April 27, 2024

Bhavana Tv

Its Your Channel

೧೦೮ ಅಂಬುಲೆನ್ಸ್ ವಾಹನ ಓಡಿಸಿ ಚಾಲನೆ ನೀಡಿದ ಶಾಸಕ ಸಿಎಸ್ ನಿರಂಜನ್ ಕುಮಾರ್.

ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ೧೦೮ ಅಂಬುಲೆನ್ಸ್ ವಾಹನವನ್ನು ಶಾಸಕರಾದ ಸಿಎಸ್ ನಿರಂಜನ್ ಕುಮಾರ್ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಆರೋಗ್ಯಕ್ಕೆ ಅತಿ ಹೆಚ್ಚು ಒತ್ತನ್ನು ಕೊಡುವಂತಾಗಿದೆ ಹಾಗಾಗಿ ರಾಜ್ಯದಲ್ಲಿ ಬಹಳಷ್ಟು ಆಸ್ಪತ್ರೆಗಳು ಉನ್ನತ ದರ್ಜೆ ಗೆ ಹೋಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಮುಖ್ಯವಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಎಲ್ಲಾ ತರಹದ ಸೌಲಭ್ಯಗಳನ್ನು ಒಳಗೊಂಡಿರಬೇಕು ಎನ್ನುವ ತರಹದಲ್ಲಿ ಇವತ್ತು ಅಲ್ಲಿ ಐಸಿಯು ಇರಬಹುದು, ವೆಂಟಿಲೇಟರ್, ಇರಬಹುದು ಇನ್ನೂ ಅನೇಕ ಆರೋಗ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಇರುವಂಥದ್ದು ಆಗಿದೆ ಮೊದಲು ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಗಳು ಇರಲಿಲ್ಲ ಇವತ್ತು ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ೫೦ರಿಂದ ೧೦೦ ಬೆಡ್ ಗಳಿಗೆ ಆಕ್ಸಿಜನ್ ಕೊಡುವ ವ್ಯವಸ್ಥೆ ಇದೆ. ಎಮರ್ಜೆನ್ಸಿ ಯೂನಿಟ್ ಅನ್ನು ಉನ್ನತೀಕರಣ ಮಾಡುವಂತಾಗಿದೆ. ಇಡೀ ರಾಜ್ಯದಲ್ಲಿ ಈ ತರಹದ ಸುಮಾರು ೧೨೪ ಅಂಬುಲೆನ್ಸ್ ಅನ್ನು ಸರ್ಕಾರ ನೀಡಿದೆ. ಈ ಅಂಬುಲೆನ್ಸ್ನಲ್ಲಿ ವೆಂಟಿಲೇಟರ್ , ಡಿ ಸಿಜ ಲೆಟರ್, ಆಕ್ಸಿಜನ್, ಮತ್ತು ಎಲ್ಲಾ ಮೆಡಿಕಲ್ಸ್ ಸಾಮಗ್ರಿಗಳು ಮತ್ತು ತೀರ ಎಮರ್ಜೆನ್ಸಿ ಇರುವ ಕೇಸುಗಳನ್ನು ಸ್ವಿಫ್ಟ್ ಮಾಡಬಹುದು ಜೊತೆಗೆ ಫ್ರೀ ಆಸ್ಪತ್ರೆ ಸರ್ವಿಸ್ ಮತ್ತು ಸ್ಟಾಪ್ ನರ್ಸ್ ಕೂಡ ಜೊತೆಗಿರುತ್ತಾರೆ. ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಶಾಸಕರಾದ ಸಿಎಸ್ ನಿರಂಜನ್ ಕುಮಾರ್, ಪುರಸಭೆ ಅಧ್ಯಕ್ಷರಾದ ಪಿ. ಗಿರೀಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾದ ಎನ್ ಮಲ್ಲೇಶ್, ಹಂಗಳ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಬಸವೇ ಶ್, ಎಸ್ ಸಿ. ಮಂಜುನಾಥ್ , ಬಿಜೆಪಿ ಮುಖಂಡರಾದ ನಾಗೇಂದ್ರ ದೇವರಹಳ್ಳಿ, ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಮಂಜುನಾಥ್ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು

ವರದಿ ಸದಾನ೦ದಾ ಕನ್ನೆಗಾಲ ಗುಂಡ್ಲುಪೇಟೆ

error: