶೇ ೯೦ ರಷ್ಟು ಬೆಳೆ ಸಮೀಕ್ಷೆ ಮುಗಿದಿದೆ ಎಂದು ತಿಳಿಸಿದರು.
ಸಾಮಾಜಿಕ ಅರಣ್ಯಾಧಿಕಾರಿ ಅವರು ಮಾತನಾಡಿ ರಸ್ತೆ ಬದಿ, ನೆಡು ತೋಪು ಅರಣ್ಯ ಪ್ರದೇಶ ಗಳಲ್ಲಿ ಗಿಡ ಬೆಳೆಸುವ ಕಾರ್ಯ ಶೇ ೯೦ ರಷ್ಟು ಪ್ರಗತಿಯಲ್ಲಿದೆ ಎಂದರು ರೆಗ್ಯುಲರ್ ಫಾರೆಸ್ಟ್ ನ ವಲಯಾರಣ್ಯಾಧಿಕಾರಿ ಆಸೀಫ್ ಅವರು ಸಭೆಗೆ ಗೈರು ಹಾಜರಾಗಿ ಫಾರೆಸ್ಟ್ ಗಾಡ್೯ ವೊಬ್ಬರನ್ನು ತಮ್ಮ ಪರವಾಗಿ ಸಭೆಗೆ ಕಳುಹಿಸಿದ್ದು ವಿಶೇಷವಾಗಿತ್ತು,
ಆಡಳಿತಾಧಿಕಾರಿಗಳ ಸಭೆಗೆ ಅಧಿಕಾರಿಗಳ ನಿರುತ್ಸಾಹ ಎದ್ದು ಕಾಣುತ್ತಿತ್ತು, ಕೆಲವು ಅಧಿಕಾರಿಗಳು ತಮ್ಮ ಸಹಾಯಕರನ್ನು ಸಭೆಗೆ ಕಳುಹಿಸಿದ್ದರೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರು ಸೇರಿದಂತೆ ಗೈರು ಹಾಜರಾಗಿದ್ದ ಅಧಿಕಾರಿಗಳಿಗೆ ಶೋಕಾಷ್ ನೋಟೀಸ್ ನೀಡುವಂತೆ ಆಡಳಿತಾಧಿಕಾರಿಗಳು ಸೂಚಿಸಿದ.
ಇಒ ರಾಮಲಿಂಗಯ್ಯ, ಯೋಜನಾಧಿಕಾರಿ ದೀಪು ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: