December 20, 2024

Bhavana Tv

Its Your Channel

ಭಗೀರಥ ಮಹರ್ಷಿ ಪುತ್ಥಳಿ ಅನಾವರಣ ಕಾರ್ಯಕ್ರಮ.

ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಭಗೀರಥ ಮಹರ್ಷಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗುವುದರ ಮುಖಾಂತರ ದಿವ್ಯ ಸಾನಿಧ್ಯವನ್ನು ವಹಿಸಿರುವ ಶ್ರೀ ಶ್ರೀ ಜಗದ್ಗುರು ಪುರುಷೋತ್ತಮಾನಂದಪುರಿ ಸ್ವಾಮಿಗಳು ಉದ್ಘಾಟಿಸಿದರು. ತಾಲೂಕಿನ ಶಾಸಕರಾದ ಸಿಎಸ್ ನಿರಂಜನ್ ಕುಮಾರ್ ಅವರು ಮಾತನಾಡಿ ಭಗೀರಥ ಸಮಾಜದವರು ಬಹಳ ಸಂಘಟಿತರಾಗಿ ಅನ್ಯೋನ್ಯತೆಯಿಂದ ಒಂದು ಪುತ್ಥಳಿಯನ್ನು ನಿರ್ಮಾಣ ಮಾಡಿದ್ದೀರಿ ಯಾವುದೇ ಪಕ್ಷ ಬೇಧವನ್ನು ಮರೆತು ಯುವಕರು ಮುಖಂಡರುಗಳು ಈ ಒಂದು ಕಾರ್ಯಕ್ಕೆ ಮುಂದಾಳತ್ವ ವಹಿಸಿ ಕಾರ್ಯಕ್ರಮವನ್ನು ಮಾಡಿದ್ದೀರಿ ತಮ್ಮ ಸಮಾಜದವರಿಗೆ ಶುಭವಾಗಲಿ ಎಂದು ತಿಳಿಸುತ್ತಾ ನಿಮ್ಮ ಬೇಗೂರಿನ ಜನಾಂಗದ ಒಂದು ದೊಡ್ಡ ಅಭಿಪ್ರಾಯ ಎಂದರೆ ನಿಮ್ಮ ಜನಾಂಗದವರಿಗೆ ಸಣ್ಣ ಸಣ್ಣ ಮನೆಗಳು ಇದ್ದು , ಜಾಗಗಳು ಇಲ್ಲದ ಕಾರಣ ಮನೆಗಳನ್ನು ನಿರ್ಮಾಣ ಮಾಡಲು ಖಾಲಿ ನಿವೇಶನಗಳು ಇಲ್ಲ ಹಾಗಾಗಿ ಅದನ್ನು ನಾವು ಸರಕಾರಿ ಜಾಗವನ್ನು ಗುರುತಿಸಿ ಅಲ್ಲಿ ನಿವೇಶನವನ್ನು ಹಂಚಿಕೆ ಮಾಡಿಕೊಡುತ್ತೇವೆ ಎಂದು ಈ ಮೂಲಕ ಭರವಸೆ ನೀಡಿದರು.
ಕಾಂಗ್ರೆಸ್ ಯುವ ಮುಖಂಡ ಎಚ್ ಎಂ. ಗಣೇಶ್ ಪ್ರಸಾದ್, ಮಾತನಾಡಿ ನಿಮ್ಮನ್ನು ಮತ್ತು ನಿಮ್ಮ ಜನಾಂಗದವರನ್ನು ಏಳಿಗೆಗೆ ಶ್ರಮಿಸಿದವರ ಮಹಾನ್ ಪುರುಷರ ಪ್ರತಿಮೆಯನ್ನು ಮಾಡಿ ಇಡೀ ಮೈಸೂರು ಚಾಮರಾಜನಗರ ಭಾಗದಲ್ಲಿ ಈ ಒಂದು ಶ್ರೀ ಭಗೀರಥ ಮಹರ್ಷಿ ಪುತ್ಥಳಿ ಕಾರ್ಯಕ್ರಮ ಮಾಡಿದ್ದೀರಿ ಇದು ಹೆಮ್ಮೆಯ ವಿಷಯ ಅದಕ್ಕೆ ಬಹಳ ಖುಷಿ ತಂದಿದೆ ಜೊತೆಗೆ ನಮ್ಮ ತಂದೆಯವರಾದ ದಿವಂಗತ ಎಚ್ ಎಸ್ ಮಹದೇವ ಪ್ರಸಾದ್ ಅವರು ನಿಮ್ಮ ಜನಾಂಗಕ್ಕೆ ಸಾಕಷ್ಟು ಕೆಲಸಗಳನ್ನು ಸಚಿವರಾಗಿ ಶಾಸಕರಾಗಿ ಮಾಡಿದ್ದಾರೆ ಹಾಗಾಗಿ ನಿಮ್ಮ ಜನಾಂಗದವರಿಗೆ ಮುಂದಿನ ದಿನಗಳಲ್ಲಿ ನಾವು ಇದ್ದೇವೆ ಎಂದು ಭರವಸೆ ನೀಡಿದರು.
ಈ ಸುಸಂದರ್ಭದಲ್ಲಿ ಶ್ರೀ ಶ್ರೀ ಜಗದ್ಗುರು ಪುರುಷೋತ್ತಮಾನಂದಪುರಿ ಸ್ವಾಮಿಗಳು, ಭಗೀರಥ ಪೀಠ ಮಠ ಚಿತ್ರದುರ್ಗ ಜಿಲ್ಲೆ, ಮಾಜಿ ಸಚಿವರಾದ ಸಿ .ಪುಟ್ಟರಂಗ ಶೆಟ್ಟರು, ಶಾಸಕರಾದ ಸಿಎಸ್ ನಿರಂಜನ್ ಕುಮಾರ್, ಎಚ್ ಎನ್ ಗಣೇಶ್ ಪ್ರಸಾದ್, ಎಂ ರಾಮ ಚಂದ್ರ,, ಗಿರೀಶ್ ಉಪ್ಪಾರ್, ಸತೀಶ್ ಉಪ್ಪಾರ್ ನೂರೊಂದುಶೆಟ್ಟಿ ,ಗ್ರಾಮ ಪಂಚಾಯತಿ ಅಧ್ಯಕ್ಷರಾದ ಇಂದಿರಾ ಸುರೇಶ್, ಮಂಗಳ ಶಿವಕುಮಾರ್, ಎಂ ಜಯಕುಮಾರ್ ,ಯೋಗೇಶ್, ಬಿಜಿ ಶಿವಕುಮಾರ್ ಪೆಟ್ರೋಲ್ ಬಂಕ್ ಮಾಲೀಕರು, ಹಾಗೂ ಭಗೀರಥ ಸೇವಸಮಿತಿ ಬೇಗೂರು ಗ್ರಾಮಸ್ಥರು ಮುಖಂಡರು ಯುವಕರು ಇನ್ನು ಮುಂತಾದವರು ಉಪಸ್ಥಿತರಿದ್ದರು

ವರದಿ ಸದಾನ೦ದಾ ಕನ್ನೆಗಾಲ ಗುಂಡ್ಲುಪೇಟೆ

error: